ಹೆಬ್ಳೀಕರ್‌ ರಿಟರ್ನ್ಸ್! ಚಿಂತನ ಮಂಥನ


Team Udayavani, Feb 17, 2017, 3:45 AM IST

Mana-Manthana-(19).jpg

“ಡಾ. ಅಶೋಕ್‌ ಪೈ ತುಂಬಾ ಇಷ್ಟಪಟ್ಟು ನಿರ್ಮಿಸಿದ ಸಿನಿಮಾವಿದು. ಅವರೊಂದಿಗೆ ಇದು ನನ್ನ ನಾಲ್ಕನೇ ಚಿತ್ರ. ಯುರೋಪ್‌ನಿಂದ ಫೋನ್‌ ಮಾಡಿ, “ಸಿನಿಮಾವನ್ನು ನಾನು ಬಂದ ಮೇಲೆ ರಿಲೀಸ್‌ ಮಾಡೋಣ’ ಅಂತ ಹೇಳಿದ್ದರು. ಆದರೆ, ಅವರು ಅಲ್ಲೇ ಕೊನೆಯುಸಿರೆಳೆದರು. ಹೀಗಾಗಿ ಸಿನಿಮಾ ರಿಲೀಸ್‌ ಆಗೋದು ಸ್ವಲ್ಪ ತಡವಾಯ್ತು …’ ಹೀಗೆ ಹೇಳಿ ಕ್ಷಣ ಕಾಲ ಮೌನಕ್ಕೆ ಶರಣಾದರು ನಿರ್ದೇಶಕ ಕಮ್‌ ನಟ ಸುರೇಶ್‌ ಹೆಬ್ಳೀಕರ್‌.

ಅವರು ಮಾತನಾಡಿದ್ದು “ಮನ ಮಂಥನ’ ಚಿತ್ರದ ಬಗ್ಗೆ. “ಕಳೆದ ಒಂದೂವರೆ ದಶಕದ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಹಾಗಾಗಿ, ಒಳ್ಳೆಯ ವಿಷಯದೊಂದಿಗೇ ಪುನಃ ಬಂದಿದ್ದೇನೆ. ಇದು ಬದುಕಿನಲ್ಲಿರುವ ಕೆಲ ಸತ್ಯ ಘಟನೆಗಳನ್ನಾಧರಿಸಿದ ಚಿತ್ರ. ಈಗಿನ ಯುವಕರ ಬಯಕೆ, ಕನಸು ಮತ್ತು ಅವರ ಚಿಂತನೆ ಮಾರ್ಗ, ಭವಿಷ್ಯ ಇವೆಲ್ಲವೂ ಪೋಷಕರಿಗೆ ಅರ್ಥ ಆಗೋದು ಕಷ್ಟ. ಅಂತಹ ಅರ್ಥವಾಗುವ ಅವಕಾಶದ ವಂಚನೆಯೇ ಒಂದು ರೀತಿಯ ಸಂತಾಪ ಮತ್ತು ಘರ್ಷಣೆಗೆ ಕಾರಣ. ಇಂತಹ ಹಲವು ಸನ್ನಿವೇಶಗಳು ಚಿತ್ರದಲ್ಲಿ ಕಾಣಸಿಗುತ್ತವೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಎಳೆಯೇ ಚಿತ್ರದ ಹೈಲೆಟ್‌ …’

“ಗ್ಯಾಪ್‌ ಬಳಿಕ ಮಾಡಿದ ಸಿನಿಮಾವಾದ್ದರಿಂದ ತಂಬಾ ಗಂಭೀರ ವಿಷಯದ ಜತೆಯಲ್ಲಿ, ಸಂದೇಶ ಸಾರುವ ಅಂಶಗಳೂ ಇವೆ. ಅಶೋಕ್‌ ಪೈ ಅವರೇ ಕೊಟ್ಟ ಕಥೆಗೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರೂ ನೈಜವಾಗಿ ಅಭಿನಯಿಸಿರುವುದು ಚಿತ್ರದ ಪ್ಲಸ್‌. ಇದೊಂದು ಚಿಕ್ಕ ಬಜೆಟ್‌ ಚಿತ್ರವಾದರೂ, ಈಗಿನ ಯೂತ್ಸ್ಗಿರುವ ತಳಮಳ, ಪೋಷಕರಲ್ಲಿರುವ ಆತಂಕ ಇತ್ಯಾದಿಗಳನ್ನು ಬಿಚ್ಚಿಡುವ ಮೂಲಕ ಒಂದಷ್ಟು ಪರಿಹಾರ ಸೂಚಿಸುವ ಅಂಶಗಳನ್ನು ಹೊಂದಿದೆ’ ಎನ್ನುತ್ತಾರೆ ಸುರೇಶ್‌ ಹೆಬ್ಳೀಕರ್‌.

ರಮೇಶ್‌ ಭಟ್‌ಗೆ ಹೆಬ್ಳೀಕರ್‌ ಜತೆ ಸಮಾರು ನಾಲ್ಕು ದಶಕದ ಪಯಣವಂತೆ. “ಇಲ್ಲಿ ಎಲ್ಲವೂ ಒಳಗೊಂಡಿದೆ. ಇಲ್ಲಿ ಹೀರೋ ಇಪ್ಪತ್ತು ಜನರಿಗೆ ಹೊಡೆದುರುಳಿಸಲ್ಲ. ಐಟಂ ಸಾಂಗ್‌ ಇಲ್ಲ. ಗ್ಲಾಮರ್‌ ಇಲ್ಲ. ಹೆವಿ ಮೆಲೋಡ್ರಾಮವೂ ಇಲ್ಲ. ಒಂದು ಸಹಜವಾದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಒಂದು ಚೌಕಟ್ಟಿನಲ್ಲಿ ನನ್ನ ಪಾತ್ರವಿದೆ. ಅದಕ್ಕೆ ಸರ್ಕಾರಿ ಮುದ್ರೆಯೂ ಬಿದ್ದಿದೆ. ಅಭಿನಯಕ್ಕೆ ಅವಾರ್ಡ್‌ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದರು ರಮೇಶ್‌ಭಟ್‌.

ಹೀರೋ ಕಿರಣ್‌ ರಜಪೂತ್‌ಗೆ ಇದು ಮೊದಲ ಸಿನಿಮಾ. ಧಾರವಾಡ ಮೂಲದ ಕಿರಣ್‌ ರಜಪೂತ್‌ ಒಮ್ಮೆ, ಹೆಬ್ಳೀಕರ್‌ ಅವರನ್ನು ಭೇಟಿ ಮಾಡಿ, ಸಿನಿಮಾ ಆಸೆ ಹೇಳಿಕೊಂಡಿದ್ದರಂತೆ. ಆಗ, ಓಕೆ ಅಂದಿದ್ದರಂತೆ ಹೆಬ್ಳೀಕರ್‌, ಏನೋ ಒಂದು ಸಣ್ಣ ಪಾತ್ರ ಕೊಡ್ತಾರೆ ಅಂದುಕೊಂಡ ರಜಪೂತ್‌ಗೆ, ಹೀರೋ ಅವಕಾಶ ಕೊಟ್ಟಿದ್ದಕ್ಕೆ ಇನ್ನಿಲ್ಲದ ಖುಷಿ ಇದೆ. ಅವರಿಗಿಲ್ಲಿ ಮುಗ್ಧ ಹುಡುಗನ ಪಾತ್ರವಂತೆ.

ಅರ್ಪಿತ ಸಿನಿಮಾದ ನಾಯಕಿ. ಅವರಿಗೂ ಇಲ್ಲಿ ಮುಗ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಹಿರಿಯ ನಟಿ ಸಂಗೀತ ಅವರಿಗೆ ಹೆಬ್ಳೀಕರ್‌ ಜತೆ ಮೊದಲ ಸಿನಿಮಾವಂತೆ. ಅವರಿಂದ ಸಾಕಷ್ಟು ಕಲಿತಿದ್ದುಂಟು. ಸೆಟ್‌ನಲ್ಲಿ ಒಳ್ಳೆಯ ವಾತಾವರಣ ಇತ್ತು’ ಎಂದರು ಸಂಗೀತ.

ಟಾಪ್ ನ್ಯೂಸ್

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.