ರಾಮಕ್ಕನ ಮೀಸಲಾತಿ ಪಾಲಿಟಿಕ್ಸ್!
Team Udayavani, Sep 1, 2017, 6:40 AM IST
ದೇವರಾಜ್ ಹಾಗೂ ತಾರಾ ಬಹಳ ವರ್ಷಗಳ ಬಳಿಕ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಂತ, ಅದು ಕಮರ್ಷಿಯಲ್ ಸಿನಿಮಾ ಅಂತಂದುಕೊಳ್ಳುವಂತಿಲ್ಲ. ಜಗತ್ತಿನ ವಾಸ್ತವತೆಯನ್ನು ಬಿಂಬಿಸುವ ಚಿತ್ರದ ಮೂಲಕ ಮತ್ತೆ
ಜೋಡಿಯಾಗಿದ್ದಾರೆ. ಆ ಚಿತ್ರಕ್ಕೆ “ಹೈಲೈಟ್ ರಾಮಕ್ಕ’ ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದಟಛಿರಾಮಯ್ಯ ಅವರು ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಚಿತ್ರಕ್ಕೆ
ನಂಜುಂಡೇಗೌಡ ನಿರ್ದೇಶಕರು. ಪುಟ್ಟರಾಜು ನಿರ್ಮಾಪಕರು. ಶೀರ್ಷಿಕೆಯೇ ಹೇಳುವಂತೆ, ಇದು ಮಹಿಳೆ ಸುತ್ತ ಸಾಗುವ ಕಥೆ. ರಾಜ್ಯದಲ್ಲಿ ಮಹಿಳಾ ಮೀಸಲಾತಿ ಎಷ್ಟರಮಟ್ಟಿಗೆ ವಕೌìಟ್ ಆಗುತ್ತಿದೆ, ಪಂಚಾಯತ್ ರಾಜ್
ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಸರಿಯಾಗಿ ಸದ್ಬಳಕೆಯಾಗುತ್ತಾ, ಆನಕ್ಷರಸ್ಥ ಮಹಿಳೆಯರು
ಚುನಾವಣೆಯಲ್ಲಿ ಗೆದ್ದು ಆ ಸ್ಥಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ವಿಷಯ ಇಟ್ಟುಕೊಂಡು ಕಥೆ ಮಾಡಿದ್ದಾರಂತೆ
ನಿರ್ದೇಶಕರು. ಮುಖ್ಯಮಂತ್ರಿ ಸಿದಟಛಿರಾಮಯ್ಯ ಅವರು ಅಂದು ಕ್ಲಾಪ್ ಮಾಡಿ, “ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಹ ಸಿನಿಮಾಗಳು ಬರಬೇಕು. ಸಾಮಾಜಿಕ ಸಮಸ್ಯೆಗಳನ್ನು ಹೇಗೆಲ್ಲಾ ನಿವಾರಿಸಬಹುದು ಎಂಬುದನ್ನಿಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಚಿತ್ರ ಯಶಸ್ವಿ ಆಗಲಿ’ ಆಂತ ಶುಭ ಹಾರೈಸಿದರು.
ನಂಜುಂಡೇಗೌಡ ಅವರು “ನಾನು ಗಾಂಧಿ’ ನಂತರ ಈ ಚಿತ್ರ ಮಾಡುತ್ತಿದ್ದಾರೆ. “ಸಾಮಾಜಿಕ ಕಾಳಜಿ ಇಟ್ಟುಕೊಂಡು
ಹೆಣೆದಿರುವ ಈ ಕಥೆಯಲ್ಲಿ ಮಹಿಳಾ ಮೀಸಲಾತಿ ಕುರಿತ ವಿಷಯ ಹೈಲೈಟ್. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ
ಹೇಗೆಲ್ಲಾ ತನ್ನ ಪ್ರಾಮಾಣಿಕತೆಯಿಂ¨ ಚುನಾಯಿತ ಸ್ಥಾನಕ್ಕೆ ಧಕ್ಕೆಯಾಗದ ರೀತಿ ಕೆಲಸ ಮಾಡುತ್ತಾಳೆ ಎಂಬುದನ್ನಿಲ್ಲಿ
ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ.
ದೇವರಾಜ್, ತಾರಾ ಜತೆಗೆ ರಂಗಭೂಮಿಯ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ’ ಅಂತ ವಿವರ ಕೊಡುತ್ತಾರೆ ನಿರ್ದೇಶಕ ನಂಜುಂಡೇಗೌಡ. ದೇವರಾಜ್ ಅವರಿಗೆ ಪುನಃ ಹಳೇ ಸ್ಕೂಲ್‌ಗೆ ಬಂದ ಅನುಭವ ಆಗಿದೆಯಂತೆ. ಈ ಹಿಂದೆ
ನಂಜುಂಡೇಗೌಡ ಅವರ ಜತೆ “ವೀರಭದ್ರ’ ಚಿತ್ರ ಮಾಡಿದ್ದ ದೇವರಾಜ್‌ಗೆ ಮತ್ತೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆಯಂತೆ. ಇದೊಂದು ಈಗಿನ ಕಾಲದ ಕಥೆಯಾದರೂ, ವಿಶೇಷವಾಗಿದೆ ಎನ್ನತ್ತಾರೆ ದೇವರಾಜ್. ತಾರಾ ಅವರಿಗೆ ಈ ಪಾತ್ರ ಸಿಕ್ಕಿದ್ದು ಅದೃಷ್ಟವಂತೆ. ಇಂತಹ ಪಾತ್ರಕ್ಕೆ ಯಾವುದೇ ತಯಾರಿ ಬೇಕಿಲ್ಲ. ಹತ್ತಿರದಿಂದ ನೋಡಿರುವ ಪಾತ್ರಗಳು ಸಾಕಷ್ಟು ಇವೆ. ಹಾಗಾಗಿ, ಸಿನಿಮಾದೊಳಗಿನ ಪಾತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಇದೊಂದು ಹೊಸಬಗೆಯ ಚಿತ್ರವಾಗಲಿದೆ ಎಂಬುದು ತಾರಾ ಮಾತು. ಕನ್ನಡ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಿದಟಛಿರಾಮಯ್ಯ ಸಾಹಿತ್ಯ, ಸಂಭಾಷಣೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.
– ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.