ಚಿತ್ರತಂಡದ ಮೊಗದಲ್ಲಿ ಮನೆ ಮಾರಾಟದ ಸಂಭ್ರಮ
Team Udayavani, Nov 15, 2019, 5:28 AM IST
“ನಿರ್ಮಾಪಕ, ನಿರ್ದೇಶಕರಿಬ್ಬರೂ ಮನೆ ಮಾರಾಟಕಿಟ್ಟಿದ್ದಾರೆ. ಮನೆ ಮಾರುವ ಕೆಲಸವನ್ನು ನಾಲ್ಕು ಜನರಿಗೆ ವಹಿಸಿದ್ದಾರೆ. ಒಳ್ಳೆಯ ರೇಟ್‌ಗೆ ಮನೆ ಮಾರಾಟ ಆಗುತ್ತೆ ಎಂಬ ನಂಬಿಕೆ ನನಗಿದೆ…’
– ಇದು ಚಿಕ್ಕಣ್ಣ ಹೇಳಿದ ಮಾತು. ಅವರು ಹೇಳಿದ್ದು, “ಮನೆ ಮಾರಾಟಕ್ಕಿದೆ’ ಸಿನಿಮಾ ಬಗ್ಗೆ. ಇಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್ ಗೌಡ ಹಾಗು ಕುರಿ ಪ್ರತಾಪ್ ಇದ್ದಾರೆ. ಈ ನಾಲ್ವರು ಹಾಸ್ಯ ಕಲಾವಿದರನ್ನು ಇಟ್ಟುಕೊಂಡು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ. ಎಸ್.ವಿ.ಬಾಬು ಅದ್ಧೂರಿಯಾಗಿಯೇ ಸಿನಿಮಾ ಮಾಡಿದ್ದಾರೆ. ಆ ಕುರಿತು ಹೇಳಿಕೊಂಡ ಚಿಕ್ಕಣ್ಣ, “ನಿರ್ಮಾಪಕ ಎಸ್.ವಿ.ಬಾಬು ಅವರು ಒಳ್ಳೆಯ ಮನೆ ಮಾಡಿದ್ದಾರೆ. ಈಗ ಅದನ್ನು ಮಾರಾಟಕ್ಕಿಟ್ಟಿದ್ದಾರೆ. ನಾಲ್ವರು ಮನೆ ಮಾರುವ ಜವಾಬ್ದಾರಿ ವಹಿಸಿದ್ದೇವೆ. ಒಳ್ಳೆಯ ರೇಟ್‌ಗೆ ಪ್ರೇಕ್ಷಕರು ಖರೀದಿಸುತ್ತಾರೆ ಎಂಬ ನಂಬಿಕೆ ಇದೆ. ಇದು ಹಾರರ್ ಸಿನಿಮಾ ಎನಿಸಿದರೂ, ನಗಿಸುತ್ತಲೇ ಚೂರು ಮಾತ್ರ ಭಯಪಡಿಸುತ್ತದೆ. ಕುಟುಂಬ ಸಮೇತ ನೋಡುವ ಚಿತ್ರವಿದು’ ಎಂದರು ಚಿಕ್ಕಣ್ಣ. ನಿರ್ದೇಶಕ ಮಂಜು ಸ್ವರಾಜ್ ಅವರಿಗೆ ಇದೊಂದು ಒಳ್ಳೆಯ ಚಿತ್ರ ಆಗುತ್ತೆ ಎಂಬ ನಂಬಿಕೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಪ್ರತಿಯೊಬ್ಬರೂ ಇಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನೋಡುಗರಿಗೆ ಮಜ ಎನಿಸುವ ಅಂಶಗಳು ತುಂಬಿವೆ ಎಂದರು.ನಿರ್ಮಾಪಕ ಎಸ್.ವಿ.ಬಾಬು ಅವರು “ಸಿನಿಮಾ ನೋಡಿದ್ದೇನೆ. ಖುಷಿಯಾಗಿದೆ. ನಾಲ್ವರು ಹಾಸ್ಯ ದಿಗ್ಗಜರನ್ನು ಇಟ್ಟುಕೊಂಡು ಸಿನಿಮಾ ಮಾಡಿದ ನಿರ್ದೇಶಕರ ಸಾಹಸ ಮೆಚ್ಚಬೇಕು. ಕಾಮಿಡಿ ಹಾರರ್ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಗ್ಯಾರಂಟಿ ಕೊಡ್ತೀನಿ’ ಎಂದರು ಎಸ್.ವಿ.ಬಾಬು.
ಹಾಸ್ಯ ನಟ ರವಿಶಂಕರ್ ಗೌಡ, “ನಿರ್ಮಾಪಕರಿಂದ ಸಿನಿಮಾ ಚೆನ್ನಾಗಿದೆ ಎಂಬ ಮಾತು ಕೇಳಿ ಖುಷಿಯಾಯ್ತು. ನಮ್ಮ ಪ್ರಯತ್ನ ಮಾಡಿದ್ದೇವೆ. ಅವರ ಮಾತಿನಿಂದ ಯಶಸ್ಸು ಸಿಕ್ಕಿದೆ. ನಿರ್ಮಾಪಕ, ನಿರ್ದೇಶಕರಿಗೆ ನಮ್ಮ ಕೆಲಸ ಇಷ್ಟವಾದರೆ ಸಾಕು. ಈಗಾಗಲೇ ಟ್ರೇಲರ್ ನೋಡಿದವರು ಮೆಚ್ಚಿದ್ದಾರೆ. ಸಾಂಗ್ಸ್‌ಗೂ ಒಳ್ಳೆಯ ಮೆಚ್ಚುಗೆ ಇದೆ. ಕಾಮಿಡಿ ಸಿನಿಮಾ ನಿರೀಕ್ಷೆ ಜಾಸ್ತಿ. ನಿರೀಕ್ಷೆ ಇಟ್ಟು ಬಂದಾಗ, ತೃಪ್ತಿ ಗ್ಯಾರಂಟಿ. ಕೊಟ್ಟ ಕಾಸಿಗೆ ಮೋಸ ಆಗಲ್ಲ. ಬೆಂಬಲ, ಪ್ರೀತಿ ಇರಲಿ’ ಎಂದರು ರವಿಶಂಕರ್ ಗೌಡ.
ರಾಜೇಶ್ ನಟರಂಗ ಅವರಿಗಿಲ್ಲಿ ಹೊಸಬಗೆಯ ಪಾತ್ರ ಸಿಕ್ಕಿದೆಯಂತೆ. ಜನರನ್ನು ಥಿಯೇಟರಿಗೆ ಕರೆದುಕೊಂಡು ಬರುವ ಕೆಲಸವನ್ನು ಶೀರ್ಷಿಕೆ ಮಾಡಿದೆ. ಜನರನ್ನು ಖುಷಿಪಡಿಸುವ ಕೆಲಸವನ್ನು ನಾಲ್ವರು ಹಾಸ್ಯ ಕಲಾವಿದರು ಮಾಡಲಿದ್ದಾರೆ ಎಂದರು. “ಟಿಕ್‌ಟಾಕ್’ ಸ್ಟಾರ್ ಬೇಬಿ ಅಶ್ವಿತ, ನಟಿ ಕಾರುಣ್ಯ ರಾಮ್, ಸಂಗೀತ ನಿರ್ದೇಶಕ ಅಭಿಮನ್ ರಾಯ್, ಛಾಯಾಗ್ರಾಹಕರ ಸುರೇಶ್ ಬಾಬು, ಸಂಕಲನಕಾರ ವಿಶ್ವ, ಹಾಸ್ಯ ನಟ ಸದಾನಂದ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.