ರಾಬರ್ಟ್ ಮೇಲೆ ಆಶಾ ಭಾವನೆ
ನವನಟಿಯ ಕಣ್ತುಂಬ ಕನಸು...
Team Udayavani, Jan 31, 2020, 5:50 AM IST
ಸ್ಟಾರ್‌ಗಳ ಸಿನಿಮಾ ಮೂಲಕ ಎಂಟ್ರಿಕೊಡುವ ನಾಯಕಿ ನಟಿಯರ ಭವಿಷ್ಯದ ಕನಸು ಕೂಡಾ ದೊಡ್ಡದಾಗಿರುತ್ತದೆ. ಅದಕ್ಕೆ ಕಾರಣ ತಾವು ಲಾಂಚ್ ಆಗುತ್ತಿರುವ ಸಿನಿಮಾ. ಚಿತ್ರರಂಗದಲ್ಲೊಂದು ನಂಬಿಕೆ ಇದೆ. ಅದೇನೆಂದರೆ ಸ್ಟಾರ್ ಸಿನಿಮಾ ಮೂಲಕ ಲಾಂಚ್ ಆದ ನಾಯಕಿ ನಟಿಯರು ಮುಂದೆ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರುತ್ತಾರೆ ಎಂಬ ವಿಶ್ವಾಸ. ಅದಕ್ಕೆ ಪೂರಕವಾಗಿ ಸ್ಟಾರ್ ಸಿನಿಮಾ ಮೂಲಕ ಪರಿಚಯವಾದ ನಾಯಕಿಯರು ಚಿತ್ರರಂಗದಲ್ಲಿ ಬಿಝಿಯಾಗಿದ್ದಾರೆ ಕೂಡಾ. ಈಗ ಈ ಮಾತು ಯಾಕೆ ಎಂದರೆ ಅದಕ್ಕೆ ಕಾರಣ “ರಾಬರ್ಟ್’. ದರ್ಶನ್ ನಾಯಕರಾಗಿರುವ “ರಾಬರ್ಟ್’ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣಲಿದೆ. ಈ ಸಿನಿಮಾ ಮೂಲಕ ನಾಯಕಿಯೊಬ್ಬರು ಕನ್ನಡಕ್ಕೆ ಲಾಂಚ್ ಆಗುತ್ತಿದ್ದಾರೆ. ಆ ನಟಿ ಆಶಾ ಭಟ್.
ರಾಬರ್ಟ್’ ಚಿತ್ರಕ್ಕೆ ಆಶಾ ಭಟ್ ಎಂಬ ಹೊಸ ಹುಡುಗಿ ನಾಯಕಿಯಾಗಿ ಆಯ್ಕೆಯಾ ಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಮೂಲತಃ ಭದ್ರಾವತಿ ಹುಡುಗಿ ಈಕೆ. 2014ರ ಮಿಸ್ ಸುಪ್ರಾ ನ್ಯಾಶನಲ್ ಪ್ರಶಸ್ತಿ ವಿಜೇತೆ ಯಾದ ಆಶಾ ಭಟ್, ಈಗಾಗಲೇ ಹಿಂದಿಯಲ್ಲಿ “ಜಂಗ್ಲಿ’ ಎಂಬ ಚಿತ್ರ ಮಾಡಿ ಕೊಂಚ ಅನುಭವ ಪಡೆದಿದ್ದಾರೆ. ಕನ್ನಡದ ಸ್ಟಾರ್ ನಟ ದರ್ಶನ್ ಜೊತೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಿಗ್ ಎಂಟ್ರಿ ಕೊಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕನ್ನಡದ ಮೊದಲ ಚಿತ್ರ ಇದಾಗಿದ್ದು, ಕನ್ನಡದಲ್ಲೇ ನೆಲೆ ಕಾಣುವ ಆಸೆ ಈ ಕನಸು ಕಂಗಳ ಚೆಲುವೆಯದ್ದು. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತದಲ್ಲಿರುವ ಈ ಚಿತ್ರದ ಮೇಲೆ ಆಶಾ ಭಟ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಈಗಾಗಲೇ ಬಿಡುಗಡೆ ಯಾಗಿರುವ ಫಸ್ಟ್‌ಲುಕ್, ಟೀಸರ್ ಮೂಲಕ ಸಿನಿಮಾದ ನಿರೀಕ್ಷೆ ಕೂಡಾ ಹೆಚ್ಚಿದೆ. ಈ ತರಹದ ಬಹುನಿರೀಕ್ಷಿತ ಚಿತ್ರಗಳ ಮೂಲಕ ಲಾಂಚ್ ಆದರೆ, ಮುಂದೆ ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿ ಸುತ್ತದೆ ಎಂಬ ನಂಬಿಕೆ ಕೂಡಾ ಅವರಿಗಿದೆ.
ಆರಂಭದಲ್ಲಿ “ರಾಬರ್ಟ್’ ಚಿತ್ರಕ್ಕೆ ತೆಲುಗು ಮೂಲದ ಸ್ಟಾರ್ ನಟಿಯೊಬ್ಬಳು ನಾಯಕಿಯಾಗಲಿದ್ದಾರೆ. ತಮಿಳು ನಾಯಕಿಯೊಬ್ಬರು ಬರಲಿದ್ದಾರಂತೆ, ಹಾಗಂತೆ, ಹೀಗಂತೆ ಎಂಬ ಸುದ್ದಿಗಳೇ ಹರಡಿದವು. ಆದರೆ, ಅದ್ಯಾವುದೂ ಪಕ್ಕಾ ಆಗಲಿಲ್ಲ. ಕೊನೆಗೆ ಅಪ್ಪಟ ಕನ್ನಡತಿಯಾಗಿ “ರಾಬರ್ಟ್’ ತಂಡಕ್ಕೆ ಎಂಟ್ರಿಕೊಟ್ಟವರು ಆಶಾ. ಇನ್ನು, ಆಶಾ ಈಗಾಗಲೇ ಅಭಿಮಾನಿಗಳ ಜೊತೆ ತಮ್ಮ ತಮ್ಮ ಸಿನಿಮಾ ಅನಿಸಿಕೆಗಳನ್ನು ಕೂಡಾ ಹಂಚಿಕೊಳ್ಳಲಾರಂಭಿಸಿದ್ದಾರೆ. ಸಿನಿಮಾ ತಂಡದ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಹಾಕಿ, “ನಾವು ಏನು ಮಾತನಾಡುತ್ತಿರಬಹುದೆಂದು ಊಹಿಸಿ’ ಎಂದು ಟ್ಯಾಗ್‌ಲೈನ್ ಬೇರೆ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾ ಬಿಡುಗಡೆಗೆ ಮುಂಚೆಯೇ ಅಭಿಮಾನಿಗಳ ಜೊತೆ ಆ್ಯಕ್ಟೀವ್ ಆಗಿದ್ದಾರೆ ಆಶಾ ಭಟ್.
ಇನ್ನು ದರ್ಶನ್ “ರಾಬರ್ಟ್’ ಚಿತ್ರದಲ್ಲಿ ಹನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಮೋಶನ್ ಪೋಸ್ಟರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ದರ್ಶನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯ ಗೆಟಪ್‌ನಲ್ಲಿ ದರ್ಶನ್ ಕಾಣಿಸಿಕೊಂಡರೆ, ಹೆಗಲ ಮೇಲೆ “ಬಾಲ’ರಾಮನಾಗಿ ಮುಂಬೈ ಹುಡುಗ ಕಾಣಿಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.