ಹಾರರ್ ದೇವಯಾನಿ
Team Udayavani, Mar 15, 2019, 12:30 AM IST
ಕನ್ನಡ ಚಿತ್ರರಂಗಕ್ಕೆ ಈಗಂತೂ ದಿನಕಳೆದಂತೆ ಪರಭಾಷಿಗರ ಆಗಮನ ಹೆಚ್ಚಾಗುತ್ತಲೇ ಇದೆ. ಆ ಸಾಲಿಗೆ ಇದೀಗ “ದೇವಯಾನಿ’ ಚಿತ್ರವೂ ಸೇರಿದೆ. ತೆಲುಗು ಮಂದಿ ಅಲ್ಲಿಂದ ಇಲ್ಲಿಗೆ ಬಂದು ನಿರ್ಮಾಣಕ್ಕಿಳಿದಿದ್ದಾರೆ. ಈಗಾಗಲೇ ಒಂದಷ್ಟು ಚಿತ್ರೀಕರಣ ನಡೆಸಿರುವ ಚಿತ್ರತಂಡ, ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಮಾಧ್ಯಮ ಮುಂದೆ ಬಂದಿತ್ತು. ಚಿತ್ರಕ್ಕೆ ಕಸ್ತೂರಿ ಜಗನ್ನಾಥ ನಿರ್ದೇಶಕರು. ಚಿತ್ರಕಥೆ, ಸಂಭಾಷಣೆ ಇವರೇ ಬರೆದಿದ್ದಾರೆ. ಇನ್ನು, ನಿರ್ಮಾಪಕ ಟಿ.ಸುಲ್ತಾನ್ ಈ ಚಿತ್ರದ ಕಥೆ ಬರೆದಿದ್ದಾರೆ. ತೆಲುಗಿನಲ್ಲಿ ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿರುವ ಸುಲ್ತಾನ್, ಅಲ್ಲಿನ ಪ್ರತಿಷ್ಠಿತ ನಂದಿ ಅವಾರ್ಡ್ ಕೂಡ ಪಡೆದಿದ್ದಾರೆ. ಕನ್ನಡ ಚಿತ್ರ ನಿರ್ಮಾಣ ಮಾಡುವ ಮನಸ್ಸು ಮಾಡಿ, “ದೇವಯಾನಿ’ ಹಿಂದೆ ನಿಂತಿದ್ದಾರೆ.
ನಿರ್ದೇಶಕ ಕಸ್ತೂರಿ ಜಗನ್ನಾಥ್ ಅವರಿಗೆ ಇದು ಎರಡನೇ ಚಿತ್ರ. ಹಿಂದೆ “ಸಮಾಗಮ’ ಚಿತ್ರ ಮಾಡಿದ್ದರು. ಚಿತ್ರದ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕರು, “ಇದು ಹಾರರ್ ಚಿತ್ರ. ಆತ್ಮಗಳ ಅಂತರಾಳ ಕುರಿತಾದ ಕಥೆ ಇಲ್ಲಿದೆ. ಚಿತ್ರದ ನಾಯಕ ಆತ್ಮಗಳ ಕುರಿತಂತೆ ಪಿಎಚ್‌ಡಿ ಮಾಡಲು ಹೊರಡುತ್ತಾನೆ. ಕೊನೆಗೆ ಅವನೇ ಪರಕಾಯ ಪ್ರವೇಶ ಮಾಡುತ್ತಾನೆ. ಅಂದರೆ, ತನ್ನ ದೇಹ ಬದಿಗೊತ್ತಿ, ಆತ್ಮವಾಗಿ ಹೊರಬರುತ್ತಾನೆ. ಇಲ್ಲಿ ಕೆಟ್ಟದ್ದನ್ನು ಮಾಡಿದರೆ ಸಾವೊಂದೇ ಪರಿಹಾರ ಅಲ್ಲ ಎಂಬ ವಿಷಯ ಹೇಳಲಾಗಿದೆ. ಇಲ್ಲೂ ಪ್ರೀತಿ, ಪ್ರೇಮ, ಎಮೋಷನಲ್ ಮತ್ತು ಅಲ್ಲಲ್ಲಿ ಹಾಸ್ಯ ಮೇಳೈಸಿದೆ’ ಎಂಬುದು ನಿರ್ದೇಶಕರ ಮಾತು.
ಚಿತ್ರಕ್ಕೆ ಕಥೆ ಬರೆದ ನಿರ್ಮಾಪಕ ಸುಲ್ತಾನ್ ಅವರು, “ಭಾರತೀಯ ಸಂಪ್ರದಾಯದಲ್ಲಿ ದೇವರು, ದೆವ್ವ, ಭೂತ, ಆತ್ಮ ಎಲ್ಲವನ್ನೂ ನಂಬುವವರಿದ್ದಾರೆ. ನಂಬದವರೂ ಇದ್ದಾರೆ. ಇಲ್ಲಿ ಆತ್ಮಗಳ ಸುತ್ತ ಕಥೆ ಸಾಗಲಿದೆ. ಇಬ್ಬರು ಗೆಳೆಯರ ನಡುವೆ ನಡೆಯುವಂತಹ ಕಥೆ ಇದು. ಕನ್ನಡದಲ್ಲಿ ಈ ರೀತಿಯ ಕಥೆ ಇದ್ದರೂ, ಇಲ್ಲಿ ಹೊಸ ನಿರೂಪಣೆಯೊಂದಿಗೆ ಮೂಡಿ ಬರಲಿದೆ’ ಎಂದರು ಸುಲ್ತಾನ್.
ಚಿತ್ರದ ನಾಯಕ ಗೋಪಿಕೃಷ್ಣ ಅವರಿಗೆ ಇದು ಮೊದಲ ಚಿತ್ರ. ಈಗಷ್ಟೇ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಗೋಪಿಕೃಷ್ಣ ಅವರಿಲ್ಲಿ, ಆತ್ಮವಾಗಿ ಯಾರ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬ ಪಾತ್ರ ಸಿಕ್ಕಿದ್ದು, ಎರಡು ದಿನಗಳ ಪಾತ್ರ ಮಾಡಿದ್ದು, ಮುಂದೆ ಕಥೆ ಏನು, ಪಾತ್ರ ಯಾವ ರೀತಿ ಹೋಗುತ್ತದೆ ಎಂಬುದು ಗೊತ್ತಾಗಲಿದೆ. ಸದ್ಯಕ್ಕೆ ನನ್ನ ಬಳಿ ಇರುವ ಮಾಹಿತಿ ಇಷ್ಟೇ’ ಎಂದು ಹೇಳಿ ಸುಮ್ಮನಾದರು.
ಚಿತ್ರದಲ್ಲಿ ಇಬ್ಬರು ನಾಯಕಿಯರು. ಆ ಪೈಕಿ ರಾಗ ಇಲ್ಲಿ ಡಾಕ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ನಾಯಕನನ್ನು ಪ್ರೀತಿಸುವುದರ ಜೊತೆಗೆ ಒಂದಷ್ಟು ಸೆಂಟಿಮೆಂಟ್ ಸೀನ್‌ಗಳಲ್ಲೂ ಕಾಣಿಸಿಕೊಳ್ಳುತ್ತೇನೆ ಅಂದರು. ಇನ್ನು, ಮತ್ತೂಬ್ಬ ನಾಯಕಿ ಅರ್ಚನಾ ಇಲ್ಲಿ ಶಾಸಕನ ಮಗಳಾಗಿ ನಟಿಸುತ್ತಿದ್ದು, “ಕಾಲೇಜು ಹುಡುಗಿಯಾಗಿ, ಅಲ್ಲಿ ಯಾರಿಗಾದರೂ ತೊಂದರೆಯಾದರೆ ಅವರ ಪರ ನಿಂತು ತೊಂದರೆ ಕೊಟ್ಟವರನ್ನು ಹೆದರಿಸುವ ಪಾತ್ರ ನನ್ನದು’ ಎನ್ನುತ್ತಾರೆ ಅರ್ಚನಾ. ಈ ಹಿಂದೆ ನಟ ಜನಾರ್ದನ್ ತಮ್ಮ ಹೆಸರನ್ನು ಅಮೋಘ… ಆಗಿ ಬದಲಿಸಿಕೊಂಡಿದ್ದರು. ಆದರೆ, ಈ ಚಿತ್ರದ ಮೂಲಕ ಅವರು ಅಭಿರಾಮ್ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದು, ಅವರಿಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರಂತೆ. ರಿಯಲ್ ಆಗಿ ಅವರಿಗೆ ದೆವ್ವ, ಭೂತದ ಮೇಲೆ ನಂಬಿಕೆ ಇಲ್ಲದಿದ್ದರೂ, ಸಿನಿಮಾವಾದ್ದರಿಂದ ಅದನ್ನು ನಂಬುವಂತಹ ಪಾತ್ರ ಮಾಡಿದ್ದಾರಂತೆ.
ಚಿತ್ರವನ್ನು ಮಂಜು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕುಮ್ಮಟ್ಟಿ ಶೇಷಾರೆಡ್ಡಿ ಮತ್ತು ಕುಮ್ಮಟ್ಟಿ ಸುಬ್ಬರಾಮಿ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಂ ಮೋಹನ್ ಸಂಗೀತವಿದೆ. ರವಿ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.