ಹಾರರ್ ಮನೆಯಲ್ಲಿ…
Team Udayavani, Jun 30, 2017, 12:05 PM IST
ಒಂದು ಹುಡುಗಿಯ ಕೆಂಪು ಕಣ್ಣುಗಳು, ಮುಂದೆ “ಗಾಯಿತ್ರಿ’ ಎಂಬ ಹೆಸರು, ರಕ್ತದಲ್ಲಿ ಬರೆದ ಅಕ್ಷರಗಳು … ಪೋಸ್ಟರ್ ನೋಡುತ್ತಿದ್ದಂತೆಯೇ ಇದು ಹಾರರ್ ಚಿತ್ರ ಎಂದು ಪತ್ರಕರ್ತರಿಗೆ ಗೊತ್ತಾಗಿ ಹೋಗಿತ್ತು. ಈಗಾಗಲೇ ಈ ವರ್ಷ ಎಷ್ಟು ಹಾರರ್ ಚಿತ್ರಗಳು ಬಿಡುಗಡೆಯಾಗಿವೆ ಎಂಬ ಲೆಕ್ಕ ಇಡುವುದನ್ನು ಮಾಧ್ಯಮದವರು ಬಿಟ್ಟಿದ್ದಾರೆ. ಏಕೆಂದರೆ, ಆ ಮಟ್ಟಿಗೆ ಹಾರರ್ ಚಿತ್ರಗಳು ಬಿಡುಗಡೆಯಾಗಿವೆ. ಈಗ ಆ ಸಾಲಿಗೆ ಇನ್ನೊಂದು ಸೇರಿದೆ. ಹೆಸರು “ಗಾಯಿತ್ರಿ’. ಚಿತ್ರ ಶುರುವಾಗಿದ್ದು ಯಾವಾಗ, ಮುಗಿದಿದ್ದು ಯಾವಾಗ ಎಂಬುದು ಗೊತ್ತಿಲ್ಲ.
ಈಗ ಆಡಿಯೋ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ಸದ್ಯದಲ್ಲೇ ಎಂದು ಹೇಳುವುದಕ್ಕೆ ಚಿತ್ರತಂಡ ಬಂದಿತ್ತು. ಈ ಚಿತ್ರವನ್ನು ಸತ್ಯ ಸಾಮ್ರಾಟ್ ಎನ್ನುವವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ. ಇನ್ನು ಕುಮಾರ್ ಮತ್ತು ಭಾರತಿ ಎನ್ನುವವರು ನಿರ್ಮಾಪಕರು. ರೋಹಿತ್, ಸ್ಮೈಲ್ ಶಿವು, ನಯನಾ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀರವಿ ಎನ್ನುವವರು ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಅವರೆಲ್ಲರ ಜೊತೆಗೆ ಆಡಿಯೋ ಹೊರತಂದಿರುವ ಲಹರಿ ವೇಲು ಮತ್ತು ಹೊಸ ವಾಣಿಜ್ಯ ಮಂಡಳಿಯ ಕೃಷ್ಣೇಗೌಡ ಸಹ ಇದ್ದರು.
ನಿರ್ದೇಶಕರು ಮೊದಲು ಮಾತಾಡಿದರು. ಅವರು ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ, ಅವರು ಮೆಚ್ಚಿಕೊಂಡು ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬಂದರಂತೆ. “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಹಾರರ್ ಚಿತ್ರ. ಒಂದು ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ಅವು ಮನಸ್ಸಿನ ಮೇಲೆ ಯಾವ ತರಹದ ಪರಿಣಾಮ ಬೀರುತ್ತದೆ ಎಂಬುದು ಕಥೆ. ಸಕಲೇಶಪುರ, ಚೆನ್ನೈ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ’ ಎಂದು ಅವರು ವಿವರ ಕೊಟ್ಟರು.
ಈ ಚಿತ್ರದ ಮೂಲಕ ರೋಹಿತ್ ಎನ್ನುವವರು ಹೀರೋ ಆಗುತ್ತಿದ್ದಾರೆ. “ಎಂಟು ವರ್ಷದಿಂದ ಡ್ರೈವರ್ ಆಗಿದ್ದೆ. ಈಗ ಕಲಾಸೇವೆ ಮಾಡುವುದಕ್ಕೆ ಅವಕಾಶ ಸೆಕ್ಕಿದೆ. ಚಿತ್ರ ಚೆನ್ನಾಗಿ ಬಂದಿದೆ. ಒಂದು ಘಟನೆ ಮೂವರು ಸ್ನೇಹಿತರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರುತ್ತವೆ ಎನ್ನುವುದೇ ಕಥೆ’ ಎಂದರು. ಇನ್ನು ಸದಾ ಸ್ಮೈಲ್ ಮಾಡುತ್ತಲೇ ಇದ್ದ ಶಿವು ಅದನ್ನೇ ಅನುಮೋದಿಸಿದರು. ಇನ್ನು ನಾಯಕಿ ನಯನಾ ಕೃಷ್ಣ ಒಂದು ಹಾಡಿಗೆ ನೃತ್ಯ ಮಾಡಿದ್ದಾರೆ.
“ಹಾಡು ಕಳಿಸಿದ್ದರು. ಇಂಪ್ರಸಿವ್ ಎನಿಸಿತ್ತು. ಚಿತ್ರೀಕರಣಕ್ಕೆ ಹೋದಾಗ ಬಹಳ ನಾರ್ಮಲ್ ಅನುಭವ ಆಗಿತ್ತು. ಹಾಡು ಎಡಿಟ್ ಆದಮೇಲೆ, ಇದು ನಂದೇನಾ ಹಾಡು ಎನಿಸುವಷ್ಟು ಬದಲಾಗಿತ್ತು. ಹಾಡು ನೋಡಿ ಬೇಗ ಬಿಡುಗಡೆ ಮಾಡಿ ಅಂತ ನಿರ್ಮಾಪಕರಿಗೆ ಹೇಳಿದ್ದೆ. ಈಗ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು. ಕೃಷ್ಣೇಗೌಡ, ಚಿತ್ರಮಂದಿರಗಳಲ್ಲಿ ಶೇಕಡಾವಾರು ಪದ್ಧತಿ ಬಂದರೆ, ಸಣ್ಣ ನಿರ್ಮಾಪಕರು ಉಳಿದುಕೊಳ್ಳುತ್ತಾರೆ ಎಂದು ಹೇಳಿದರು. ಇನ್ನು ನಿರ್ಮಾಪಕರಿಗೆ ದುಡ್ಡು ಬರಲಿ ಎಂದು ಲಹರಿ ವೇಲು ಪ್ರಾರ್ಥಿಸಿದರು. ಅಷ್ಟಕ್ಕೇ ಪತ್ರಿಕಾಗೋಷ್ಠಿ ಮುಗಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.