Tatsama Tadbhava; ಮೊದಲ ಚಿತ್ರಕ್ಕಿಂತಲೂ ಹೆಚ್ಚು ಎಕ್ಸೈಟ್‌ ಆಗಿದ್ದೇನೆ…; ಮೇಘನಾ ರಾಜ್‌

Team Udayavani, Sep 8, 2023, 2:45 PM IST

meghana raj

“ತತ್ಸಮ ತದ್ಭವ’-ಸದ್ಯ ಟ್ರೇಲರ್‌ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಿದು. ಸೆ.15ರಂದು ತೆರೆಕಾಣುತ್ತಿರುವ ಈ ಸಿನಿಮಾದಲ್ಲಿ ಮೇಘನಾ ರಾಜ್‌ ನಟಿಸಿದ್ದಾರೆ. ಈ ಮೂಲಕ ನಟನೆಯಲ್ಲಿ ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಚಿತ್ರದಲ್ಲಿ ಆರಿಕಾ ಎಂಬ ಮಧ್ಯಮ ವರ್ಗದ ಹೆಣ್ಣಿನ ಪಾತ್ರದಲ್ಲಿ ನಟಿಸಿರುವ ಮೇಘನಾ ರಾಜ್‌ ಆ ಪಾತ್ರ, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ “ತತ್ಸಮ ತದ್ಭವ’ ಚಿತ್ರದ ಬಗ್ಗೆ ಮೇಘನಾ ಮಾತನಾಡಿದ್ದಾರೆ…

ಒಂದು ದೊಡ್ಡ ಗ್ಯಾಪ್‌ನ ನಂತರ ಬರುತ್ತಿದ್ದೀರಿ. ಹೇಗನಿಸುತ್ತಿದೆ?

ನಾನು ಕಂಬ್ಯಾಕ್‌ ಮಾಡಬೇಕು ಎಂಬ ಉದ್ದೇಶದಿಂದ ಮಾಡಿದ ಸಿನಿಮಾವಲ್ಲ. ತಾನಾಗಿ ತಾನೇ ಆದ ಸಿನಿಮಾ. ನಿಜ ಹೇಳಬೇಕೆಂದರೆ ನನಗೆ ನನ್ನ ಮೊದಲ ಸಿನಿಮಾ ಬಿಡುಗಡೆಯ ಹೊತ್ತಿನಲ್ಲೂ ಇಷ್ಟೊಂದು ನರ್ವಸ್‌ ಆಗಿರಲಿಲ್ಲ. ಆದರೆ, ಈಗ ಸೆಕೆಂಡ್‌ ಇನ್ನಿಂಗ್ಸ್‌ ಮಾಡುವ ಹೊತ್ತಿಗೆ ತುಂಬಾ ಭಯ ಹಾಗೂ ಎಕ್ಸೈಟ್‌ಮೆಂಟ್‌ ನಿಂದ ಇದ್ದೇನೆ.

ತತ್ಸಮ ತದ್ಭವದಲ್ಲಿ ನಿಮ್ಮ ಪಾತ್ರ?

ಆರಿಕಾ ಎಂಬ ಪಾತ್ರ ಮಾಡಿದ್ದೇನೆ. ತುಂಬಾ ಸಿಂಪಲ್‌ ಹುಡುಗಿ. ನಾರ್ಮಲ್‌ ಆಗಿ ಸಾಗುತ್ತಿರುವ ಆಕೆಯ ಲೈಫ್ನಲ್ಲೊಂದು ಘಟನೆ ನಡೆಯುತ್ತದೆ. ಅಲ್ಲಿಂದ ಆಕೆಯ ಬದುಕಿನ ಚಿತ್ರಣವೇ ಬದಲಾಗುತ್ತದೆ. ಮೇಲ್ನೋಟಕ್ಕೆ ನಾರ್ಮಲ್‌ ಆಗಿ ಕಾಣುವ ಪಾತ್ರವಾದರೂ ಸಾಕಷ್ಟು ಏರಿಳಿತಗಳೊಂದಿಗೆ ಸಾಗುತ್ತದೆ. ಕಂಬ್ಯಾಕ್‌ಗೆ ತುಂಬಾ ಒಳ್ಳೆಯ ಪಾತ್ರ ಅನಿಸಿತು.

ಈ ಚಿತ್ರ ನಿಮಗೆಷ್ಟು ಸ್ಪೆಷಲ್‌?

ಈ ಸಿನಿಮಾನಾ ಯಾವುದೋ ಒಂದು ಕಾರಣಕ್ಕೆ ಸ್ಪೆಷಲ್‌ ಎಂದು ಹೇಳ್ಳೋಕೆ ಆಗಲ್ಲ. ಏಕೆಂದರೆ ಇದು ನಮ್ಮ ಕನಸು. ಆಗಲೇ ಹೇಳಿದಂತೆ ಮೊದಲ ಚಿತ್ರಕ್ಕಿಂತಲೂ ಹೆಚ್ಚು ನಿರೀಕ್ಷೆ ಇದೆ. ಅದಕ್ಕೆ ಕಾರಣ ಸಿನಿಮಾದ ಕಂಟೆಂಟ್‌. ತುಂಬಾ ಹೊಸದಾದ ಕಥಾಹಂದರವಿರುವ ಸಿನಿಮಾವಿದು. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರ ನನಗೆ ತುಂಬಾ ಸ್ಪೆಷಲ್‌.

ನೀವು ಫ್ರೆಂಡ್ಸ್‌ ಒಟ್ಟಾಗಿ ಸೇರಿ ಮಾಡಿರುವ ಚಿತ್ರವಿದು?

ಹೌದು, ಹೀಗೊಂದು ಸಿನಿಮಾ ಮಾಡಬೇಕು, ಯಾವತ್ತಿಗೂ ನಾವು ಜೊತೆಗಿರಬೇಕು ಎಂಬ ಆಲೋಚನೆ ಹುಟ್ಟಿದ್ದು ಚಿರು ಅವರಿಂದ. ಈಗ ಅವರ ಕನಸಿನಂತೆ ಸಿನಿಮಾ ಮಾಡಿ ದ್ದೇವೆ. ಚಿರುಗೆ ನಮ್ಮ ಕಡೆಯಿಂದ ಕಿರು ಕಾಣಿಕೆ ಇದು

ಟ್ರೇಲರ್‌ ನೋಡಿದವರಿಂದ ಬಂದ ಪ್ರತಿಕ್ರಿಯೆ?

ಟ್ರೇಲರ್‌ ನೋಡಿದವರು ಇದೊಂದು ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾ ಎನ್ನುತ್ತಿದ್ದಾರೆ. ಸಿನಿಮಾದ ಕುತೂಹಲವನ್ನು ಹೆಚ್ಚಿಸುವಂತೆ ಟ್ರೇಲರ್‌ ಕಟ್‌ ಮಾಡಿದ್ದೀರಿ ಎಂಬ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಈ ವರ್ಷದ ಬೆಸ್ಟ್‌ ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರವಾಗಿ “ತತ್ಸಮ ತದ್ಭವ’ ಹೊರಹೊಮ್ಮಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಜ್ವಲ್‌ ಪಾತ್ರದ ಬಗ್ಗೆ ಹೇಳಿ?

ಪ್ರಜ್ವಲ್‌ ದೇವರಾಜ್‌ ಅವರು ಈ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಅವರಿಲ್ಲಿ ಅರವಿಂದ್‌ ಅಶ್ವತ್ಥಾಮ ಎಂಬ ಪೊಲೀಸ್‌ ಆಫೀಸರ್‌ ಪಾತ್ರ ಮಾಡಿದ್ದಾರೆ. ಹಾಗಂತ ಇದು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ ಇರುವಂತಹ ಪಾತ್ರವಲ್ಲ, ಬೇರೆ ರೀತಿಯ ಪಾತ್ರ. ಈ ಪಾತ್ರವನ್ನು ಪ್ರಜ್ವಲ್‌ ಮಾಡಿದರೆ ಚೆಂದ ಎಂದು ಪನ್ನಗ ಹಾಗೂ ವಿಶಾಲ್‌ ನಿರ್ಧರಿಸಿದರು. ಅದರಂತೆ ಪ್ರಜ್ವಲ್‌ ಕೂಡಾ ಒಪ್ಪಿ ಮಾಡಿದ್ದಾರೆ.

ಈ ಚಿತ್ರದ ಮೇಲೆ ನಿಮ್ಮ ನಿರೀಕ್ಷೆ ಎಷ್ಟು?

ತುಂಬಾ ನಿರೀಕ್ಷೆ ಇದೆ. ಜನ “ನೀವು ಯಾವಾಗ ಮತ್ತೆ ಸಿನಿಮಾ ಮಾಡ್ತೀರಿ’ ಎಂದು ಕೇಳುತ್ತಿದ್ದರು. ಅದರಂತೆ ಮಾಡಿದ್ದೇನೆ. ಈಗ ಬಂದು ಸಿನಿಮಾ ನೋಡುವ ಜವಾಬ್ದಾರಿ ಅವರದ್ದು.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.