ಈ ಚಿಟ್ಟೆ ಹೆದರಿಸುತ್ತೆ…
Team Udayavani, Jun 29, 2018, 6:00 AM IST
“ಕಳೆದ ಬಾರಿ ನೀವು ಸ್ವಲ್ಪ ಜಾಸ್ತಿ ಮಾತಾಡಿದ್ರಿ …’
ಹಾಗಂತ ಪ್ರಸನ್ನಗೆ ಚಿತ್ರತಂಡದವರು ಹೇಳಿದ್ದರಂತೆ. ಹಾಗಾಗಿ “ಚಿಟ್ಟೆ’ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಕಡಿಮೆ ಮಾತಾಡೋಕೆ ನಿರ್ಧರಿಸಿದ್ದರು ಪ್ರಸನ್ನ. ಹಾಗಂತ ಅವರು ಥ್ಯಾಂಕ್ಸ್ ಹೇಳಿ ಮೈಕು ಕೊಟ್ಟಿರಬಹುದು ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಕಳೆದ ಬಾರಿಯಷ್ಟಿಲ್ಲದಿದ್ದರೂ ಒಂದು ಲೆವೆಲ್‌ಗೆ ಮಾತಾಡಿಯೇ ಕೂತರು ಪ್ರಸನ್ನ.
“ಚಿಟ್ಟೆ’ ಚಿತ್ರದ ಬಗ್ಗೆ ಅವರು ಹೇಳದ್ದೇನೂ ಇಲ್ಲ. ಈ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ಅವರು ಚಿತ್ರದ ಬಗ್ಗೆ, ಮೇಕಿಂಗ್ ಬಗ್ಗೆ, ಸಹಕಾರ-ಪ್ರೋತ್ಸಾಹಗಳು ಕುರಿತು ಮಾತಾಡಿದ್ದರು. ಅದರ ಜೊತೆಗೆ ಈ ಬಾರಿ ಇನ್ನೂ ಎರಡು ವಿಷಯಗಳನ್ನು ಹೇಳುವುದಿತ್ತು ಅವರಿಗೆ. ಒಂದು ಚಿತ್ರ ಇಂದು ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಇದು ಹಾರರ್ ಚಿತ್ರ ಎಂದು ಅವರು ಇದುವರೆಗೂ ಎಲ್ಲೂ ಹೇಳಿರಲಿಲ್ಲ. ಈಗ ಅದನ್ನು ಒಪ್ಪಿಕೊಂಡರು. ಇದೊಂದು ಹಾರರ್ ಚಿತ್ರ ಎಂದು ಹೇಳುವ ಮನಸ್ಸಿರಲಿಲ್ಲವಂತೆ ಅವರಿಗೆ. ಸಸ್ಪೆನ್ಸ್ ಆಗಿ ಇರಲಿ, ಜನ ಚಿತ್ರದಲ್ಲೇ ನೋಡಲಿ ಅಂತಿದ್ದರಂತೆ. ಆದರೆ, ಚಿತ್ರದ ಒಂದು ಡಿಸೈನ್ ನೋಡಿ ಖುಷಿಯಾದ ವಿತರಕರು, ಇದೊಂದು ಹಾರರ್ ಚಿತ್ರ ಎಂದು ಮುಚ್ಚಿಡಬೇಡಿ ಎಂದರಂತೆ. ವಿತರಕರು ಹೇಳಿದ್ದರಿಂದ ಪ್ರಸನ್ನ ಸಹ ಒಪ್ಪಿ, ಇದೊಂದು ಹಾರರ್ ಚಿತ್ರ ಎಂದು ಘೋಷಿಸಿದ್ದಾರೆ.
“ಈ ಚಿತ್ರ ನಿರ್ಮಿಸುವ ಯಾವುದೇ ಯೋಚನೆ ಇರಲಿಲ್ಲ. ಕೊನೆಗೆ ಸ್ನೇಹಿತರ ಸಹಕಾರದಿಂದ ನಿರ್ಮಾಪಕನಾದೆ. ಲಾಭ ಅಲ್ಲದಿದ್ದರೂ ಅಸಲಾದರೂ ಕೊಡು, ಅದೂ ಇಲ್ಲದಿದ್ದರೆ ದುಡಿದು ತೀರಿಸುವುದಕ್ಕಾದರೂ ಅವಕಾಶ ಕೊಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಇದು ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಸೆಕೆಂಡ್ ಹಾಫ್ನಲ್ಲಿ ಹರ್ಷಿಕಾ ಮತ್ತು ದೀಪಿಕಾ ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಇಂಥದ್ದೊಂದು ಚಿತ್ರ ಮಾಡಿದ್ದಿಕ್ಕೆ ತೃಪ್ತಿ ಇದೆ’ ಎಂದು ಹೇಳಿಕೊಂಡರು.
ಅಂದು ಹರ್ಷಿಕಾ, ದೀಪಿಕಾ, ನಾಗೇಶ್, ವಿತರಕ ವೆಂಕಟೇಶ್ ಮುಂತಾದವರು ಇದ್ದರು. ಇದುವರೆಗೂ ಯಾವ ಚಿತ್ರಕ್ಕೂ ಮಾಡದಷ್ಟು ಪ್ರಚಾರವನ್ನು ಈ ಚಿತ್ರಕ್ಕೆ ಮಾಡಿದ್ದಾಗಿ ಹರ್ಷಿಕಾ ಹೇಳಿಕೊಂಡರು. ಇನ್ನು ತನಗೆ ಇಂಥದ್ದೊಂದು ಪಾತ್ರ ನಿಭಾಯಿಸುವ ಶಕ್ತಿ ಇದೆ ಎಂದೇ ಗೊತ್ತಿರಲಿಲ್ಲ ಎಂದು ದೀಪಿಕಾ ಹೇಳಿಕೊಂಡರು. ಇನ್ನು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಗೇಶ್, ಇವತ್ತಿನ ಜನರೇಶನ್‌ಗೆ ಏನು ಬೇಕೋ, ಅವೆಲ್ಲವೂ ಚಿತ್ರದಲ್ಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.