ಚಿತ್ರೋತ್ಸವಕ್ಕೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಗಿರೀಶ್‌ಕಾಸರವಳ್ಳಿ ನಿರ್ದೇಶನದ ಚಿತ್ರ
Team Udayavani, Dec 4, 2020, 5:00 PM IST
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಹೊಸಚಿತ್ರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರ ಎರಡು ಪ್ರತಿಷ್ಟಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. “ರೋಮ್’ ಮತ್ತು “ಢಾಕಾ’ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷ್ಯನ್ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ.
ಜಯಂತ್ ಕಾಯ್ಕಿಣಿ ಅವರ “ಹಾಲಿನ ಮೀಸೆ’ ಕಥೆಯನ್ನಾಧರಿಸಿದ ಈ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್‌ಕಾಸರವಳ್ಳಿ, “ಇದು ನಮ್ಮೆಲ್ಲರ ಸಂಕಟದಕಥೆ. ಇಲ್ಲೂ ಇರುವುದಕ್ಕೆ ಆಗುವುದಿಲ್ಲ. ಅಲ್ಲಿಯೂ ಕಷ್ಟ. ಇದನ್ನುಕಥೆ ಧ್ವನಿಸುತ್ತದೆ. ನಾಗರಾಜ ಎಂಬ ವ್ಯಕ್ತಿತ್ವವನ್ನು ಇಟ್ಟುಕೊಂಡು ಈ ಕಥೆ ಹೇಳಲಾಗುತ್ತಿದೆ. ಬಾಲ್ಯ ಮತ್ತು ಗೃಹಸ್ಥ ಹೀಗೆ ಎರಡು ಘಟ್ಟಗಳನ್ನು ಚಿತ್ರದಲ್ಲಿಹಿಡಿದಿಡಲಾಗಿದೆ. ಎರಡು ಘಟ್ಟದಕಥಾ ಹಂದರ ಈ ಚಿತ್ರದಲ್ಲಿದೆ. ಸುಖ ಮತ್ತು ನೆಮ್ಮದಿ ನಡುವಿನ ತೊಳಲಾಟದ ಸಂಘರ್ಷ ಈ ಕಥೆ ಇಲ್ಲಿದೆ.ಎಲ್ಲರಲ್ಲೂ ಒಂದಲ್ಲ ಒಂದು ಈ ರೀತಿಯ ಸಂಕಟಇರುವುದರಿಂದ ಸಾರ್ವತ್ರಿಕಮತ್ತು ಸಾರ್ವಕಾಲಿಕರೂಪವನ್ನು ಈ ಚಿತ್ರ ಪಡೆದುಕೊಳ್ಳುತ್ತದೆ’ ಎನ್ನುತ್ತಾರೆ.
“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಹೆಚ್.ಎಂ ರಾಮಚಂದ್ರ ಹಾಲ್ಕೆರೆ ಛಾಯಾಗ್ರಹಣ, ಗುಣಶೇಖರ್ ಸಂಕಲನ, ಎಸ್.ಆರ್ ರಾಮಕೃಷ್ಣ ಸಂಗೀತವಿದೆ. “ಸಂಗಮ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಎಸ್.ವಿ ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.