ಮಾಲ್ಗುಡಿಯ ನೆನಪಲ್ಲಿ
ವಿಜಯ ರಾಘವೇಂದ್ರ ಈಗ ಸೀನಿಯರ್ ಸಿಟಿಜನ್
Team Udayavani, Oct 25, 2019, 5:42 AM IST
“ಮಾಲ್ಗುಡಿ ಡೇಸ್’ ಎಂದರೆ ತಟ್ಟನೆ ನೆನಪಾಗೋದು ಶಂಕರ್ ನಾಗ್. “ಮಾಲ್ಗುಡಿ ಡೇಸ್’ ಅನ್ನು ಶಂಕರ್ ನಾಗ್ ಧಾರಾವಾಹಿ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದರು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ಹಾಗಂತ ಶಂಕರ್‌ನಾಗ್ ಅವರ “ಮಾಲ್ಗುಡಿ ಡೇಸ್’ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ವಿಜಯ ರಾಘವೇಂದ್ರ ನಾಯಕರಾಗಿರುವ ಚಿತ್ರ. ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಜಗ್ಗೇಶ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.
“ಮಾಲ್ಗುಡಿ ಡೇಸ್’ ಚಿತ್ರವನ್ನು ಕಿಶೋರ್ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಥೆಯನ್ನು ಇಲ್ಲಿ ಹೇಳಿದ್ದಾರಂತೆ. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗುತ್ತದೆಯಂತೆ. ಚಿತ್ರ ನೋಡುತ್ತಿದ್ದಂತೆ ಇದು ತಮ್ಮದೇ ಕಥೆಯೇನೋ ಎಂದು ಪ್ರೇಕ್ಷಕರಿಗೆ ಭಾಸವಾಗುತ್ತದೆ ಎನ್ನುವುದು ನಿರ್ದೇಶಕರ ಮಾತು. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷ ಮೇಕಪ್ ಮಾಡಲಾಗಿದೆ.
ವಿಜಯ ರಾಘವೇಂದ್ರ ಅವರ ಗೆಟಪ್ ಹಾಗೂ ಮೇಕಪ್ ಬಗ್ಗೆ ಮಾತನಾಡುವ ಕಿಶೋರ್, “ಬಹುತೇಕ ಇಡೀ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಈ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಧ್ಯೆ ಒಂದೆರಡು ಕಡೆ ಬೇರೆ ಗೆಟಪ್ ಇರುತ್ತದೆ. ಅದು ಕೂಡಾ ವಿಜಯ ರಾಘವೇಂದ್ರ ಅವರ ಒರಿಜಿನಲ್ ಗೆಟಪ್ ಅಲ್ಲ. ಇನ್ನು, ಈಗ ಬಿಟ್ಟಿರುವ ಪೋಸ್ಟರ್‌ನಲ್ಲಿರುವ ಮೇಕಪ್‌ಗೆ ಪ್ರಾಸ್ಥೆಟಿಕ್ ಮೇಕಪ್ ಎನ್ನುತ್ತಾರೆ. ಭಾರತದಲ್ಲಿ ಈ ತರಹದ ಮೇಕಪ್ ಮಾಡುವವರ ಸಂಖ್ಯೆ ವಿರಳ. ಅದೇ ಕಾರಣದಿಂದ ನಾವು ಸಾಕಷ್ಟು ಮಂದಿ ವಿದೇಶಿ ಮೇಕಪ್‌ಮ್ಯಾನ್‌ಗಳ ಜೊತೆ ಚರ್ಚೆ ಮಾಡಿದೆವು. ಹೀಗಿರುವಾಗ ನಮಗೆ ಕೇರಳ ಮೂಲದ ರೋಶನ್ ಬಗ್ಗೆ ಗೊತ್ತಾಯಿತು. ಅವರು ಕೂಡಾ ಲಂಡನ್‌ನಲ್ಲಿ ಈ ಮೇಕಪ್ ಕಲಿತು ಬಂದವರು. ಅವರಿಂದ ಈ ಮೇಕಪ್ ಮಾಡಿಸಲಾಗಿದೆ. ಪ್ರತಿ ದಿನ ಈ ಮೇಕಪ್ ಹಾಕಲು 4 ಗಂಟೆ ಸಮಯ ಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆಯಾ ವ್ಯಕ್ತಿಯ ಮುಖಕ್ಕೆ ಹೊಂದುವ ಮೇಕಪ್ ಹಾಗೂ ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು. ಈ ಮೇಕಪ್ ಹಾಕಿದ ನಂತರ ತುಂಬಾ ಎಚ್ಚರದಿಂದಿರಬೇಕು. ಹೆಚ್ಚು ಬೆವರಬಾರದು, ಊಟ-ತಿಂಡಿ ಮಾಡುವಾಗಲೂ ಎಚ್ಚರವಹಿಸಬೇಕು’ ಎಂದು ವಿಜಯ ರಾಘವೇಂದ್ರ ಅವರ ಹೊಸ ಗೆಟಪ್ ಬಗ್ಗೆ ಹೇಳುತ್ತಾರೆ ಕಿಶೋರ್.
ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ರತ್ನಾಕರ್ ಕಾಮತ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.