ನಿಜಾಮರ ಕಾಲದಲ್ಲಿ…ಸಾವಿನ ನಂತರದ 13 ದಿನಗಳು

Team Udayavani, May 12, 2017, 12:03 PM IST

13-(20).jpg

“13′ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರತಂಡ ಜೊತೆಯಾಗಿ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಡಾ. ಉಮೇಶ್‌ ಎನ್ನುವವರು ಈ ಚಿತ್ರದ ನಿರ್ದೇಶಕರು. ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗರುಡ ಪುರಾಣಕ್ಕೆ ಸಂಬಂಧಪಟ್ಟ ಕಥೆಯನ್ನು ಹೇಳಿದ್ದಾರಂತೆ. ಅಷ್ಟಕ್ಕೂ “13′ ಎಂದರೇನು, ಅದು ಏನನ್ನು ಸಾಂಕೇತಿಸುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. 

“ಮನುಷ್ಯ ಸತ್ತ ನಂತರ ಆತನ ಆತ್ಮ 13 ದಿನಗಳ ಕಾಲ ಭೂಮಿ ಮೇಲೆ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಇದೆ. ಆ ಸಂದರ್ಭದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ಗೋಚರ ಹಾಗೂ ಅಗೋಚರ ವಿಷಯಗಳ ಬಗ್ಗೆಯೂ ಹೇಳಿದ್ದೇನೆ’ ಎಂಬುದು ನಿರ್ದೇಶಕರ ಮಾತು.
 
ಚಿತ್ರದಲ್ಲಿ ನಿಜಾಮರ ಕಾಲದ ಕಥೆಯನ್ನು ಸೇರಿಸಲಾಗಿದ್ದು, ಬಹುತೇಕ ಚಿತ್ರೀಕರಣ ಬೀದರ್‌ ಕೋಟೆಯಲ್ಲಿ ಮಾಡಲಾಗಿದೆಯಂತೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಫ್ಲ್ಯಾಶ್‌ಬ್ಯಾಕ್‌ ಇದ್ದು, ಅಲ್ಲಿ ಬರುವ ಡೈಲಾಗ್‌  ಹಾಗೂ ಒಂದು ಹಾಡು ಹಿಂದಿಯಲ್ಲಿರುತ್ತದೆಯಂತೆ. 
 
ಚಿತ್ರದಲ್ಲಿ ದೀಪು ಹಾಗೂ ಚೈತ್ರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ದೀಪುಗೆ ಸಿನಿಮಾ ಒಂದು ಹೊಸ ಅನುಭವ ನೀಡಿತಂತೆ. ಈ ಚಿತ್ರಕ್ಕಾಗಿ ಒಂದೂವರೆ ತಿಂಗಳ ತಯಾರಿ ನಡೆಸಿದರಂತೆ. ಅವರಿಲ್ಲಿ ಕಾರ್‌ ಡ್ರೈವರ್‌ ಆಗಿ ಕಾಣಿಸಿಕೊಂಡಿದ್ದು, ದೆವ್ವದ ಕಾಟ ಕೂಡಾ ಅವರಿಗೆ ಎದುರಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆ್ಯಂಕರ್‌ ಆಗಿದ್ದ ಚೈತ್ರಾಗೆ “13′ ಸಿನಿಮಾದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತಂತೆ. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಬೀದರ್‌ನಲ್ಲಿ ಚಿತ್ರೀಕರಣ ನಡೆದ ಖುಷಿಯನ್ನು ಹಂಚಿಕೊಂಡರು. 

ನಿರ್ಮಾಪಕರಲ್ಲೊಬ್ಬರಾದ ಕಾಳೇಗೌಡ ಅವರು ನಿಜಾಮನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಿರ್ಮಾಪಕ ಅಶೋಕ್‌ ಕೂಡಾ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರಂತೆ. ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣ, ಎ.ಎಂ. ನೀಲ್‌ ಸಂಗೀತ, ಕೆ.ಎಂ.ಪ್ರಕಾಶ್‌ ಸಂಕಲನ, ತ್ರಿಭುವನ್‌ ನƒತ್ಯ ನಿರ್ದೇಶನ, ಸಾಯಿ ಸರ್ವೇಶ್‌, ಆನಂದ್‌, ಡಾ.ಎಸ್‌.ಎಸ್‌.ಉಮೇಶ್‌ ಸಾಹಿತ್ಯ, ಮಾಸ್‌ ಮಾದ ಸಾಹಸ, ಪ್ರಭು ಕಲಾನಿರ್ದೇಶನವಿದೆ. ಚಿತ್ರದಲ್ಲಿ ಅರ್ಚನಾ, ರಮೇಶ್‌ ಭಟ್‌, ಧರ್ಮ, ರಮೇಶ್‌ ಪಂಡಿತ್‌, ಸುಧಿಗೌಡ, ಮಹೇಶ್‌, ಶಶಿಕಲಾ, ಪವನ್‌, ಉದಯ್‌, ಶಶಿ ನಟಿಸಿದ್ದಾರೆ.  

“13′ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರತಂಡ ಜೊತೆಯಾಗಿ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಡಾ. ಉಮೇಶ್‌ ಎನ್ನುವವರು ಈ ಚಿತ್ರದ ನಿರ್ದೇಶಕರು. ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗರುಡ ಪುರಾಣಕ್ಕೆ ಸಂಬಂಧಪಟ್ಟ ಕಥೆಯನ್ನು ಹೇಳಿದ್ದಾರಂತೆ. ಅಷ್ಟಕ್ಕೂ “13′ ಎಂದರೇನು, ಅದು ಏನನ್ನು ಸಾಂಕೇತಿಸುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. “ಮನುಷ್ಯ ಸತ್ತ ನಂತರ ಆತನ ಆತ್ಮ 13 ದಿನಗಳ ಕಾಲ ಭೂಮಿ ಮೇಲೆ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಇದೆ. ಆ ಸಂದರ್ಭದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ಗೋಚರ ಹಾಗೂ ಅಗೋಚರ ವಿಷಯಗಳ ಬಗ್ಗೆಯೂ ಹೇಳಿದ್ದೇನೆ’ ಎಂಬುದು ನಿರ್ದೇಶಕರ ಮಾತು.
 
ಚಿತ್ರದಲ್ಲಿ ನಿಜಾಮರ ಕಾಲದ ಕಥೆಯನ್ನು ಸೇರಿಸಲಾಗಿದ್ದು, ಬಹುತೇಕ ಚಿತ್ರೀಕರಣ ಬೀದರ್‌ ಕೋಟೆಯಲ್ಲಿ ಮಾಡಲಾಗಿದೆಯಂತೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಫ್ಲ್ಯಾಶ್‌ಬ್ಯಾಕ್‌ ಇದ್ದು, ಅಲ್ಲಿ ಬರುವ ಡೈಲಾಗ್‌  ಹಾಗೂ ಒಂದು ಹಾಡು ಹಿಂದಿಯಲ್ಲಿರುತ್ತದೆಯಂತೆ.  

ಚಿತ್ರದಲ್ಲಿ ದೀಪು ಹಾಗೂ ಚೈತ್ರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ದೀಪುಗೆ ಸಿನಿಮಾ ಒಂದು ಹೊಸ ಅನುಭವ ನೀಡಿತಂತೆ. ಈ ಚಿತ್ರಕ್ಕಾಗಿ ಒಂದೂವರೆ ತಿಂಗಳ ತಯಾರಿ ನಡೆಸಿದರಂತೆ. ಅವರಿಲ್ಲಿ ಕಾರ್‌ ಡ್ರೈವರ್‌ ಆಗಿ ಕಾಣಿಸಿಕೊಂಡಿದ್ದು, ದೆವ್ವದ ಕಾಟ ಕೂಡಾ ಅವರಿಗೆ ಎದುರಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆ್ಯಂಕರ್‌ ಆಗಿದ್ದ ಚೈತ್ರಾಗೆ “13′ ಸಿನಿಮಾದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತಂತೆ. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಬೀದರ್‌ನಲ್ಲಿ ಚಿತ್ರೀಕರಣ ನಡೆದ ಖುಷಿಯನ್ನು ಹಂಚಿಕೊಂಡರು. 

ನಿರ್ಮಾಪಕರಲ್ಲೊಬ್ಬರಾದ ಕಾಳೇಗೌಡ ಅವರು ನಿಜಾಮನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಿರ್ಮಾಪಕ ಅಶೋಕ್‌ ಕೂಡಾ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರಂತೆ. ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣ, ಎ.ಎಂ. ನೀಲ್‌ ಸಂಗೀತ, ಕೆ.ಎಂ.ಪ್ರಕಾಶ್‌ ಸಂಕಲನ, ತ್ರಿಭುವನ್‌ ನƒತ್ಯ ನಿರ್ದೇಶನ, ಸಾಯಿ ಸರ್ವೇಶ್‌, ಆನಂದ್‌, ಡಾ.ಎಸ್‌.ಎಸ್‌.ಉಮೇಶ್‌ ಸಾಹಿತ್ಯ, ಮಾಸ್‌ ಮಾದ ಸಾಹಸ, ಪ್ರಭು ಕಲಾನಿರ್ದೇಶನವಿದೆ. ಚಿತ್ರದಲ್ಲಿ ಅರ್ಚನಾ, ರಮೇಶ್‌ ಭಟ್‌, ಧರ್ಮ, ರಮೇಶ್‌ ಪಂಡಿತ್‌, ಸುಧಿಗೌಡ, ಮಹೇಶ್‌, ಶಶಿಕಲಾ, ಪವನ್‌, ಉದಯ್‌, ಶಶಿ ನಟಿಸಿದ್ದಾರೆ. 

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.