ಭರವಸೆಯ ಕಿನಾರೆಯಲ್ಲಿ
Team Udayavani, Dec 29, 2017, 10:29 AM IST
ಈ ವರ್ಷ ತೆರೆಕಂಡಿರುವ “ಏನೆಂದು ಹೆಸರಿಡಲಿ’ ಚಿತ್ರದ ಹಾಡುಗಳ ಬಗ್ಗೆ ಒಂದು ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಚಿತ್ರ ಮಾತ್ರ ಸದ್ದು ಮಾಡಲಿಲ್ಲ. ಆ ಚಿತ್ರಕ್ಕೆ ಸಂಗೀತ ನೀಡಿದ್ದು ಸುರೇಂದ್ರನಾಥ್ ಎಂಬ ಯುವ ಸಂಗೀತ ನಿರ್ದೇಶಕ. ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಹೊಸ ಪ್ರತಿಭೆ ಸುರೇಂದ್ರನಾಥ್. ಸದ್ಯ ಸುರೇಂದ್ರನಾಥ್ ಒಂದಷ್ಟು ಸಿನಿಮಾಗಳಿಗೆ ಸಂಗೀತ ನೀಡುವಲ್ಲಿ ಬಿಝಿಯಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ “ಕಿನಾರೆ’ ಚಿತ್ರಕ್ಕೂ ಸುರೇಂದ್ರನಾಥ್ ಸಂಗೀತವಿದೆ. ಇದಲ್ಲದೇ, “ವಾರ್ಡ್ ನಂ 36′, “ಓಲ್ಡ್ ಮದ್ರಾಸ್ ರೋಡ್’ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ಇವರ ಕೈಯಲ್ಲಿದೆ. ಸುರೇಂದ್ರ ನಾಥ್ ಕೇವಲ ಕನ್ನಡವಷ್ಟೇ ಅಲ್ಲದೇ, ತುಳು ಚಿತ್ರವೊಂದಕ್ಕೂ ಸಂಗೀತ ನೀಡಿದ್ದಾರೆ. ಹೌದು, “ಚಾಪ್ಟರ್’ ಎಂಬ ತುಳು ಚಿತ್ರಕ್ಕೂ ಸುರೇಂದ್ರನಾಥ್ ಸಂಗೀತ ನೀಡಿದ್ದು, ತುಳು ಚಿತ್ರರಂಗದಿಂದಲೂ ಸುರೇಂದ್ರನಾಥ್‌ಗೆ ಅವಕಾಶಗಳು ಬರುತ್ತಿವೆ.
ಮೂಲತಃ ಸಾಗರದವರಾದ ಸುರೇಂದ್ರನಾಥ್, ಸಂಗೀತ ವಿಷಯದಲ್ಲೇ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿಸಿದ ಸುರೇಂದ್ರನಾಥ್, ಸಾಕಷ್ಟು ಬಂಗಾಲಿ ಸಿನಿಮಾಗಳಿಗೆ ಪ್ರೋಗ್ರಾಮರ್ ಆಗಿಯೂ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಜೊತೆಗೆ ಆಲ್ಬಂಗಳಿಗೂ ಕೆಲಸ ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಸಿಕ್ಕಿದ್ದು, “ಏನೆಂದು ಹೆಸರಿಡಲಿ’ ಹಾಗೂ “ಕಿನಾರೆ’. “ಒಂದಷ್ಟು ಒಳ್ಳೆಯ ಅವಕಾಶಗಳು ಬರುತ್ತಿವೆ. ಮುಖ್ಯವಾಗಿ ನನಗೆ ಇಲ್ಲಿವ ರೆಗೆ ಸಿಕ್ಕಿರುವ ಸಿನಿಮಾಗಳ ಕಥೆಯೂ ಭಿನ್ನವಾಗಿದ್ದು, ಅದಕ್ಕೆ ಪೂರಕವಾಗಿ ಹಾಡುಗಳನ್ನು ನೀಡಬೇಕಿದೆ. ಸದ್ಯ “ಕಿನಾರೆ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಕಥೆ ಹೊಸತನದಿಂದ ಕೂಡಿದ್ದು, ಅದಕ್ಕೆ ತಕ್ಕಂತೆ ಹಾಡುಗಳು ಕೂಡಾ ಮೂಡಿಬಂದಿದೆ’ ಎನ್ನುವುದು ಸುರೇಂದ್ರನಾಥ್ ಮಾತು.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.