ಮೊದಲ ಸಿನಿಮಾದ “ಧ್ಯಾನ”ದಲ್ಲಿ
Team Udayavani, Oct 27, 2017, 12:51 PM IST
ಮೊದಲ ಸಿನಿಮಾದಲ್ಲೇ ಮೂರ್ಮೂರು ಶೇಡ್‌ನ ಪಾತ್ರ ಸಿಕ್ಕರೆ ಯಾರು ತಾನೆ ಖುಷಿಯಾಗಿರೋದಿಲ್ಲ. ಈಗ ಅದೇ ಖುಷಿಯಲ್ಲಿದ್ದಾರೆ ನಿಮಿಕ ರತ್ನಾಕರ್. ಯಾರು ಈ ನಿಮಿಕ ಎಂದರೆ “ರಾಮಧಾನ್ಯ’ ಸಿನಿಮಾ ಬಗ್ಗೆ ಹೇಳಬೇಕು. ಹೌದು, “ರಾಮಧಾನ್ಯ’ ಎಂಬ ಸಿನಿಮಾ ಬರುತ್ತಿದ್ದು, ಈ ಚಿತ್ರದಲ್ಲಿ ನಿಮಿಕ ನಾಯಕಿ. ಚಿತ್ರದಲ್ಲಿ ಅವರು ಮೂರ್ಮೂರು ಪಾತ್ರಗಳನ್ನು ಮಾಡಿದ್ದಾರೆ. ಸೀತೆ, ಕನಕದಾಸರ ಪತ್ನಿ ಹಾಗೂ ಇಂದಿನ ಮಾಡರ್ನ್ ಹುಡುಗಿ… ಈ ತರಹದ ಮೂರು ಪಾತ್ರಗಳನ್ನು ಮಾಡಿದ್ದಾರೆ. ಅಂದಹಾಗೆ, ನಿಮಿಕಗೆ “ರಾಮಧಾನ್ಯ’ ಮೊದಲ ಚಿತ್ರ.
ಮಂಗಳೂರು ಮೂಲದ ನಿಮಿಕ ಮಾಡೆಲಿಂಗ್ ಹಿನ್ನೆಲೆಯಿಂದ ಬಂದವರು. ಇಂಜಿನಿಯರಿಂಗ್ ಓದಿರುವ ನಿಮಿಕ ಒಳ್ಳೆಯ ಗಾಯಕಿ ಕೂಡಾ. ಈಗಾಗಲೇ “ದಬಕ್‌ದಬ ಐಸಾ’ ಹಾಗೂ “ಮದಿಪು’ ಚಿತ್ರಗಳಿಗೆ ಹಾಡಿರುವ ನಿಮಿಕ, ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾರೆ ಕೂಡಾ. ನಿಮಿಕ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ, ಮೆಚ್ಚುಗೆ ಕೂಡಾ ಪಡೆದಿದ್ದಾರೆ. “ಮಿಸ್ ಸೂಪರ್ ಟ್ಯಾಲೆಂಟ್ 2017’ನಲ್ಲಿ ಭಾಗವಹಿಸಿರುವ ನಿಮಿಕ, ನಂತರ ಕೊರಿಯಾದಲ್ಲಿ ನಡೆದ “ಮಿಸ್ ಸೂಪರ್ ಟ್ಯಾಲೆಂಟ್ ಆಫ್ ವರ್ಲ್ಡ್’ನಲ್ಲಿ ಭಾಗವಹಿಸಿದ್ದಾರೆ.
ಇಂಜಿನಿಯರಿಂಗ್ ಮುಗಿಸಿ, ಐಟಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ನಿಮಿಕ, ಈಗ ಸಂಪೂರ್ಣವಾಗಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಿಮಿಕಗೆ ಒಂದಷ್ಟು ಅವಕಾಶಗಳು ಬರುತ್ತಿವೆ. “ಮೊದಲ ಚಿತ್ರ ನಿಜಕ್ಕೂ ತುಂಬಾ ಸವಾಲಿನಿಂದ ಕೂಡಿತ್ತು. ಮೂರೂರು ಪಾತ್ರಗಳನ್ನು ಮಾಡಬೇಕಿತ್ತು. ಮೂರು ಪಾತ್ರ ಕೂಡಾ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಮೊದಲ ಸಿನಿಮಾದಲ್ಲೇ ಒಳ್ಳೆಯ ಅನುಭವವಾಯಿತು’ ಎನ್ನುವುದು ನಿಮಿಕ ಮಾತು.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.