ತೋತಾಪುರಿಯ ಕಲರ್‌ಫುಲ್ ಹಾಡು: ಹೆಜ್ಜೆ ಹಾಕಿದ ಜಗ್ಗೇಶ್-ಅದಿತಿ ಪ್ರಭುದೇವ
Team Udayavani, Apr 2, 2021, 11:39 AM IST
ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಸಬ್ಜೆಕ್ಟ್ ಎರಡೂ ವಿಷಯಗಳಲ್ಲೂ ಗಮನ ಸೆಳೆಯುತ್ತಿರುವ “ತೋತಾಪುರಿ’ ಚಿತ್ರ ಇದೀಗ ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಹಾಡಿನ ಭಾಗದ ಚಿತ್ರೀಕರಣದಲ್ಲಿರುವ ಚಿತ್ರತಂಡ, ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‌ನಲ್ಲಿ ಕೆಲ ದಿನಗಳಿಂದ ಹಾಡಿನ ಚಿತ್ರೀಕರಣ ನಡೆಸುತ್ತಿದೆ.
ಇನ್ನು ರಂಗು ರಂಗಿನ ಸೆಟ್, ನೂರಾರು ನೃತ್ಯ ಕಲಾವಿದರ ಜೊತೆಯಲ್ಲಿ ನಟ ಜಗ್ಗೇಶ್, ನಾಯಕಿ ಅದಿತಿ ಸೇರಿದಂತೆ ಸಾಕಷ್ಟು ಪ್ರಮುಖ ಕಲಾವಿದರು ಈ ಹಾಡಿನಲ್ಲಿ ಭಾಗಿಯಾಗುತ್ತಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಹಾಡು ತೆರೆಮೇಲೆ ಮೂಡಿಬರುತ್ತಿದೆ.
ಹಿಂದಿ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಸಾದ್ ಸಾಹಿತ್ಯ ರಚಿಸಿದರೆ, ಅನೂಪ್ ಸೀಳಿನ್ ಹಾಡಿಗೆ ರಾಗ ಸಂಯೋಜಿಸಿದ್ದಾರೆ. ಈ ಹಾಡಿನ ಚಿತ್ರೀಕರಣವನ್ನು ಹಿಂದು-ಮುಸ್ಲಿಂ ಗೆಟಪ್‌ನಲ್ಲಿಯೇ ಶೂಟಿಂಗ್ ಮಾಡುತ್ತಿರೋದು ಮತ್ತೂಂದು ವಿಶೇಷ.
ಇದನ್ನೂ ಓದಿ:ಶ್ರೇಯಸ್ ಪ್ರೇಮಪುರಾಣ: ವಿಷ್ಣುಪ್ರಿಯದಲ್ಲಿ 90ರ ಲವ್ ಸ್ಟೋರಿ
ಈ ಹಿಂದೆ “ಗೋವಿಂದಾಯ ನಮಃ’, “ಶ್ರಾವಣಿ ಸುಬ್ರಮಣ್ಯ’, “ಶಿವಲಿಂಗ’, “ರಾಜು ಕನ್ನಡ ಮೀಡಿಯಂ’ ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ ಸುರೇಶ್ “ಸುರೇಶ್ ಆರ್ಟ್ಸ್’ ಬ್ಯಾನರ್‌ನಲ್ಲಿ “ತೋತಾಪುರಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಇನ್ನು “ತೋತಾಪುರಿ’ ಚಿತ್ರ ಎರಡು ಭಾಗವಾಗಿ ತೆರೆಕಾಣಲಿದ್ದು, ಚಿತ್ರದ ಮೊದಲ ಭಾಗದ ಟೈಟಲ್‌ಗೆ “ತೊಟ್ಟ್ ಕೀಳ್ಬೇಕಷ್ಟೇ…’ ಎಂಬ ಟ್ಯಾಗ್ ಲೈನ್ ಇದ್ದರೆ, ಎರಡನೇ ಭಾಗದ ಟೈಟಲ್‌ಗೆ “ತೊಟ್ಟ್ ಕಿತ್ತಾಯ್ತು…’ ಎಂಬ ಟ್ಯಾಗ್ ಲೈನ್ ಇದೆ.
ಇದನ್ನೂ ಓದಿ: ಉಪ್ಪಿ ‘ಕಬ್ಜ’ದಲ್ಲಿ ಹೊಸ ಲೋಕ: ಅದ್ಧೂರಿ ಮೇಕಿಂಗ್‌ನಲ್ಲಿ ಚಂದ್ರು ಸಿನಿಮಾ
“ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ ಅವರೊಂದಿಗೆ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ಪ್ರಮುಖ ತಾರಾಬಳಗದಲ್ಲಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ಭಾಗದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಒಂದೇ ಬಾರಿ ಎರಡೂ ಭಾಗದ ಶೂಟಿಂಗ್ ನಡೆಸಿದ ಕೀರ್ತಿ “ತೋತಾಪುರಿ’ ಚಿತ್ರಕ್ಕೆ ಸಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.