ಜೇಮ್ಸ್ ಆಟ ಶುರು
Team Udayavani, Jan 24, 2020, 6:15 AM IST
ಅಪ್ಪ-ಅಮ್ಮ ಹೆಸರಿಡೋದ್ ವಾಡಿಕೆ, ನಮಗ್ ನಾವ್ ಹೆಸರಿಟ್ಕೊಂಡ್ರೆ ಬೇಡಿಕೆ…
“ಜೇಮ್ಸ್’ ಅಂದಾಕ್ಷಣ, ಬಾಂಡ್ ಸಿನಿಮಾ ಇರಬಹುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, “ಜೇಮ್ಸ್’ ಕಥೆ ಅದಲ್ಲ. ಮತ್ತೆ ಮನರಂಜನೆಯ ಚಿತ್ರವಿದು. ಹೆಸರಷ್ಟೇ ಜೇಮ್ಸ್.
ಆ ಶೀರ್ಷಿಕೆ ಕೇಳಿದ ಬಹುತೇಕ ಚಿತ್ರರಂಗದ ನನ್ನ ಫ್ರೆಂಡ್ಸ್ ಇಷ್ಟಪಟ್ಟರು. ಫ್ಯಾನ್ಸ್ ಕೂಡ ಖುಷಿಪಟ್ಟರು. ಹಾಗಂತ, ಜೇಮ್ಸ್ “ಬಾಂಡ್’ ಕಥೆಯಂತೂ ಅಲ್ಲ …
ಅತ್ತ ಕಡೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಇತ್ತ ಕಡೆ ನಿರ್ದೇಶಕ ಚೇತನ್ ಕುಮಾರ್ ಅವರ “ಭರಾಟೆ’ ನೂರು ದಿನ ಪೂರೈಸಿದೆ. ಈಗ ಈ ಇಬ್ಬರು ಜೊತೆಯಾಗಿದ್ದಾರೆ. ಅದು “ಜೇಮ್ಸ್’ ಮೂಲಕ. ಹೌದು, “ಭರ್ಜರಿ’, “ಬಹದ್ದೂರ್’, “ಭರಾಟೆ’ ಚಿತ್ರಗಳನ್ನು ನಿರ್ದೇಶಿಸಿರುವ ಚೇತನ್ ಕುಮಾರ್ ಈಗ “ಜೇಮ್ಸ್’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
ಈ ಚಿತ್ರಕ್ಕೆ “ದಿ ಟ್ರೇಡ್ ಮಾರ್ಕ್’ ಎಂಬ ಟ್ಯಾಗ್‌ಲೈನ್ ಇದೆ. “ಅಪ್ಪ-ಅಮ್ಮ ಹೆಸರಿಡೋದ್ ವಾಡಿಕೆ, ನಮಗ್ ನಾವ್ ಹೆಸರಿಟ್ಕೊಂಡ್ರೆ ಬೇಡಿಕೆ’ ಎಂಬ ಡೈಲಾಗ್ ಮೂಲಕ ಚಿತ್ರದ ಮುಹೂರ್ತ ಆರಂಭವಾಗಿದೆ. ಎಲ್ಲಾ ಓಕೆ, “ಜೇಮ್ಸ್’ ಮೂಲಕ ಏನು ಹೇಳಲು ಹೊರಟಿದ್ದೀರಿ ಎಂಬ ಪ್ರಶ್ನೆಯನ್ನು ನಿರ್ದೇಶಕ ಚೇತನ್ ಮುಂದಿಟ್ಟರೆ ಅವರು ಅದಕ್ಕೆ ಈಗಲೇ ಉತ್ತರಿಸಲು ಸಿದ್ಧವಿಲ್ಲ. ಆದರೆ, ಇದೊಂದು ಹೊಸ ಬಗೆಯ ಸಿನಿಮಾವಾಗುತ್ತದೆ ಎಂದಷ್ಟೇ ಹೇಳುತ್ತಾರೆ. “ಚಿತ್ರದ ಕಥೆ ಹಾಗೂ ಮೇಕಿಂಗ್ ಹೊಸದಾಗಿದೆ. ಜೊತೆಗೆ ಪುನೀತ್ ಅವರ ಗೆಟಪ್ ಕೂಡಾ ಭಿನ್ನವಾಗಿರಲಿದೆ. ಅಪ್ಪು ಅವರ ಅಭಿಮಾನಿಗಳಿಗೆ ಈ ಚಿತ್ರ ಖುಷಿಕೊಡೋದು ಗ್ಯಾರಂಟಿ’ ಎನ್ನುವುದು ನಿರ್ದೇಶಕ ಚೇತನ್ ಮಾತು.
ಇದೇ ಮೊದಲ ಸಲ “ಬಹದ್ದೂರ್’ ಚೇತನ್‌ಕುಮಾರ್ ಅವರ ನಿರ್ದೇಶನದಲ್ಲಿ ನಟಿಸುತ್ತಿರುವ ಕುರಿತಾಗಿಯೂ ಪುನೀತ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. “ನನ್ನ ಹಾಗು ಚೇತನ್‌ಕುಮಾರ್ ಅವರ ಮೊದಲ ಕಾಂಬಿನೇಶನ್‌ನ ಚಿತ್ರ “ಜೇಮ್ಸ್. ಕಳೆದ ಎರಡು ವರ್ಷದ ಹಿಂದೆಯೇ ಚಿತ್ರದ ಪೋಸ್ಟರ್ ಲುಕ್‌ವೊಂದು ಬಿಡುಗಡೆ ಮಾಡಲಾಗಿತ್ತು. ಆದರೆ, ಚೇತನ್‌ಕುಮಾರ್ ಕೂಡ ಬೇರೆ ಚಿತ್ರದಲ್ಲಿ ಬಿಝಿ ಇದ್ದರು. ನಾನೂ ಕೂಡ ನನ್ನ ಎರಡು ಪ್ರಾಜೆಕ್ಟ್ಗಳಲ್ಲಿ ಬಿಝಿ ಇದ್ದೆ. ಎಲ್ಲರಿಗೂ “ಜೇಮ್ಸ್’ ಅಂದಾಕ್ಷಣ, ಬಾಂಡ್ ಸಿನಿಮಾ ಇರಬಹುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, “ಜೇಮ್ಸ್’ ಕಥೆ ಅದಲ್ಲ. ಮತ್ತೆ ಮನರಂಜನೆಯ ಚಿತ್ರವಿದು. ಹೆಸರಷ್ಟೇ ಜೇಮ್ಸ್. ಆ ಶೀರ್ಷಿಕೆ ಕೇಳಿದ ಬಹುತೇಕ ಚಿತ್ರರಂಗದ ನನ್ನ ಫ್ರೆಂಡ್ಸ್ ಇಷ್ಟಪಟ್ಟರು. ಫ್ಯಾನ್ಸ್ ಕೂಡ ಖುಷಿಪಟ್ಟರು. ಹಾಗಂತ, ಜೇಮ್ಸ್ “ಬಾಂಡ್’ ಕಥೆಯಂತೂ ಅಲ್ಲ, ಅಪ್ಪಾಜಿಯ “ಬಾಂಡ್’ ಸಿನಿಮಾಗಳಂತೆ ಇರುವುದೂ ಇಲ್ಲ. ಅದೊಂದು ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಅಷ್ಟೇ’ ಎನ್ನುವುದು ಪುನೀತ್ ಮಾತು. ಬೆಂಗಳೂರು,
ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರವಿವರ್ಮ ಸಾಹಸ, ದೀಪು.ಎಸ್.ಕುಮಾರ್ ಸಂಕಲನ, ರವಿ ಸಂತೆಹಕ್ಳು ಕಲೆ, ಎ.ಹರ್ಷ ನೃತ್ಯವಿದೆ. ಕಿಶೋರ್ ಪತ್ತಿಕೊಂಡ ಈ ಚಿತ್ರದ ನಿರ್ಮಾಪಕರು. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದ್ದು, ಕರ್ನಾಟಕ ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.