ಮ್ಯಾನ್ ಆಫ್ ದಿ ಮ್ಯಾಚ್ 39 ವರ್ಷಗಳಲ್ಲಿ 200 ಸಿನಿಮಾ
Team Udayavani, Mar 17, 2017, 3:50 AM IST
ನಟ ಸುಂದರ್‌ರಾಜ್ ಅಂದು ಎಂದಿಗಿಂತಲೂ ಉತ್ಸಾಹದಿಂದ ಓಡಾಡುತ್ತಿದ್ದರು. ಒಬ್ಬೊಬ್ಬರನ್ನೇ ಅವರು ವೇದಿಕೆ ಮೇಲೆ ಆಹ್ವಾನಿಸಿ, ಎಲ್ಲರನ್ನೂ ಪರಿಚಯಿಸುತ್ತಿದ್ದರು. ಅವರ ಆ ಉತ್ಸಾಹಕ್ಕೆ ಕಾರಣ “ಲಿಫ್ಟ್ಮ್ಯಾನ್’ ಸಿನಿಮಾ. “ಲಿಫ್ಟ್ಮ್ಯಾನ್’ ಸುಂದರ್‌ರಾಜ್ ಅವರ 200 ನೇ ಚಿತ್ರ. ಆ ಕಾರಣಕ್ಕಾಗಿಯೇ ದ್ವಾರಕೀಶ್ ಅವರಿಂದ ಚಿತ್ರದ ಟ್ರೇಲರ್ ರಿಲೀಸ್ ಮಾಡೋಕೆ ಕರೆದಿದ್ದರು ಸುಂದರ್‌ರಾಜ್. ದ್ವಾರಕೀಶ್ ಅವರನ್ನು ವೇದಿಕೆಗೆ ಆಹ್ವಾನಿಸಿ, ಅವರಿಗೆ ಚಿತ್ರತಂಡದವರನ್ನು ಪರಿಚಯಿಸಿಕೊಟ್ಟು, ಮೈಕನ್ನೂ ಕೊಟ್ಟು, ಮಾತು ಕೇಳುತ್ತಾ ನಿಂತರು ಸುಂದರ್‌ರಾಜ್.
“ಒಬ್ಬ ನಟ 200 ಸಿನಿಮಾ ಮಾಡುವುದು ಸಾಮಾನ್ಯವಲ್ಲ. ನಮ್ಮ ಕಾಲದಲ್ಲಿ ವರ್ಷಕ್ಕೆ 15 ಸಿನಿಮಾ ಆಗುತ್ತಿತ್ತು. ಆಗ ಹತ್ತು ವರ್ಷಕ್ಕೆ 150 ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಈಗ ಒಂದು ವರ್ಷಕ್ಕೆ 150 ಸಿನಿಮಾಗಳು ತಯಾರಾಗುತ್ತಿವೆ. ಸುಂದರ್‌ರಾಜ್ ನಮ್ಮ ಕಾಲದವನು. ಕಲೆ ಮೇಲೆ ಪ್ರೀತಿ ಇರದಿದ್ದರೆ ಇಷ್ಟೊಂದು ಚಿತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸುಂದರ್‌ರಾಜ್ ವೃತ್ತಿಜೀವನದ 200ನೇ ಸಿನಿಮಾದ ಕಥೆ ಆಯ್ಕೆ ಮಾಡಿಕೊಂಡಿರೋದೇ ವಿಶೇಷವಾಗಿದೆ. ನಾನು ಕೂಡ “ಲಿಫ್ಟ್ಮ್ಯಾನ್’ ಥರಾ ಅಂತ ಹೇಳ್ತಾರೆ. ಎಷ್ಟೋ ಜನನ ಕರೊRಂಡ್ ಬಂದೆ. ಬಂದವರು ಕೆಲವರು ಟಾಪ್ ಫ್ಲೋರ್‌ನಲ್ಲಿದ್ದಾರೆ. ಇನ್ನು ಕೆಲವರು ಮೊದಲ ಫ್ಲೋರ್‌ನಲ್ಲಿದ್ದಾರೆ, ಹಲವರು ಸೆಕೆಂಡ್ ಫ್ಲೋರ್‌ನಲ್ಲಿದ್ದಾರೆ. ಅದು ನನ್ನ ಕರ್ತವ್ಯ ಮಾತ್ರ. ಸುಂದರ್‌ರಾಜ್ ಇನ್ನೂ ಹೆಚ್ಚು ಸಿನಿಮಾ ಮಾಡಲಿ’ ಎಂದು ಹಾರೈಸಿದರು ದ್ವಾರಕೀಶ್.
“ದ್ವಾರಕೀಶ್ ಅವರ ಆಶೀರ್ವಾದ ನಮ್ಮ ಮೇಲಿರಬೇಕು’ ಅಂತ ಮಾತು ಶುರುಮಾಡಿದ ಸುಂದರ್‌ರಾಜ್, “ಇದು ನನ್ನ ಪಾಲಿಗೆ ಬಂದದ್ದೇ ಆಕಸ್ಮಿಕ. ಈಗಿನ ಚಿತ್ರಗಳನ್ನು ನೋಡಿದರೆ, ಖುಷಿಯಾಗುತ್ತೆ. ಅದರಲ್ಲೂ ಹೊಸಬರ ಜತೆ ಕೆಲಸ ಮಾಡೋದಂದರೆ ಒಂದು ರೀತಿಯ ಭಯ ಕಾಡುತ್ತೆ. ಹೊಸ ತಂಡದ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ವಿಧಾನ ಸೌಧದಲ್ಲಿ ಲಿಫ್ಟ್ಮ್ಯಾನ್ ಆಗಿ ಕೆಲಸ ಮಾಡುವವನ ಪಾತ್ರ ನನ್ನದು. ಎಷ್ಟೋ ಮಂದಿಯನ್ನು ಲಿಫ್ಟ್ನಲ್ಲಿ ಮೇಲೆ, ಕೆಳಗೆ ಕರೆದುಕೊಂಡು ಬಿಡುವ ವ್ಯಕ್ತಿ ಲೈಫಲ್ಲಿ ಏರಿಳಿತಗಳಾದಾಗ, ಅವನು ಎಂಥಾ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾನೆ ಎಂಬುದು ಕಥಾವಸ್ತು. ಇಲ್ಲಿ ನನ್ನ ಮಗಳು ಮೇಘನಾ ರಾಜ್ ಹಾಡೊಂದನ್ನು ಹಾಡಿದ್ದಾಳೆ. ಉಳಿದಂತೆ ನಿರ್ಮಾಪಕರು ಕಮರ್ಷಿಯಲ್ ಸಿನಿಮಾಗೆ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಶ್ರೀಧರ್, ಭಾವನಾತ್ಮಕ ಸಂಬಂಧಗಳ ಬೆಸುಗೆ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಇಲ್ಲಿ ನೋವು, ನಲಿವು, ಸಂಕಟ, ವ್ಯಥೆ ಎಲ್ಲವೂ ಇದೆ. ನೋಡಿದವರಿಗೆ ಹೊಸ ಅನುಭವ ಕೊಡುತ್ತೆ’ ಎಂದರು ಸುಂದರ್‌ರಾಜ್.
ನಿರ್ದೇಶಕ “ಕಾರಂಜಿ’ ಶ್ರೀಧರ್‌ಗೆ ಸುಂದರ್‌ರಾಜ್ ಮೆಚ್ಚಿನ ನಟರಂತೆ. “ಲಿಫ್ಟ್ಮ್ಯಾನ್’ ಅವರ 200 ನೇ ಸಿನಿಮಾ ಎಂಬುದು ನನಗೆ ಖುಷಿಕೊಟ್ಟಿದೆ. 30 ವರ್ಷ ಒಂದೇ ಲಿಫ್ಟ್ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುವ ವ್ಯಕ್ತಿಯ ಹಿಂದಿನ ಬದುಕನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಅನೇಕ ಕುತೂಹಲದ ವಿಷಯಗಳಿವೆ. ಬದುಕಲ್ಲಿ ದೊಡ್ಡ ನಿರೀಕ್ಷೆಗಳೇ ಇಲ್ಲದ ವ್ಯಕ್ತಿಯ ಚಿತ್ರಣವಿದು’ ಎಂದರು ಶ್ರೀಧರ್.
ನಿರ್ಮಾಪಕ ರಾಮನಾಯ್ಕಗೆ ಒಳ್ಳೇ ಸಿನಿಮಾ ನಿರ್ಮಿಸಿದ ಖುಷಿ ಇದೆಯಂತೆ. ಮೇಘನಾ ರಾಜ್‌ಗೆ ಅಪ್ಪನ ಚಿತ್ರದಲ್ಲಿ ಹಾಡೋಕೆ ಅವಕಾಶ ಸಿಕ್ಕಿದ್ದು ಮರೆಯದ ಅನುಭವವಂತೆ. ಇನ್ನು, ಸಂಗೀತ ನಿರ್ದೇಶಕ ಪ್ರವೀಣ್ ಗೋಡಿVಂಡಿ ಅವರಿಲ್ಲಿ ಹಿನ್ನೆಲೆ ಸಂಗೀತದ ಜತೆ ಎರಡು ಹಾಡು ಕೊಟ್ಟಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.