ತಪ್ಪು ದಾರಿ ಹಿಡಿದವನ ವ್ಯಥೆ
Team Udayavani, Jun 1, 2018, 6:48 PM IST
ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ಹುಡುಗನ ಮನಸ್ಸು ಏನಾಗುತ್ತದೆ, ಆತನ ವರ್ತನೆ ಹೇಗಿರುತ್ತದೆ ಎಂಬ ಅಂಶಗಳನ್ನಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈ ತರಹದ ಸಿನಿಮಾಗಳಲ್ಲಿ ಕೈ ಕೊಡುವ ಹುಡುಗಿಯರನ್ನು ಬೈಯ್ಯುತ್ತಾ ಶಿಳ್ಳೆ ಗಿಟ್ಟಿಸಿದ ಸಿನಿಮಾಗಳೂ ಸಾಕಷ್ಟಿವೆ. ಈಗ ಅದೇ ಸಾಲಿಗೆ ಸೇರುವ ಮತ್ತೂಂದು “ರಾಂಗ್ ರೂಟ್-9′. ಸಿನಿಮಾದ ಟೈಟಲ್ ಕೇಳಿದಾಗ ತುಂಬಾ ವಿಚಿತ್ರವಾಗಿದೆ ಎನಿಸಬಹುದು. ಆದರೆ, ನಿರ್ದೇಶಕರಿಗೆ ಈ ಟೈಟಲ್ ಖುಷಿಕೊಟ್ಟಿದೆ. ಬ್ಯಾಂಕ್ ಪರಶುರಾಮ್ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಕೇವಲ ನಿರ್ದೇಶನ ಮಾತ್ರವಲ್ಲ, ನಿರ್ಮಾಣ ಕೂಡಾ ಇವರದ್ದೇ.
ಎಲ್ಲಾ ಓಕೆ “ರಾಂಗ್ ರೂಟ್-9’ನಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಅಮಾಯಕ ಯುವಕನಿಗೆ ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ಆತನ ಮನಸ್ಸಿನ ಮೇಲೆ ಯಾವ ತರಹ ಪರಿಣಾಮವಾಗುತ್ತದೆ. ಆ ಸಂದರ್ಭದಲ್ಲಿ ಏನೆಲ್ಲಾ ಮಾಡುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಹುಡುಗಿ ಕೈ ಕೊಟ್ಟಾಗ ಹುಡುಗ 9 ತಪ್ಪುದಾರಿಗೆ ಇಳಿಯುತ್ತಾನಂತೆ. ಆ ಹಿನ್ನೆಲೆಯಲ್ಲಿ ಚಿತ್ರಕ್ಕೆ “ರಾಂಗ್ ರೂಟ್-9′ ಎಂದು ಟೈಟಲ್ ಇಡಲಾಗಿದೆ. ಹಾಗಾದರೆ ಆ 9 ತಪ್ಪುದಾರಿಗಳು ಯಾವುವು ಎಂದು ನೀವು ಕೇಳಬಹುದು. ಆದರೆ, ನಿರ್ದೇಶಕರು ಅದಕ್ಕೆ ಈಗಲೇ ಉತ್ತರಿಸಲು ಸಿದ್ಧರಿಲ್ಲ. ತಪ್ಪುದಾರಿಗಳನ್ನು ತೆರೆಮೇಲೆಯೇ ನೋಡಬೇಕೆನ್ನುತ್ತಾರೆ.
ಚಿತ್ರದಲ್ಲಿ ಮಹೇಶ್ ದೇವ್ ನಾಯಕರಾಗಿ ನಟಿಸಿದ್ದಾರೆ. ಈಗಾಗಲೇ “ಪರಚಂಡಿ’ ಚಿತ್ರದಲ್ಲಿ ನಟಿಸಿರುವ ಮಹೇಶ್‌ಗೆ “ರಾಂಗ್ ರೂಟ್-9′ ಮೂರನೇ ಸಿನಿಮಾ. ಈ ಸಿನಿಮಾದಲ್ಲಿ ಅವರು ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಇಷ್ಟು ಹೇಳಿದ ಮೇಲೆ ಮುಂದಿನದ್ದನ್ನು ಊಹಿಸಿಕೊಳ್ಳೋದು ಸುಲಭ. ವಿದ್ಯಾ ಗೌಡ ಚಿತ್ರದ ನಾಯಕಿ.
ಚಿತ್ರಕ್ಕೆ ಮಂಜು ಕವಿಯವರ ಸಾಹಿತ್ಯ ಸಂಗೀತವಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಪ್ಯಾಥೋ, ಡ್ಯುಯೆಟ್ ಹಾಗೂ ಸೋಲೋ ಹಾಡುಗಳು ಇವೆಯಂತೆ. ಸಂಗೀತ ನಿರ್ದೇಶಕರು ಹೊಸಬರಿಗೆ ಅವಕಾಶ ಕೊಟ್ಟ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ಸಂತೋಷ್ ಖಳನಟರಾಗಿ ನಟಿಸಿದ್ದಾರೆ. ಮೈಸೂರು, ಮಡಿಕೇರಿ ಹಾಗೂ ಗೊಮ್ಮಟಗಿರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಅಂದಹಾಗೆ, ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, “ಬಿಗ್‌ಬಾಸ್ ಸೀಸನ್-4′ ವಿಜೇತ ಪ್ರಥಮ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.