ಹೊಸ ಹರಿ ಕಥೆ! ಕತ್ತಲ ರಾತ್ರಿಗಳು; ನಾಲ್ಕೇ ಪಾತ್ರಗಳು
Team Udayavani, Mar 10, 2017, 3:45 AM IST
ಅದೊಂದು ದಿನ ನಿರ್ದೇಶಕ ಪವನ್ ಒಡೆಯರ್‌ಗೆ ಒಬ್ಬ ಹುಡುಗ ಬಂದು “ಎವಿಲ್ ಡೆಡ್’ ಎಂಬ ಕಿರುಚಿತ್ರವೊಂದನ್ನು ತೋರಿಸುತ್ತಾರೆ. ಹಾರರ್ ಜಾನರ್‌ನಲ್ಲಿದ್ದ ಆ ಕಿರುಚಿತ್ರ ನೋಡಿ ಪವನ್ ಒಡೆಯರ್‌ಗೆ ಥ್ರಿಲ್ ಆಗುತ್ತಾರೆ. ಈ ಹುಡುಗನಲ್ಲಿ ಟ್ಯಾಲೆಂಟ್ ಇದೆ, ಮುಂದೊಂದು ದಿನ ಬಳಸಿಕೊಳ್ಳಬಹುದು ಎಂದು ಮನಸ್ಸನಲ್ಲಿ ಅಂದುಕೊಂಡು ಹುಡುಗನನ್ನು ಕಳುಹಿಸಿಕೊಡುತ್ತಾರೆ. ಕಟ್ ಮಾಡಿದರೆ, ನಿರ್ಮಾಪಕರಿಬ್ಬರು ಬಂದು ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕೆಂದು ಪವನ್ ಅವರನ್ನು ಕೇಳಿಕೊಳ್ಳುತ್ತಾರೆ. ಪವನ್ ಬೇರೆ ಸಿನಿಮಾದಲ್ಲಿ ಕಮಿಟ್ ಆಗಿದ್ದ ಕಾರಣ ಅವರಿಗೆ ತಟ್ಟನೆ ನೆನಪಿಗೆ ಬಂದಿದ್ದು “ಎವಿಲ್ ಡೆಡ್’ ಹುಡುಗ. ತಟ್ಟನೆ ಫೋನ್ ಹಾಕಿ ಆ ಹುಡುಗನನ್ನು ಕರೆಸಿಕೊಂಡು ನಿರ್ಮಾಪಕರಿಗೆ ಕಥೆ ಹೇಳಿಸುತ್ತಾರೆ. ಆದರೆ, ಆ ಕಥೆ ನಿರ್ಮಾಪಕರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಅಷ್ಟರಲ್ಲಿ ಆ ಹುಡುಗ “ಸಾರ್ 15 ನಿಮಿಷ ಟೈಮ್ ಕೊಡಿ, ಇನ್ನೊಂದು ಕಥೆ ಹೇಳುತ್ತೇನೆ’ ಎಂದು ಹೇಳಿ, ಮತ್ತೂಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೇಳುತ್ತಾರೆ. ಕಥೆ ಕೇಳಿ ಎಲ್ಲರೂ ಖುಷ್. ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ರೆಡಿಯಾಗುತ್ತಾರೆ. ಈಗ ಚಿತ್ರೀಕರಣ ಕೂಡಾ ಮುಗಿದಿದೆ. ಆ ಸಿನಿಮಾ “ಐರಾ’. “ಎವಿಲ್ ಡೆಡ್’ ಹುಡುಗ ಹರಿಕೃಷ್ಣ. ಸಂಜೀವ್ ಕಾಸನೀಸ್ ಹಾಗೂ ಹರ್ಷ ಕಾಸನೀಸ್, “ಐರಾ’ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಚಿತ್ರದ ಮೋಶನ್ ಫೋಸ್ಟರ್ ಬಿಡುಗಡೆಯಾಗಿದೆ.
“ನಿರ್ದೇಶಕ ಹರಿಕೃಷ್ಣ ಅವರಲ್ಲಿ ತುಂಬಾ ಟ್ಯಾಲೆಂಟ್ ಇದೆ. ನಾನು ಅವರ “ಎವಿಲ್ ಡೆಡ್’ ನೋಡಿ ಖುಷಿಯಾಗಿದ್ದೆ. ಹಾಗಾಗಿ, ಈ ಅವಕಾಶ ಅವರಿಗೆ ಸಿಕ್ಕಿದೆ. ಹೊಸ ಬಗೆಯ ಕಥೆ ಹಾಗೂ ನಿರೂಪಣೆಯನ್ನು ಈ ಸಿನಿಮಾದಲ್ಲಿ ನೋಡಬಹುದು. ನಿರ್ಮಾಪಕರಾದ ಸಂಜೀವ್ ಹಾಗೂ ಹರ್ಷ ಅವರು ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ಪವನ್ ಒಡೆಯರ್. ಪವನ್ ಒಡೆಯರ್ ಈ ಸಿನಿಮಾದ ಲೈನಪ್ ಪ್ರೊಡಕ್ಷನ್‌ನಲ್ಲಿದ್ದಾರೆ. ನಿರ್ದೇಶಕ ಹರಿಕೃಷ್ಣ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. “ಇದು ನನ್ನ ಮೊದಲ ಸಿನಿಮಾ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ದು, ನಾಲ್ಕು ಪಾತ್ರಗಳ ಸುತ್ತ ಸುತ್ತಲಿದೆ’ ಎಂದರು. ಅಂದಹಾಗೆ, ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇಡೀ ಸಿನಿಮಾ ರಾತ್ರಿ ಚಿತ್ರೀಕರಣವಾಗಿರುವುದು. ಚಿತ್ರದ ಕಥೆ ನೈಟ್ ಎಫೆಕ್ಟ್‌ನಲ್ಲಿ ನಡೆಯುತ್ತದೆಯಂತೆ. ಚಿತ್ರದಲ್ಲಿ ವಸಿಷ್ಠ, ರಾಜವರ್ಧನ್, ಕ್ರಿಷಿ ತಪಂಡ ಹಾಗೂ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವಸಿಷ್ಠ ಅವರಿಗೆ ಹಿಂದೊಮ್ಮೆ ಹರಿಕೃಷ್ಣ “ಐರಾ’ ಕಥೆ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ವಸಿಷ್ಠ “ಮಾಡೋಕೆ ರೆಡಿ’ ಎಂದರಂತೆ. ಕಥೆ ಹೇಳಿ ಹೋದ ಹರಿಕೃಷ್ಣ ಅವರ ಪತ್ತೆಯೇ ಇರಲಿಲ್ಲವಂತೆ. ಆ ನಂತರ ಅದೊಂದು ದಿನ ಪವನ್ ಒಡೆಯರ್ ಫೋನ್ ಮಾಡಿ, “ಐರಾ ಎಂಬ ಸಿನಿಮಾದಲ್ಲಿ ನಿಮಗೊಂದು ಪಾತ್ರವಿದೆ. ಮಾಡುತ್ತೀರಾ’ ಎಂದು ಕೇಳಿದರಂತೆ. “ಪವನ್ ಹೇಳಿದ ಕೂಡಲೇ ನಾನು ಖುಷಿಯಿಂದ ಒಪ್ಪಿಕೊಂಡೆ. ತುಂಬಾ ಹಸಿವಿರುವ ತಂಡವಿದು.
ತುಂಬಾ ಚೆನ್ನಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಹರಿಕೃಷ್ಣ’ ಎಂದು ಸಿನಿಮಾ ಬಗ್ಗೆ ಹೇಳಿದರು. ರಾಜವರ್ಧನ್ ಇಲ್ಲಿ ನೀಲ್ ಅನ್ನೋ ಪಾತ್ರ ಮಾಡಿದ್ದಾರಂತೆ. ಇಂಡಿಯಾ-ಪಾಕಿಸ್ತಾನ ಮ್ಯಾಚ್ ನೋಡುವಾಗ ಇರುವಂತಹ ಕುತೂಹಲ ಈ ಸಿನಿಮಾ ನೋಡುವಾಗ ಇರುತ್ತದೆ ಎಂಬುದು ರಾಜವರ್ಧನ್ ಮಾತು. ಚಿತ್ರದಲ್ಲಿ ಕ್ರಿಷಿ ತಪಂಡ ನಾಯಕಿಯಾಗಿ ನಟಿಸಿದ್ದು, ಅವರಿಗೂ “ಐರಾ’ ಒಳ್ಳೆಯ ಅನುಭವ ಕೊಟ್ಟಿದೆಯಂತೆ. ನಿರ್ಮಾಪಕರಾದ ಸಂಜೀವ್ ಕಾಸನೀಸ್ ಹಾಗೂ ಹರ್ಷ ಕಾಸನೀಸ್ ಅವರಿಗೆ ಕನ್ನಡದಲ್ಲೊಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ. ಅದು ಈ ಸಿನಿಮಾ ಮೂಲಕ ಈಡೇರಿದೆಯಂತೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.