ಆ್ಯಕ್ಷನ್ ಅರ್ಜುನ್ ಗೌಡ ಡಿ.31ರಂದು ರಿಲೀಸ್
Team Udayavani, Dec 24, 2021, 11:34 AM IST
ನಿರ್ಮಾಪಕ ರಾಮು ಅವರ ಡ್ರೀಮ್ ಪ್ರಾಜೆಕ್ಟ್ “ಅರ್ಜುನ್ ಗೌಡ’. ಆದರೆ, ಆ ಚಿತ್ರ ತೆರೆಕಾಣುವ ಮುನ್ನವೇ ರಾಮು ಅವರು ಕೋವಿಡ್‌ಗೆ ಬಲಿಯಾದರು. ಈಗ ಅವರ ಕನಸಿನ ಚಿತ್ರ “ಅರ್ಜುನ್ ಗೌಡ’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಡಿಸೆಂಬರ್ 31ರಂದು ತೆರೆಕಾಣುತ್ತಿದೆ.
ಪ್ರಜ್ವಲ್ ದೇವರಾಜ್ ನಟನೆಯ ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿ. “ಅರ್ಜುನ್ ಗೌಡ ನಂತರ ಮತ್ತೂಂದು ಸಿನಿಮಾ ಮಾಡುವ ಎಂದು ರಾಮು ಅವರು ಹೇಳಿದ್ದರು. ಆದರೆ, ಅದು ಈಡೇರಲೇ ಇಲ್ಲ. ಈಗ ಅರ್ಜುನ್ ಗೌಡ ಬಿಡುಗಡೆಯಾಗುತ್ತಿದ್ದು, ಎಲ್ಲರೂ ನೋಡಿ ಪ್ರೋತ್ಸಾಹಿಸಿ’ ಎಂದು ಕೇಳಿಕೊಂಡರು ಪ್ರಜ್ವಲ್.
ನಾಯಕಿ ಪ್ರಿಯಾಂಕಾ ಮಾತನಾಡಿ, ಇಲ್ಲಿ ಜಾಹ್ನವಿ ಎಂಬ ಪಾತ್ರ ನನ್ನದು. ನಾಯಕನಿಗೆ ಉತ್ತಮ ಗೆಳತಿ. ಆತನನ್ನು ತುಂಬಾ ಪ್ರೀತಿಸುವ ಯುವತಿ. ಪ್ರೀತಿ ಮೂಡಿದ ನಂತರ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು. ಚಿತ್ರ ಬಿಡುಗಡೆಗೆ ನಾನು ಕಾತುರದಲ್ಲಿದ್ದೇನೆ ಎಂದರು.
ಇದನ್ನೂ ಓದಿ:‘ಬಡವ ರಾಸ್ಕಲ್’ ನಲ್ಲಿ ಡಾಲಿ ಕನಸು
ಇದೊಂದು ಕಂಪ್ಲೀಟ್ ಆ್ಯಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ. ಒಂದೊಳ್ಳೆ ಆ್ಯಕ್ಷನ್ ಸಿನಿಮಾ ಮಾಡಬೇಕೆಂಬ ಕನಸು ಈ ಸಿನಿಮಾ ಮೂಲಕ ನನಸಾಗಿದೆ. ಒಂದು ಲೈನ್ ಕಥೆ ಕೇಳಿದ ಕೂಡಲೇ ಪ್ರಜ್ವಲ್ ಇಷ್ಟಪಟ್ಟು ಈ ಸಿನಿಮಾ ಒಪ್ಪಿಕೊಂಡರು. ಎಂಟರ್ ಟೈನ್ಮೆಂಟ್ ಜೊತೆಗೆ ಇಂದಿನ ಯೂಥ್ಸ್ಗೆ ಕನೆಕ್ಟ್ ಆಗುವಂತ ಕೆಲ ವಿಷಯಗಳನ್ನೂ ಸಿನಿಮಾದಲ್ಲಿ ಹೇಳಿದ್ದೇವೆ. ನಮ್ಮ ನಡುವೆಯೇ ನಡೆದು, ಮರೆತು ಹೋದ ಕೆಲ ಸಂಗತಿಗಳನ್ನು ಈ ಸಿನಿಮಾ ಮೂಲಕ ಹೇಳಿದ್ದೇವೆ. 6 ಭರ್ಜರಿ ಫೈಟ್ಸ್, 4 ಹಾಡು ಚಿತ್ರದಲ್ಲಿದೆ. ಮಾಸ್ ಆಡಿಯನ್ಸ್‌ಗೆ ಬೇಕಾದ ಎಲ್ಲ ಎಂಟರ್‌ಟೈನ್ಮೆಂಟ್ ಅಂಶಗಳೂ ಈ ಸಿನಿಮಾದಲ್ಲಿ ಸಿಗುತ್ತಿದೆ ಎನ್ನುವುದು ನಿರ್ದೇಶಕ ಲಕ್ಕಿ ಶಂಕರ್ ಮಾತು.
ಇನ್ನು, ಸುಮಾರು 200ಕ್ಕೂ ಹೆಚ್ಚು ತಂತ್ರಜ್ಞರನ್ನು ಬಳಸಿಕೊಂಡು “ಅರ್ಜುನ್ ಗೌಡ’ ಚಿತ್ರದ ರೀ-ರೆಕಾರ್ಡಿಂಗ್ ಕಾರ್ಯಗಳನ್ನು ಬೆಂಗಳೂರು ಮಾತ್ರವಲ್ಲದೆ ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತದ ಪ್ರಸಿದ್ದ ಸ್ಟುಡಿಯೋಗಳಲ್ಲಿ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಅರ್ಜುನ್ ಗೌಡ’ ಚಿತ್ರದ ಟ್ರೇಲರ್ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಆ್ಯಕ್ಷನ್ ದೃಶ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.