‘ಇದು ಮನೆ ಮಂದಿ ನೋಡುವ ಸಿನ್ಮಾ’: ಝೈದ್ ಖಾನ್ ರ ‘ಬನಾರಸ್’ ಇಂದು ತೆರೆಗೆ
Team Udayavani, Nov 4, 2022, 9:14 AM IST
“ಬನಾರಸ್’ ಸಿನಿಮಾದ ಮೂಲಕ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನವ ನಾಯಕ ನಟನಾಗಿ ಬೆಳ್ಳಿತೆರೆಗೆ ಇಂದು ಪರಿಚಯವಾಗುತ್ತಿದ್ದಾರೆ.
ಈಗಾಗಲೇ “ಬನಾರಸ್’ ಚಿತ್ರದ ಟ್ರೇಲರ್, ಹಾಡುಗಳು ಹಿಟ್‌ಲಿಸ್ಟ್ ಸೇರಿದ್ದು, ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರವನ್ನು ತಿಲಕ್‌ರಾಜ್ ಬಲ್ಲಾಳ್ ನಿರ್ಮಿಸಿದ್ದಾರೆ.
ಸೋನಾಲ್ ಮೊಂತೆರೋ ಈ ಚಿತ್ರದ ನಾಯಕಿ. ಅಂದಹಾಗೆ, ಇದು ಪ್ಯಾನ್ ಇಂಡಿಯಾ ಚಿತ್ರ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಯ ಖುಷಿಯಲ್ಲಿರುವ ಝೈದ್ ಖಾನ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
“ಇದೊಂದು ಕಂಪ್ಲೀಟ್ ಫ್ಯಾಮಿಲಿ, ಲವ್ ಸಬ್ಜೆಕ್ಟ್ ಸಿನಿಮಾ. ಎಲ್ಲ ಥರದ ಆಡಿಯನ್ಸ್ ಗೂ ಇಷ್ಟವಾಗುವಂಥ. ಎಲ್ಲಾ ಭಾಷೆಗಳಿಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಇರುವಂಥ ಸಿನಿಮಾ. ಇದರಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್ ಎಲ್ಲವೂ ಇದೆ. ಸಿನಿಮಾದ ಮೇಕಿಂಗ್ ಹೊಸಥರದಲ್ಲಿದೆ. ಕನ್ನಡ ಆಡಿಯನ್ಸ್‌ಗೆ ಒಂದು ಫ್ರೆಶ್ ಫೀಲ್ ಕೊಡುವಂಥ ಸಿನಿಮಾ ಆಗಲಿದೆ ಅನ್ನೋದು ನಮ್ಮ ಭರವಸೆ. ನಾನು ಸಿನಿಮಾದ ಬಗ್ಗೆ ಈಗಲೇ ಹೇಳ್ಳೋದಕ್ಕಿಂತ, ಜನರೇ ನೋಡಿ ಅದರ ಬಗ್ಗೆ ಖಂಡಿತಾ ಮಾತಾಡ್ತಾರೆ. ಟ್ರೇಲರ್‌ಗೆ ಬಿಗ್ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ಕೂಡ ಹಾಗೇ ಇರುತ್ತದೆ’ ಎನ್ನುತ್ತಾರೆ.
ಇದನ್ನೂ ಓದಿ:ದೈವ ಮುಖವರ್ಣಿಕೆ ಪ್ರಕರಣ: ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಅರ್ಪಿಸಿದ ಆಂಧ್ರದ ಯುವತಿ
ತಮ್ಮ ಮೊದಲ ಸಿನಿಮಾಕ್ಕೆ ಕಥೆ, ನಿರ್ದೇಶಕರ ಹುಡುಕಾಟದ ಬಗ್ಗೆ ಹೇಳುವ ಝೈದ್, “ಸಿನಿಮಾಕ್ಕೆ ನಾನು ರೆಡಿಯಾಗಿದ್ದರೂ, ನನಗೆ ಪ್ರೊಡ್ನೂಸರ್, ಒಳ್ಳೆಯ ಕಥೆ, ಒಳ್ಳೆಯ ಡೈರೆಕ್ಟರ್ ಸಿಗಬೇಕಿತ್ತು. ಕನ್ನಡ, ತಮಿಳು, ತೆಲುಗು, ಮಲೆಯಾಳಂನ 150ಕ್ಕೂ ಹೆಚ್ಚು ಡೈರೆಕ್ಟರ್ ನ ಮೀಟ್ ಮಾಡಿದ್ದೀನಿ. ಲೆಕ್ಕವಿಲ್ಲದಷ್ಟು ರೈಟರ್ನ ಭೇಟಿ ಮಾಡಿದ್ದೇನೆ. ಒಳ್ಳೆಯ ಡೈರೆಕ್ಟರ್ ಸಿಕ್ಕರೂ, ಒಳ್ಳೆಯ ಕಥೆ ಸಿಗುತ್ತಿರಲಿಲ್ಲ. ಒಳ್ಳೆಯ ಕಥೆ ಸಿಕ್ಕರೂ, ಒಳ್ಳೆಯ ಡೈರೆಕ್ಟರ್ ಸಿಗುತ್ತಿರಲಿಲ್ಲ. ಎಲ್ಲ ಸಿಕ್ಕಿದ್ದರೂ ಟೈಮ್ ಹೊಂದಾಣಿಕೆ ಆಗುತ್ತಿರಲಿಲ್ಲ. ನನ್ನ ಮೊದಲ ಸಿನಿಮಾ ಹೀಗೇ ಬರಬೇಕು ಅನ್ನೋದು ನನಗೆ ಸ್ಪಷ್ಟವಾಗಿದ್ದರಿಂದ, ಸಿನಿಮಾಕ್ಕೆ ಸಾಕಷ್ಟು ಟೈಮ್ ತೆಗೆದುಕೊಂಡಿದ್ದೇನೆ. ನನ್ನ ಎಫರ್ಟ್ ನೋಡಿದ, ನಮ್ಮ ತಂದೆಯ ಫ್ರೆಂಡ್ ತಿಲಕರಾಜ್ ಬಲ್ಲಾಳ್, ನಿನ್ನ ಸಿನಿಮಾವನ್ನ ನಾನೇ ಪ್ರೊಡ್ನೂಸ್ ಮಾಡ್ತೀನಿ ಅಂಥ ಮುಂದೆ ಬಂದರು. ಕೊನೆಗೂ ನಾನು ಅಂದುಕೊಂಡಂತ ಕಥೆ, ಪ್ರೊಡ್ನೂಸರ್, ಡೈರೆಕ್ಟರ್‌ಎಲ್ಲರೂ ಸಿಕ್ಕಿದರು’ ಎಂದು ಸಿನಿಮಾ ಆರಂಭದ ಬಗ್ಗೆ ಹೇಳುತ್ತಾರೆ.
ಇನ್ನು, ಈಗಾಗಲೇ ಬೇರೆ ಬೇರೆ ಭಾಷೆಯ ಪ್ರತಿಷ್ಟಿತ ನಿರ್ಮಾಣ, ವಿತರಣಾ ಸಂಸ್ಥೆಗಳು ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿವೆ. ಒಬ್ಬ ಹೊಸ ಹೀರೋನ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ. ಕನ್ನಡದಲ್ಲಿ “ಕೆವಿಎನ್’ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.