‘ಕ್ಯಾಂಪಸ್ ಕ್ರಾಂತಿ’ ಮರ್ಡರ್ ಮಿಸ್ಟ್ರಿ ಜೊತೆ ಕನ್ನಡ ಪ್ರೇಮ
Team Udayavani, Feb 10, 2023, 3:08 PM IST
ನಿರ್ದೇಶಕ ಆರ್.ಎಸ್. ಸಂತೋಷ್ ಅವರ ಮೂರನೇ ಚಿತ್ರ “ಕ್ಯಾಂಪಸ್ ಕ್ರಾಂತಿ’. ಇದೀಗ “ಕ್ಯಾಂಪಸ್ ಕ್ರಾಂತಿ’ ಸಿನಿಮಾ ಮೂಲಕ ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ತೆರೆಮೇಲೆ ಬರಲು ರೆಡಿಯಾಗಿದ್ದಾರೆ.
ಇತ್ತೀಚೆಗೆ ತನ್ನ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ನಿರ್ಮಾಪಕ ಚಿನ್ನೇ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರ ನಿರ್ದೇಶಕ ಸಂತೋಷ ಮಾತನಾಡಿ, “ಕ್ಯಾಂಪಸ್ ಕ್ರಾಂತಿ ಕಾಲೇಜು ಸುತ್ತ ಮುತ್ತ, ಬೆಳಗಾವಿ ಬಾರ್ಡರ್‌ನಲ್ಲಿ ನಡೆಯುವ ಕಥೆ ರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ನಿಲ್ಲಿಸಿದ ಘಟನೆಗೆ ಸಂಬಂಧಿಸಿದ ಕಥೆ ಇದಾಗಿದೆ. ಆ ಭಾಗದಲ್ಲಿ ನಡೆಯುವ ಕ್ರೈಂ, ರೌಡಿಸಂ ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಹೇಗೆ ಅಲ್ಲಿನ ರಹಸ್ಯವನ್ನು ಬಯಲು ಮಾಡುತ್ತಾರೆ. ಹಾಗೆಯೇ ನಮ್ಮಕನ್ನಡ ತನವನ್ನು ಎತ್ತಿ ಹಿಡಿಯುವ ಕನ್ನಡ ಪರ ಚಿತ್ರವು ಇದಾಗಿದೆ ‘ ಎಂದರು.
ಸಂಪೂರ್ಣ ಹೊಸಬರನ್ನೇ ಹೊಂದಿರುವ ಚಿತ್ರದಲ್ಲಿ ಆರ್ಯ, ಅಲಂಕಾರ್, ಆರತಿ ಮತ್ತು ಇಶಾನ ನಾಯಕ,ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದ ಇತರ ಪ್ರಮುಖ ಪಾತ್ರದಲ್ಲಿ ಹನುಮಂತೇ ಗೌಡ, ಕೀರ್ತಿರಾಜ್ ನಟಿಸಿದ್ದಾರೆ.
ವಾಣಿ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.