ದಿನ ಚೆನ್ನಾಗಿದೆ ಅಂತ ಚಿತ್ರ ಶುರು ಆಯ್ತು!
Team Udayavani, Sep 1, 2017, 6:05 AM IST
“ದಿನ ಚೆನ್ನಾಗಿತ್ತು, ಅದಕ್ಕೆ ಮುಹೂರ್ತ ಮಾಡಿದೆವು. ಕಥೆಯ ಒನ್‌ಲೈನ್ ಅಷ್ಟೇ ಇದೆ. ಮಿಕ್ಕಿದ್ದೆಲ್ಲಾ ಇನ್ನಷ್ಟೇ ಆಗಬೇಕು …’
– ಹೀಗೆ ಹೇಳಿದರು ನಿರ್ದೇಶಕ ಎಂ.ಡಿ.ಶ್ರೀಧರ್. ಸಾಮಾನ್ಯವಾಗಿ ನಿರ್ದೇಶಕ ಎಂ.ಡಿ.ಶ್ರೀಧರ್ ಸಿನಿಮಾ ಎಂದರೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಸಿಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದರೆ, ಈ ಬಾರಿ ಮಾತ್ರ ಶ್ರೀಧರ್ ಅವರಲ್ಲೂ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅಂದಹಾಗೆ, ಅವರ ನಿರ್ದೇಶನದ ಹೊಸ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಕಥೆಯೂ ಅಂತಿಮವಾಗಿಲ್ಲ, ಒನ್‌ಲೈನ್ ಕಥೆಯಷ್ಟೇ ಇದ್ದು, ಅದನ್ನು ಮುಂದೆ ಬೆಳೆಸಿಕೊಂಡು ಹೋಗಬೇಕಷ್ಟೇ. ಈ ಚಿತ್ರದಲ್ಲಿ ಸುಶೀಲ್ ಎಂಬ ಹೊಸ ನಟ ನಟಿಸುತ್ತಿದ್ದಾರೆ. ವೆಂಕಟೇಶ್ ಎನ್ನುವವರು ಈ ಸಿನಿಮಾದ ನಿರ್ಮಾಪಕರು.
“ದಿನ ಚೆನ್ನಾಗಿದೆ ಎಂಬ ಕಾರಣಕ್ಕೆ ಇವತ್ತು ಮುಹೂರ್ತ ಮಾಡಿದ್ದೇವೆ. ಒನ್‌ಲೈನ್ ಅಷ್ಟೇ ರೆಡಿ ಇದೆ. ರಗಡ್ ಆಗಿರುವಂತಹ ಥ್ರಿಲ್ಲರ್ ಸಿನಿಮಾ. ಹೀರೋ ಸುಶೀಲ್ ಜೊತೆಗೆ ಹೊಸ ಹುಡುಗರು ಇರುತ್ತಾರೆ. ಉಳಿದಂತೆ ಯಾವುದೂ ಅಂತಿಮವಾಗಿಲ್ಲ. ನಮ್ಮದೇ ಒಂದು ತಂಡವಿದೆ. ಎಲ್ಲರು ಸೇರಿ ಕಥೆಗೊಂದು ಅಂತಿಮ ರೂಪ ಕೊಡಬೇಕಿದೆ. ಆ ನಂತರ ಎಲ್ಲವೂ ಅಂತಿಮವಾಗಲಿದೆ. ಕಥೆ, ಚಿತ್ರಕಥೆಯ ಕೆಲಸ ಪೂರ್ಣವಾದ ಬಳಿಕ ಚಿತ್ರೀಕರಣಕ್ಕೆ ಹೋಗುತ್ತೇವೆ. ಇದಲ್ಲದೇ ಇನ್ನೆರಡು ಪ್ರಾಜೆಕ್ಟ್ಗಳಿವೆ. ದರ್ಶನ್ ಅವರಿಗೊಂದು ಸಿನಿಮಾ ಮಾಡುತ್ತಿದ್ದೇನೆ. ಈ ಎರಡು ಸಿನಿಮಾಗಳನ್ನು ಮುಗಿಸಿಕೊಂಡು ದರ್ಶನ್ ಸಿನಿಮಾ ಮಾಡುತ್ತೇನೆ’ ಎನ್ನುವ ಮೂಲಕ ಶ್ರೀಧರ್ ತಮ್ಮ ಹೊಸ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡಲಿಲ್ಲ.
ಚಿತ್ರದ ನಾಯಕ ಸುಶೀಲ್‌ಗೆ ಇಲ್ಲಿ ರಗಡ್ ಪಾತ್ರವಿದೆಯಂತೆ. ಶ್ರೀಧರ್ ಅವರು ಅನೇಕ ಯಶಸ್ವಿ ಚಿತ್ರಗಳನ್ನೇ ಕೊಟ್ಟಿದ್ದು, ಅವರು ಹೇಳಿದ ಒನ್‌ಲೈನ್ ಇಷ್ಟಪಟ್ಟು ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಪೂರ್ವತಯಾರಿಯ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸುವುದಾಗಿ ಹೇಳಿಕೊಂಡರು. ಚಿತ್ರಕ್ಕೆ ಕವಿರಾಜ್ ಹಾಗೂ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಮತ್ತೂಮ್ಮೆ ಒಂದೇ ತಂಡವಾಗಿ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಳ್ಳುವಷ್ಟಕ್ಕೆ ಅವರ ಮಾತು ಮುಗಿದು ಹೋಯಿತು. ನಿರ್ಮಾಪಕ ವೆಂಕಟೇಶ್ ಕೂಡಾ ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.