ಅಣ್ಣನ ಪ್ರೋತ್ಸಾಹ ಮರೆಯಲು ಸಾಧ್ಯವೇ?
Team Udayavani, Nov 30, 2018, 6:00 AM IST
ಅಣ್ಣ ಎಂಬ ಪದಕ್ಕೆ ತಕ್ಕನಾದ ಹೆಸರು ಅಂಬರೀಶಣ್ಣವರದು. ನಾನು ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದೆ. ಅದಕ್ಕೆ ಕಾರಣ ಅವರ ಜೊತೆಗಿನ ಒಡನಾಟ, ಅವರು ತೋರಿಸುತ್ತಿದ್ದ ಪ್ರೀತಿ. ನನ್ನ ಮತ್ತು ಅವರ ಒಡನಾಟ ಆರಂಭವಾಗಿದ್ದು “ನ್ಯಾಯ ನೀತಿ ಧರ್ಮ’ ಚಿತ್ರದಿಂದ. ಆ ಸಿನಿಮಾದಲ್ಲಿ ನಾನು ಖಳನಟನಾಗಿ ಕಾಣಿಸಿಕೊಂಡೆ. ಆದರೆ, ನಟನಾಗಿ ನನ್ನನ್ನು ಗುರುತಿಸುವಂತೆ ಮಾಡಿದ್ದು, ಇಷ್ಟು ವರ್ಷ ಚಿತ್ರರಂಗದಲ್ಲಿ ನೆಲೆನಿಲ್ಲಲು ಕಾರಣವಾಗಿದ್ದು ಅಂಬರೀಶ್ ಅವರ “ಅಂತ’. ಆ ಚಿತ್ರದಲ್ಲಿ ನನಗೂ ಸರಿಸಮಾನವಾದ ಪಾತ್ರ ಸಿಕ್ಕಿತ್ತು. ಅಂಬರೀಶ್ ಅವರ ಜೊತೆ ತುಂಬಾ ಸಮಯ ತೆರೆಹಂಚಿಕೊಳ್ಳುವ ಭಾಗ್ಯ ನನ್ನದಾಯಿತು. ಅಂಬರೀಶ್ ಅವರು ತನ್ನ ಜೊತೆಗೆ ನಟಿಸುತ್ತಿದ್ದ ಕಲಾವಿದರನ್ನು ಹೇಗೆ ಪ್ರೋತ್ಸಾಹಿಸುತ್ತಿದ್ದರು ಎಂಬುದಕ್ಕೆ ನಾನಿಲ್ಲಿ ಒಂದು ಘಟನೆಯನ್ನು ಹೇಳಲೇಬೇಕು. ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದ ನನಗೆ “ಅಂತ’ ಚಿತ್ರದ ತಾರಾಗಣ ನೋಡಿಯೇ ಭಯವಾಗಿತ್ತು. ಅಷ್ಟೊಂದು ಮಂದಿ ಮಹಾನ್ ನಟರು ಆ ಚಿತ್ರದಲ್ಲಿದ್ದರು. ಸಹಜವಾಗಿಯೇ ಸ್ವಲ್ಪ ಟೆನ್ಸ್ ನ್ ಆಯಿತು. ಚಿತ್ರದ ದೃಶ್ಯವೊಂದರಲ್ಲಿ ತಾಯಿ ಸತ್ತ ಮೆಸೇಜ್ ಅನ್ನು ನಾನು ಕಮಿಶನರ್‌ಗೆ ಹೇಳಬೇಕು. ಆ ದೃಶ್ಯದಲ್ಲಿ ನಾನು ಟೆನ್ಸ್ ನ್ ಆಗಿ, ಸರಿಯಾಗಿ ಡೈಲಾಗ್ ಹೇಳಲು ಆಗದೇ ಎರಡೂರು ಟೇಕ್ ತಗೊಂಡೆ. ಪಕ್ಕದಲ್ಲಿದ್ದ ಅಂಬರೀಶ್ ಅವರು, “ಹೇ ಟೇಕ್ ಇಟ್ ಇಸಿ, ಮಾಡೋ ಮಾಡೋ ‘ ಎಂದು ಪ್ರೋತ್ಸಾಹಿಸಿದರು. ಅಷ್ಟಕ್ಕೇ ಅವರು ಸುಮ್ಮನಾಗಲಿಲ್ಲ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಲ್ಲಿ “ಹೇ ಬಾಬು ಸುಮ್ಕಿರು, ಮಾಡ್ತಾನೆ ಅವನು …’ ಎಂದು ಪ್ರೋತ್ಸಾಹಿಸಿದರು. ಇದು ಕೇವಲ ಒಂದು ಉದಾಹರಣೆಯಷ್ಟೇ, ಅವರ ಜೊತೆಗೆ “ಅಂತ’, “ಇಂದ್ರಜಿತ್’, “ದೇವರ ಮನೆ’, “ಅಜಿತ್’, “ಚಕ್ರವ್ಯೂಹ’, “ಅವಳ ನೆರಳು’, “ಒಲವಿನ ಉಡುಗೊರೆ’ … ಹೀಗೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಪ್ರತಿ ಸಿನಿಮಾದಲ್ಲೂ ಅವರು ನನಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದರು. ಅವರ ಇದ್ದ ಜಾಗ ಲವಲವಿಕೆಯಿಂದ ಕೂಡಿರುತ್ತಿತ್ತು. ಸಿನಿಮಾ ಸೆಟ್‌ನಲ್ಲಂತೂ ಅಂಬರೀಶ್ ಇದ್ದಾರೆಂದರೆ ಆ ಖುಷಿಯೇ ಬೇರೆ. ಕಾಫಿ ತಂದುಕೊಡುವ ಹುಡುಗನಿಂದ ಹಿಡಿದು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ಮಾತಿನ ಒರಟುತನದಲ್ಲೇ ಒಂದು ಪ್ರೀತಿ ಇರುತ್ತಿತ್ತು. ಬಹಳ ಒಡನಾಟ, ತುಂಬಾ ಪ್ರೀತಿ ಮಾಡ್ತಾ ಇದ್ದ ನಟ ಎಂದರೆ ಅದು ಅಂಬರೀಶ್. ಅವರು ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಪ್ರತ್ಯೇಕವಾಗಿ ಕುಳಿತು ಊಟ ಮಾಡುತ್ತಿರಲಿಲ್ಲ. ಎಲ್ಲರೊಂದಿಗೆ ಮಾತನಾಡುತ್ತಾ ಖುಷಿ ಖುಷಿಯಾಗಿ ಊಟ ಮಾಡುತ್ತಿದ್ದರು.
ನಾನು ಅವರ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದನ್ನು ನೋಡಿದ ಅಭಿಮಾನಿಗಳು, “ನೀವು ಅಂಬರೀಶ್ ಅವರ ಬ್ರದರಾ. ಅವರ ಎಲ್ಲಾ ಸಿನಿಮಾಗಳಲ್ಲೂ ಇರಿ¤àರಲ್ಲ’ ಎಂದು ಕೇಳುತ್ತಿದ್ದರು. ಖಂಡಿತಾ ಅಂಬರೀಶ್ ನನ್ನ ಬ್ರದರ್. ಆ ತರಹದ ಪ್ರೀತಿಯನ್ನು ಅಂಬರೀಶ್ ತೋರಿಸ್ತಾ ಇದ್ದರು. ನಾನು ಬಹುತೇಕ ಅವರ ಸಿನಿಮಾಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಹಲವು ಪಾತ್ರಗಳನ್ನು ಮಾಡಿದ್ದೇನೆ. ಎಲ್ಲಾ ಸಿನಿಮಾಗಳಲ್ಲೂ ಪ್ರಾಮುಖ್ಯತೆ ಇರುವ ಪಾತ್ರಗಳೇ ಸಿಕ್ಕಿವೆ. ಅಂಬರೀಶ್ ಅವರ ಮನೆಗೆ ಯಾರೇ ಹೋದರೂ ಅವರನ್ನು ಊಟ, ತಿಂಡಿ ಮಾಡಿಸದೇ ಕಳುಹಿಸುತ್ತಿರಲಿಲ್ಲ. ನಾನು ಎರಡೂ¾ರು ಸಲ ಅವರ ಮನೆಗೆ ಹೋಗಿದ್ದೆ. “ಶನಿವಾರ ನಾನು ತಿನ್ನಲ್ಲ ಅಂದ್ರೆ, “ಹೇ ತಿನ್ನೋ ವಾರಕ್ಕೇನು’ ಎನ್ನುತ್ತಾ ತಿನ್ನಿಸುತ್ತಿದ್ದರು. ಇತ್ತೀಚೆಗೆ ಅವರ “ಅಂಬಿ ನಿಂಗೆ ವಯಸ್ಸಾಯೊ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಪಕ್ಕದಲ್ಲಿ ನಾನು “ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದೆ. ಅಲ್ಲಿಗೆ ಒಬ್ಬ ಹುಡುಗನನ್ನು ಕರೆಸಿ, “ಲಕ್ಷ್ಮಣ್‌ನನ್ನು ಕರ್ಕೊಂಡು ಬಾ’ ಎಂದು ಕಳುಹಿಸಿದ್ದರು. ಆ ನಂತರ ಪಕ್ಕದಲ್ಲಿ ಕೂರಿಸಿಕೊಂಡು ಕಾಫಿ ಕುಡಿಸಿ ಮಾತನಾಡಿಸಿ ಕಳುಹಿಸಿದರು. ಆ ತರಹದ ವ್ಯಕ್ತಿತ್ವ ಅವರದು. ಹೂವಿನ ಜೊತೆ ನಾರಿನಂತೆ ನನಗೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅವರು ಗಳಿಸಿದ ಪ್ರೀತಿ, ಅಭಿಮಾನ ಅವರ ಸಾವು, ಅಂತ್ಯ ಸಂಸ್ಕಾರ ನೋಡಿದಾಗ ತಿಳಿಯುತ್ತದೆ. ಅಂತಹ ಮಹಾನ್ ನಟ ಮತ್ತೂಮ್ಮೆ ಹುಟ್ಟಿ ಬರಲಿ.
ನಾನು ಅವರ ಬಹುತೇಕ ಸಿನಿಮಾಗಳಲ್ಲಿ ನಟಿಸುವು ದನ್ನು ನೋಡಿದ ಅಭಿಮಾನಿಗಳು, “ನೀವು ಅಂಬರೀಶ್ ಬ್ರದರಾ. ಅವರ ಎಲ್ಲಾ ಸಿನಿಮಾಗಳಲ್ಲೂ ಇರ್ತಿರಲ್ಲ’ ಎನ್ನುತ್ತಿದ್ದರು…
ಲಕ್ಷ್ಮಣ್ ಹಿರಿಯ ನಟ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.