‘ಓಲ್ಡ್ ಮಾಂಕ್’ ಕಿಕ್ ಸ್ಟಾರ್ಟ್!
Team Udayavani, Feb 25, 2022, 11:57 AM IST
“ಓಲ್ಡ್ ಮಾಂಕ್’! ಇಂಥದ್ದೊಂದು ಹೆಸರು ಕೇಳಿದ್ರೆ ಸಾಕು, ಅದೆಷ್ಟೋ ಪಾನ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಅಂಥದ್ದೊಂದು ಕಿಕ್ ಇರುವ ಟೈಟಲ್ಲನ್ನ ತಮ್ಮ ಸಿನಿಮಾಕ್ಕೂ ಇಟ್ಟು, ಬಿಗ್ ಸ್ಕ್ರೀನ್ ಮೇಲೆ ಆಡಿಯನ್ಸ್‌ಗೂ ಎಂಟರ್‌ಟೈನ್ಮೆಂಟ್ ಕಿಕ್ ಕೊಡೋದಕ್ಕೆ ರೆಡಿಯಾಗಿದ್ದಾರೆ ನಟ ಕಂ ನಿರ್ದೇಶಕ ಶ್ರೀನಿ.
ಹೌದು, ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ಓಲ್ಡ್ ಮಾಂಕ್’ ಚಿತ್ರ ಇಂದು ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಓಲ್ಡ್ ಮಾಂಕ್’ ಸಿನಿಮಾದ ಪೋಸ್ಟರ್, ಟೀಸರ್, ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು, ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿವೆ.
ಇನ್ನು ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲೆಗಳಿಗೆ ಪ್ರವಾಸ ಮಾಡಿರುವ “ಓಲ್ ಮಾಂಕ್’ ಚಿತ್ರತಂಡ, ಭರ್ಜರಿ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಮುಟ್ಟುವ ಕೆಲಸ ಮಾಡಿದೆ.
“ಓಲ್ಡ್ ಮಾಂಕ್’ ಟೈಟಲ್ ಮತ್ತು ಸಬ್ಜೆಕ್ಟ್ ಬಗ್ಗೆ ಮಾತನಾಡುವ ಶ್ರೀನಿ, “ಆರಂಭದಲ್ಲಿ ಒಂದು ಒಳ್ಳೆಯ ಎಂಟರ್‌ಟೈನ್ಮೆಂಟ್ ಸಿನಿಮಾ ಮಾಡಬೇಕೆಂದಷ್ಟೇ ಅಂದುಕೊಂಡಿದ್ದೆವು. ಆ ನಂತರ ನಾವು ಅಂದುಕೊಂಡಿದ್ದಕ್ಕಿಂತ ಒಳ್ಳೆಯ ಸಬೆjಕ್ಟ್ ಸಿಕ್ಕಿತು. ಅದನ್ನು ಇನ್ನಷ್ಟು ಡೆವಲಪ್ ಮಾಡುತ್ತ ಹೋಗಿ ಕೊನೆಗೆ “ಓಲ್ಡ್ ಮಾಂಕ್’ ಎಂಬ ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ ವಾಯ್ತು. ಟೈಟಲ್ಲೇ ಹೇಳುವಂತೆ ಇದು ಕಿಕ್ ಕೊಡುವ ಸಿನಿಮಾ! “ಓಲ್ಡ್ ಮಾಂಕ್’ ಬಾರ್‌ನಲ್ಲಿ ಕಿಕ್ ಕೊಟ್ಟರೆ, ಈ “ಓಲ್ಡ್ ಮಾಂಕ್’ ಥಿಯೇಟರ್‌ನಲ್ಲಿ ಕಿಕ್ ಕೊಡಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ಎದೆ ಬಡಿತ ಜೋರಾಗಿದೆ; ಏಕ್ ಲವ್ ಯಾ ಮೇಲೆ ರಾಣಾ ಡ್ರೀಮ್
“ಇದರಲ್ಲಿ ಪುರಾಣದ ಒಂದು ಎಳೆಯನ್ನ ಬ್ಲೆಂಡ್ ಮಾಡಿ, ಅದನ್ನ ಇಂದಿನ ಆಡಿಯನ್ಸ್‌ಗೆ ಎಂಟರ್‌ಟೈನ್ಮೆಂಟ್ ಮಾಡುವ ರೀತಿಯಲ್ಲಿ ಸಿನಿಮಾದಲ್ಲಿ ಹೇಳಿದ್ದೇವೆ. ಶಾಪಗ್ರಸ್ಥ ನಾರದ ಒಬ್ಬ ಪ್ರೇಮಿಯಾಗಿ ಭೂಮಿಗೆ ಬಂದಾಗ ಇಲ್ಲಿ ಏನೇನು ಸಂಕಷ್ಟಗಳನ್ನು ಅನುಭವಿಸುತ್ತಾನೆ ಅನ್ನೋದು ಸಿನಿಮಾದ ಕಥೆಯ ಒಂದು ಸಣ್ಣ ಎಳೆ. ಇಡೀ ಸಿನಿಮಾ ಮೊದಲಿನಿಂದ, ಕೊನೆಯವರೆಗೂ ಪ್ರೇಕ್ಷಕರಿಗೆ ಎಂಟರ್‌ಟೈನ್ಮೆಂಟ್ ಕೊಡಲಿದೆ. ಎಲ್ಲ ಅಂದು ಕೊಂಡಂತೆ ಆಗಿದ್ದರೆ, ಒಂದು ವರ್ಷದ ಹಿಂದೆಯೇ “ಓಲ್ಡ್ ಮಾಂಕ್’ ರಿಲೀಸ್ ಆಗಬೇಕಿತ್ತು. ಆದ್ರೆ ಕೋವಿಡ್ ಕಾರಣ ದಿಂದ ರಿಲೀಸ್ ತಡವಾಯ್ತು. ಲೇಟ್ ಆದ್ರೂ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ’ ಎನ್ನುವುದು ಶ್ರೀನಿ ಮಾತು.
“ಓಲ್ಡ್ ಮಾಂಕ್’ ಚಿತ್ರದಲ್ಲಿ ಶ್ರೀನಿಗೆ ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಎಸ್. ನಾರಾಯಣ್, ಸುಜಯ್ ಶಾಸ್ತ್ರೀ, ರಾಜೇಶ್, ಅರುಣಾ ಬಾಲರಾಜ್, ಸುದೇವ್ ನಾಯರ್, ಸುನೀಲ್ ರಾವ್, ಮೇಘಶ್ರೀ, ಬೆಂಗಳೂರು ನಾಗೇಶ್ ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.