ಥಿಯೇಟರ್‌ನಲ್ಲಿ ಮನೋಜ್ – ರಂಜನಿ ‘ಟಕ್ಕರ್’
Team Udayavani, May 6, 2022, 11:09 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರ ಸಂಬಂಧಿ ಮನೋಜ್ ಕುಮಾರ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ಟಕ್ಕರ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ.
“ಟಕ್ಕರ್’ ಚಿತ್ರದಲ್ಲಿ ಮನೋಜ್‌ಗೆ ನಾಯಕಿಯಾಗಿ ಕಿರುತೆರೆಯ “ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಜೋಡಿಯಾಗಿದ್ದು, ಉಳಿದಂತೆ ಸೌರವ್ ಲೋಕಿ, ಸಾಧುಕೋಕಿಲ, ಅಶ್ವಿನ್ ಹಾಸನ್, ಆದಿ, ನಯನಾ, ಕುರಿ ಸುನಿಲ್, ಜೈ ಜಗದೀಶ್, ಕೆ.ಎಸ್ ಶ್ರೀಧರ್, ಸುಮಿತ್ರಾ, ಶಂಕರ್ ಅಶ್ವಥ್, ಲಕ್ಷ್ಮಣ್ ಶಿವಶಂಕರ್ ಹೀಗೆ ಹಿರಿ-ಕಿರಿಯ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಇನ್ನು ತಮ್ಮ ಚೊಚ್ಚಲ ಚಿತ್ರದ ಬಗ್ಗೆ ನಾಯಕ ಮನೋಜ್ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. “ಒಂದು ಮಾಸ್ ಕಂಟೆಂಟ್ ಮತ್ತು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಎರಡೂ “ಟಕ್ಕರ್’ ಸಿನಿಮಾದಲ್ಲಿದೆ. ಲವ್, ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ, ಒಳ್ಳೆಯ ಸಾಂಗ್ಸ್ ಜೊತೆಗೊಂದು ಮೆಸೇಜ್… ಹೀಗೆ ಒಂದೊಳ್ಳೆ ಸಿನಿಮಾದಲ್ಲಿ ಆಡಿಯನ್ಸ್ ಏನೇನು ಎಲಿಮೆಂಟ್ಸ್ ನಿರೀಕ್ಷಿಸುತ್ತಾರೋ, ಅದೆಲ್ಲವೂ “ಟಕ್ಕರ್’ನಲ್ಲಿದೆ. ಹಾಗಾಗಿ “ಟಕ್ಕರ್’ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಕೊಡುವಂಥ ಸಿನಿಮಾ’ ಎನ್ನುವುದು ಮನೋಜ್ ಮಾತು.
ಇದನ್ನೂ ಓದಿ:ಡಬಲ್ ಡೋಸ್ ಕಾಮಿಡಿ; ಹೊಸ ಅವತಾರದಲ್ಲಿ ಶರಣ್
“ಈಗಾಗಲೇ ಬಿಡುಗಡೆಯಾಗಿರುವ “ಟಕ್ಕರ್’ ಸಿನಿಮಾದ ಪೋಸ್ಟರ್, ಟೀಸರ್, ಟ್ರೇಲರ್ ಮತ್ತು ಸಾಂಗ್ಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮಾಮೂಲಿ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಎಂಬ ಅಭಿಪ್ರಾಯ ಆಡಿಯನ್ಸ್ ಕಡೆಯಿಂದ ವ್ಯಕ್ತವಾಗುತ್ತಿದೆ. ಖಂಡಿತವಾಗಿಯೂ, “ಟಕ್ಕರ್’ ಥಿಯೇಟರ್‌ನಲ್ಲಿ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ಮನೋಜ್ ಅವರದ್ದು.
“ಇಂದಿನ ಸ್ಮಾರ್ಟ್‌ಪೋನ್ ಮತ್ತು ತಂತ್ರಜ್ಞಾನ ಹೇಗೆ ದುರುಪಯೋಗವಾಗುತ್ತಿದೆ. ಅದರಿಂದ ಹೆಣ್ಣು ಮಕ್ಕಳ ಮಾನ-ಪ್ರಾಣ ಎರಡಕ್ಕೂ ಹೇಗೆ ಚ್ಯುತಿ ಬರುತ್ತಿದೆ. ಜನರ ನೆಮ್ಮದಿ ಹೇಗೆ ಹಾಳಾಗುತ್ತಿದೆ ಅನ್ನೋದನ್ನ “ಟಕ್ಕರ್’ನಲ್ಲಿ ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಇದು ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ. ಎಲ್ಲ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂಥ ಸಬೆjಕ್ಟ್ “ಟಕ್ಕರ್’ನಲ್ಲಿದೆ. ಮನೆಯಲ್ಲಿ ಮಕ್ಕಳು, ಪೋಷಕರು ಎಲ್ಲರೂ ಓಟ್ಟಾಗಿ ಕೂತು ನೋಡುವಂಥ ಕಂಟೆಂಟ್ ಇರುವ ಸಿನಿಮಾ ಇದಾಗಿದೆ. ಇದರಲ್ಲಿ ನನ್ನದು ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಪಾತ್ರ’ ಎನ್ನುತ್ತಾರೆ ನಾಯಕಿ ರಂಜನಿ ರಾಘವನ್.
“ಎಸ್.ಎಲ್.ಎನ್ ಕ್ರಿಯೇಶನ್ಸ್’ ಬ್ಯಾನರ್ ನಲ್ಲಿ ನಾಗೇಶ ಕೋಗಿಲು “ಟಕ್ಕರ್’ ಚಿತ್ರವನ್ನು ನಿರ್ಮಿಸಿದ್ದಾರೆ. ವಿ. ರಘುಶಾಸ್ತ್ರಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ವಿಜಯ ಪ್ರಕಾಶ್- ಅನುರಾಧಾ ಭಟ್, ಸಂಜಿತ್ ಹೆಗ್ಡೆ, ಶಶಾಂಕ್ ಶೇಷಗಿರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ.
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.