ನವರಸ ಚಿತ್ರ: ನಿರ್ಮಾಪಕರ ಕನಸು; ನಿರ್ದೇಶಕರ ವೈರ

Team Udayavani, Jun 23, 2017, 11:59 AM IST

Vaira-(19).jpg

ಸದ್ಯ “ವೈರ’ ಸಿನಿಮಾ ನಿರ್ದೇಶಿಸಿ, ನಟಿಸಿರುವ ನವರಸನ್‌ ಅವರಿಗೆ ಈ ಸಿನಿಮಾ ನಿರ್ದೇಶಿಸಬೇಕೆಂಬ ಯಾವ ಆಸೆಯೂ ಇರಲಿಲ್ಲವಂತೆ. ಯಾರಾದರೂ ಬೇರೆ ನಿರ್ದೇಶಕರಿಂದ ಈ ಕಥೆ ಮಾಡಿಸಿ, ತಾನು ನಟಿಸಬೇಕೆಂದುಕೊಂಡಿದ್ದರಂತೆ.

ಅದೇ ಉದ್ದೇಶದಿಂದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ಅವರಲ್ಲಿ ಕಥೆ ಹೇಳಿದರಂತೆ. ಕಥೆ ಕೇಳಿ ಖುಷಿಯಾದ
ಮಂಜುನಾಥ್‌ ಅವರು, ನಿಮ್ಮ ಕನಸನ್ನು ಬೇರೆಯವರ ಕೈಗೆ ಕೊಡುವ ಬದಲು ನೀವೇ ನಿರ್ದೇಶಿಸಿ, ನಟಿಸಿ ಎಂದರಂತೆ. ಹಾಗಾಗಿ, ತಾನು “ವೈರ’ ಸಿನಿಮಾವನ್ನು ನಿರ್ದೇಶಿಸಬೇಕಾಯಿತು ಎಂದು ಹೇಳಿಕೊಂಡರು ನವರಸನ್‌. ಅವರ ಮಾತಿಗೆ ವೇದಿಕೆಯಾಗಿದ್ದು “ವೈರ’ ಚಿತ್ರದ ಟ್ರೇಲರ್‌ ಬಿಡುಗಡೆ. ಇತ್ತೀಚೆಗೆ ಚಿತ್ರತಂಡ ಜೊತೆಯಾಗಿ “ವೈರ’
ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿತು.

ನಿರ್ಮಾಪಕ ಮಂಜುನಾಥ್‌ ಅವರು ಈ ಸಿನಿಮಾ ನಿರ್ಮಿಸಲು ಕಾರಣ ಚಿತ್ರದ ಕಥೆಯಂತೆ. “ನನಗೆ ಸಣ್ಣ ಸಿನಿಮಾ ದೊಡ್ಡ ಸಿನಿಮಾ ಎಂದಿಲ್ಲ. ಕಥೆ ಮುಖ್ಯ. ಕಥೆ ಚೆನ್ನಾಗಿದ್ದರೆ ನಾನು ಸಿನಿಮಾ ಮಾಡುತ್ತೇನೆ. ನವರಸನ್‌ ಬಂದು ಕಥೆ ಹೇಳಿದರು. ಆ ಸಿನಿಮಾವನ್ನು ನಾನು ಕನಸು ಕಂಡೆ. ನನ್ನ ಕನಸಿನಂತೆ ಈ ಸಿನಿಮಾವನ್ನು ಮಾಡಿಕೊಡಿ ಎಂದೆ. ಅದರಂತೆ ನವರಸನ್‌ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಇದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ’ ಎನ್ನುವುದು ಮಂಜುನಾಥ್‌ ಮಾತು.

ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕರು ಬಂದು ತಮ್ಮ ಸಿನಿಮಾಕ್ಕೆ ಕೆಲಸ ಮಾಡಿಕೊಡಿ ಎಂದಾಗ, “ಫ್ರೆಂಡ್‌ಶಿಪ್‌ ಇದ್ದರೆ ಜೊತೆಗೆ ಟಿ ಕುಡಿಯುವ, ಊಟ ಮಾಡುವ. ಕೆಲಸ ಮಾತ್ರ ನನಗೆ ಇಷ್ಟವಾದರೆ ಮಾತ್ರ ಮಾಡುತ್ತೇನೆ’ ಎಂದರಂತೆ ರವಿ ಬಸ್ರೂರು. ಆದರೆ, ಸಿನಿಮಾ ನೋಡಿದ ಕೂಡಲೇ ಖುಷಿಯಿಂದ ಕೆಲಸ ಮಾಡಿಕೊಡುತ್ತೇನೆ ಎಂದರಂತೆ. ಹೀಗೆ ಖುಷಿಯಿಂದ ಹೇಳಿಕೊಂಡೆ ರವಿ ಬಸ್ರೂರುಗೆ ಮೈಕ್‌ ಕೊಟ್ಟರು ನವರಸನ್‌. ಚಿತ್ರ ಕತೆಯಿಂದ ಹಿಡಿದು ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿ ಬಂದಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆಯಂತೆ. ಆ ಕಾರಣದಿಂದ ತಾನು ಒಪ್ಪಿಕೊಂಡಿದ್ದಾಗಿ ಹೇಳಿದರು. ನಾಯಕಿ ಪ್ರಿಯಾಂಕಾ
ಮಲಾ°ಡ್‌ ಅವರದ್ದು ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರವಂತೆ. ಹಿರಿಯ ನಿರ್ಮಾಪಕ ಜಿ.ಕೆ.ರೆಡ್ಡಿ ಕೂಡಾ ತಂಡಕ್ಕೆ
ಶುಭಕೋರಿದರು.

ಟಾಪ್ ನ್ಯೂಸ್

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.