ಗ್ಲೋಬಲ್ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳ ಹವಾ…
ಬೇಸಿಗೆ ಬೇಗೆ ತಣಿಸಲು ಕೆಜಿಎಫ್, ತೋತಾಪುರಿ ರೆಡಿ!
Team Udayavani, Apr 1, 2022, 12:31 PM IST
ಕನ್ನಡ ಸಿನಿಮಾಗಳು ಇತ್ತೀಚೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮೀರಿ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರೋದು ಖುಷಿಯ ವಿಚಾರ. ಅದರಲ್ಲೂ ಕನ್ನಡ ಸಿನಿಮಾಗಳು ಬೇರೆ ಭಾಷೆಗೂ ಡಬ್ ಆಗಿ “ನಾವೂ ಯಾರಿಗೂ ಕಮ್ಮಿಯಿಲ್ಲ’ ಎಂದು ತೊಡೆ ತಟ್ಟಿ ನಿಲ್ಲುತ್ತಿರೋದು ಒಳ್ಳೆಯ ಬೆಳವಣಿಗೆ. ಕಲೆಗೆ ಯಾವುದೇ ಬೇಲಿ ಇಲ್ಲ ಎಂಬುದು ಅಕ್ಷರಶಃ ಸತ್ಯ. ಕನ್ನಡದ ಸಿನಿಮಾಗಳು ಭಾಷೆ, ಗಡಿ ಮೀರಿ ಬಾನೆತ್ತರದಲ್ಲಿ ಹಾರಾಡಲು ಶುರುವಿಟ್ಟುಕೊಂಡಿವೆ. ಹಾಗೆಯೇ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರ ಮಾಡುವಲ್ಲಿ ಸಫಲವಾಗಿದೆ.
ಹಿಂದೆಲ್ಲ ಮೂಲ ಭಾಷೆಯ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಒಂದೇ ಭಾಷೆಯಲ್ಲಿ ತಯಾರಾದ ಸಿನಿಮಾ ಬೇರೆ ಬೇರೆ ಭಾಷೆಗೆ ಡಬ್ ಆಗುವ ಮೂಲಕ ಆಯಾ ಭಾಷೆಯ ವೀಕ್ಷಕರನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ಪರಭಾಷೆಯ ಸಿನಿಮಾಗಳು ಅದಾಗಲೇ ಈ ಹಾದಿಯಲ್ಲಿದ್ದವು.
ಈಗ ಕನ್ನಡದ ಸಿನಿಮಾಗಳೂ ಆ ಸಾಲಿಗೆ ಸೇರುವಲ್ಲಿ ಯಶಸ್ವಿಯಾಗಿವೆ ಎಂಬುದು ಖುಷಿಯ ಸಂಗತಿ. ಕಳೆದ ಮೂರು ವರ್ಷಗಳಿಂದ ಈ ಅಬ್ಬರ ತುಸು ಜೋರಾಗಿಯೇ ಇದೆ. ಪಕ್ಕದ ರಾಜ್ಯ, ರಾಷ್ಟ್ರಗಳಲ್ಲೂ ಕನ್ನಡ ಸಿನಿಮಾಗಳದೇ ಹವಾ. ಫಲಾನುಫಲಗಳು ಏನೇ ಇರಲಿ, ಮೊದಲು ಆಯಾ ಪ್ರೇಕ್ಷಕರನ್ನು ತಲುಪುವ ಕೆಲಸವಾದರೆ ನಂತರ ಆಯಾ ಸಿನಿಮಾಗಳಿಗೆ ತಕ್ಕ ಮಾನ್ಯತೆ ಸಿಕ್ಕೇ ಸಿಗುತ್ತದೆ. ಇದೀಗ ಆ ಹಂತದಲ್ಲಿರುವ ಬಗ್ಗೆ ಸ್ಯಾಂಡಲ್‌ವುಡ್ ಮಂದಿ ಖುಷಿಯಾಗಿದ್ದಾರೆ.
ಇದನ್ನೂ ಓದಿ:ರಿಯಾಲಿಟಿ ಶೋನಿಂದ ಮಕ್ಕಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸ್ವಪ್ರಜ್ಞೆಯ ಅಪಾಯ: ಪಲ್ಲವಿ
ಕಳೆದ ವರ್ಷ ಒಂದಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡದ್ದಿವು. ಈ ವರ್ಷವೂ ಅದಕ್ಕೆ ಕೊರತೆ ಏನಿಲ್ಲ. ಅದರಲ್ಲೂ ಬೇಸಿಗೆ ರಜೆಯಲ್ಲಿ ಸೌಂಡು ಮಾಡಲು ಒಂದರ ಹಿಂದೊಂದು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ದಾಟಿ ಗ್ಲೋಬಲ್ ನಲ್ಲಿ ಸೌಂಡು ಮಾಡಲಿವೆ. ಏಪ್ರಿಲ್‌ನಲ್ಲಿ ಯಶ್ ನಟನೆಯ “ಕೆಜಿಎಫ್-2′ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಸಹ ಬೇಸಿಗೆಯಲ್ಲೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಒಂದೆರಡು ತಿಂಗಳು ತಡವಾಗಿ ಬಿಡುಗಡೆಯಾಗಲಿದೆ.
ಇನ್ನು ಜಗ್ಗೇಶ್ ನಟಿಸಿರುವ “ತೋತಾಪುರಿ’ ಬೇಸಿಗೆಗೆ ಮನ ತಣಿಸಲು ಸಜ್ಜಾಗಿದೆ. ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗಿರುವುದು ಗೊತ್ತೇ ಇದೆ. ಅಲ್ಲದೇ “ಬಾಗ್ಲು ತೆಗಿ ಮೇರಿ ಜಾನ್’ ಹಾಡು ಗ್ಲೋಬಲ್ ಲೆವೆಲ್ ನಲ್ಲಿ ಸದ್ದು ಮಾಡುತ್ತಾ ಬರೋಬ್ಬರಿ ನೂರಾರು ಮಿಲಿಯನ್ ಹಿಟ್ಸ್ ದಾಖಲಿಸಿದೆ. “ಕೆಜಿಎಫ್’ ಸಹ ನೂರಕ್ಕೂ ಹೆಚ್ಚು ಮಿಲಿಯನ್ ಗಡಿ ದಾಟಿ ಮುನ್ನುಗ್ಗುತ್ತಿದೆ. ಇನ್ನು “ವಿಕ್ರಾಂತ್ ರೋಣ’ ಟೀಸರ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಅದೂ ಸಹ ಎಲ್ಲಾ ಭಾಷೆಗಳಲ್ಲಿ ಕಮಾಲ್ ಮಾಡುವ ಮುನ್ಸೂಚನೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.