ಬದಲಾದ ಮೆಂಟಾಲಿಟಿಯೊಂದಿಗೆ ಮತ್ತೆ ಬಂದ್ರು ಅಣ್ತಮ್ಮ!
Team Udayavani, Apr 7, 2017, 3:45 AM IST
“ಹೇಗೋ ಸಿನಿಮಾ ಮಾಡಬೇಕು ಎಂದಿದ್ದರೆ ಯಾವಾಗಲೋ ಮಾಡಬಹುದಿತ್ತು. ಹೀಗೇ ಮಾಡಬೇಕು ಅಂತ ಕಾದಿದ್ದಕ್ಕೆ ಸ್ವಲ್ಪ ತಡವಾಯ್ತು. ಈ ಮಧ್ಯೆ ನಮ್ಮ ತಂದೆ ಸಾವಾಯ್ತು. ಡಿಪ್ರಷನ್‌ಗೆ ಹೋಗಿಬಿಟ್ಟೆ. ಅದರಿಂದ ಹೊರಬರೋಕೆ ಇಷ್ಟು ಸಮಯ ಹಿಡೀತು …’
“ಮೆಂಟಲ್ ಮಂಜ’ ನಿರ್ದೇಶಿಸಿದ್ದ ಸಾಯಿಸಾಗರ್ ಮತ್ತು ಅದರಲ್ಲಿ ಹೀರೋ ಆಗಿ ಅಭಿನಯಿಸಿದ್ದ ಅರ್ಜುನ್ ಪುನಃ ಬಂದಿದ್ದಾರೆ. ಈ ಬಾರಿ ಇಬ್ಬರೂ “ಮೆಂಟಲ್ ಮಂಜ 2′ ಎಂಬ ಹೆಸರಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಚಿತ್ರದ ಮುಹೂರ್ತವಾಗಿದೆ. ಇನ್ನು ಚಿತ್ರೀಕರಣ ಶುರುವಾಗಬೇಕಿದೆ. ಈ ಗ್ಯಾಪ್‌ನಲ್ಲಿ ಸಿನಿಮಾ ಬಗ್ಗೆ ಮಾತಾಡೋಕೆ ತಮ್ಮ ನಿರ್ಮಾಪಕ ಗೋವಿಂದಣ್ಣನ ಜೊತೆಗೆ ಇಬ್ಬರೂ ಬಂದಿದ್ದರು.
ಕೊನೆಯಲ್ಲಿ ಮಾತಾಡ್ತೀನಿ ಅಂತ ನಿರ್ದೇಶಕರು ಹೇಳಿದ್ದಿಕ್ಕೆ ಮೊದಲು ಅರ್ಜುನ್ ಮಾತಾಡಿದರು. “ನಾಲ್ಕು ವರ್ಷಗಳ ಹಿಂದೆಯೇ ಮಾಡಬೇಕು ಅಂತ ಯೋಚನೆ ಇತ್ತು. ಎರಡು ವರ್ಷದ ಹಿಂದೆ ಶುರು ಮಾಡಬೇಕು ಎನ್ನುವಷ್ಟರಲ್ಲಿ ತಂದೆ (ಚಳವಳಿ ನಾರಾಯಣ್) ಹೋಗಿಬಿಟ್ಟರು. ಈ ಚಿತ್ರ ಮಾಡಬೇಕು ಎಂಬ ಅವರ ಆಸೆಯಾಗಿತ್ತು. ಅವರ ಆಸೆಗಾಗಿ ಈ ಚಿತ್ರವನ್ನು ಮಾಡುತ್ತಿದ್ದೀವಿ’ ಎಂದರು ಅರ್ಜುನ್.
ಇಷ್ಟಕ್ಕೂ ಚಿತ್ರದ ಕಥೆಯೇನು ಮತ್ತು ಅರ್ಜುನ್ ಪಾತ್ರವೇನು ಎಂದರೆ, ಗೊತ್ತಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. “ನನ್ನ ತಮ್ಮನ ನಿರ್ದೇಶನದಲ್ಲಿ ನಾನು ಅಭಿನಯಿಸುತ್ತಿರುವ ನಾಲ್ಕನೇ ಚಿತ್ರ ಇದು. ಹಿಂದಿನ ಮೂರು ಚಿತ್ರಗಳಲ್ಲೂ ಅವನು ನನಗೆ ಕಥೆ ಮತ್ತು ಪಾತ್ರ ಹೇಳಿರಲಿಲ್ಲ. ಈಗಲೂ ಹೇಳಿಲ್ಲ. ಕಥೆ ಮತ್ತು ಪಾತ್ರದ ಬಗ್ಗೆ ಹೇಳಿಬಿಟ್ಟರೆ, ತಯಾರಾಗಿಬಿಡುತ್ತೀವಿ ನೈಜತೆ ಇರುವುದಿಲ್ಲ ಎಂಬುದು ಅವನ ನಂಬಿಕೆ. ಹಾಗಾಗಿ ಕಥೆ ಅಥವಾ ಪಾತ್ರದ ಬಗ್ಗೆ ಹೇಳಿಲ್ಲ. ನೇರವಾಗಿ ಬಂದು ಮಾಡು ಅಂತಾನೆ’ ಎಂದು ತಮ್ಮ ಸಹೋದರನ ಕಾರ್ಯವೈಖರಿಯನ್ನು ವಿವರಿಸಿದರು ಅರ್ಜುನ್.
ಅರ್ಜುನ್ ಹೇಳುವುದರಲ್ಲಿ ನೂರಕ್ಕೆ ನೂರು ನಿಜ ಎಂದು ಅನುಮೋದಿಸುತ್ತಲೇ ಮಾತು ಶುರು ಮಾಡಿದರು ಸಾಯಿ ಸಾಗರ್. “ಇಲ್ಲೊಂದು ಬೇರೆ ತರಹದ ಪ್ರಯತ್ನ ಮಾಡುತ್ತಿದ್ದೀವಿ. ಇವತ್ತು ನಾವು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದೀವಿ. ಆ ಸಮಸ್ಯೆಗಳನ್ನು ಒಬ್ಬ ರೌಡಿ ಬಗೆಹರಿಸಬಹುದಾ ಎಂಬುದೇ ಕಥೆ. ಇಲ್ಲಿ ನಾವು ರೌಡಿಗಳನ್ನು ವೈಭವೀಕರಿಸುತ್ತಿಲ್ಲ. ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೀವಿ. ಇಲ್ಲಿ ನಾಯಕನಿಗೆ ಎರಡು ಶೇಡ್‌ಗಳಿವೆ. ಒಬ್ಬ ಡಾನ್ ಆಗಿ ಏನೆಲ್ಲಾ ಬದಲಾವಣೆಗಳನ್ನು ತರುತ್ತಾನೆ ಎನ್ನುವುದು ಕಥೆ. ಇದೊಂದು ಸ್ಟೈಲಿಶ್ ಸಿನಿಮಾ ಆಗಲಿದೆ. ಈ ಸಿನಿಮಾಗೂ “ಮೆಂಟಲ್ ಮಂಜ’ಗೂ ಸಂಬಂಧವಿಲ್ಲ. ಆ ಸಿನಿಮಾ ನೆನಪಿದ್ದರೆ, ಅದರಲ್ಲಿ ಹೀರೋ ಸಾಯುತ್ತಾನೆ. ಇಲ್ಲಿ ಇನ್ನೊಬ್ಬ ಅವನ ಸ್ಫೂರ್ತಿಯಿಂದ ಏನೆಲ್ಲಾ ಮಾಡುತ್ತಾನೆ ಅನ್ನೋದು ಕಥೆ. ಒಟ್ಟು 45 ದಿನಗಳಲ್ಲಿ ಚಿತ್ರೀಕರಣ ಮಾಡೋ ಯೋಚನೆ ಇದೆ. ನಾನೇ ಸಂಗೀತ ಸಂಯೋಜಿಸುತ್ತಿದ್ದೀನಿ. ಅರ್ಜುನ್‌ಗೆ ಇಬ್ಬರು ನಾಯಕಿಯರಿರುತ್ತಾರೆ ಎಂಬ ವಿವರಗಳನ್ನು ಅವರು ನೀಡಿದರು.
ಗೋವಿಂದಣ್ಣನಿಗೆ ಈ ಚಿತ್ರ ಕನಸಿನ ಕೂಸಂತೆ. ಆ ಕೂಸನ್ನು ಅಕ್ಕರೆಯಿಂದ ನೋಡಿಕೊಳ್ಳಿ ಎಂದು ಮಾಧ್ಯಮದವರ ಮೇಲೆ ಜವಾಬ್ದಾರಿ ಹೊರಿಸಿದರು. ಅವರ ಮಗ ಗಿರೀಶ ಅಂತ, ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ. ಒಳ್ಳೆಯ ತಂಡದ ಜೊತೆಗೆ, ಒಳ್ಳೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದೀವಿ, ಸಹಕರಿಸುವ ಕೆಲಸ ಮಾಧ್ಯಮದವರದ್ದು ಎಂದು ಮಾತು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.