ಪ್ಲ್ಯಾನ್ ಬಿ ರೆಡಿ: ರಿಲೀಸ್‌ ಡೇಟ್‌ ಚರ್ಚೆಯಲ್ಲಿ ಸ್ಟಾರ್‌ ಸಿನಿಮಾ ನಿರ್ಮಾಪಕರು

Team Udayavani, Jun 25, 2021, 9:58 AM IST

kgf

ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಸಿನಿಮಾದ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಈಗ ಬಾಕಿ ಉಳಿದಿರೋ ಪ್ರಶ್ನೆ ಚಿತ್ರಮಂದಿರಗಳನ್ನು ತೆರೆಯುವುದೊಂದೇ. ಜುಲೈನಲ್ಲಿ ಸಿನಿಮಾ ಪ್ರದರ್ಶನಗಳಿಗೂ ಅನುಮತಿ ಸಿಗುವ ನಿರೀಕ್ಷೆ ಇದೆ.ಕಳೆದ ಬಾರಿಯಂತೆ ಆರಂಭದಲ್ಲಿ ಶೇ50 ಸೀಟು ಭರ್ತಿ ಹಾಗೂ ನಂತರದ ದಿನಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ನೀಡಬಹುದು ಎಂಬ ನಿರೀಕ್ಷೆಯ ಜೊತೆಗೆ ಲೆಕ್ಕಾಚಾರಗಳುಕೂಡಾ ಆರಂಭವಾಗಿವೆ. ಅಷ್ಟಕ್ಕೂ ಆ ಲೆಕ್ಕಾಚಾರ ಏನು ಎಂಬ ಪ್ರಶ್ನೆಯನ್ನು ನೀವುಕೇಳಬಹುದು. ಅದಕ್ಕೆ ಉತ್ತರ ರಿಲೀಸ್‌ ಪ್ಲ್ರಾನ್‌.

ಹೌದು, ಚಿತ್ರಮಂದಿರ ತೆರೆದ ಬಳಿಕ ಯಾವ ಸಿನಿಮಾಗಳು ಯಾವಾಗ ಬಿಡುಗಡೆ ಮಾಡಬೇಕೆಂಬುದು ಮತ್ತೆ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಚರ್ಚೆ ಮಾಡಲಾರಂಭಿಸಿದ್ದಾರೆ. ಈ ಮೂಲಕ ಪ್ಲ್ರಾನ್‌ “ಬಿ’ ಸಿದ್ಧವಾಗುತ್ತಿದೆ. ನಿಮಗೆ ಗೊತ್ತಿರುವಂತೆ ಕಳೆದ ಬಾರಿ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಯಾವುದೇ ಗೊಂದಲವಾಗದಂತೆ ಒಟ್ಟಾಗಿ ಒಂದು ರಿಲೀಸ್‌ ಪ್ಲ್ರಾನ್‌ ಮಾಡಿಕೊಂಡಿದ್ದರು. ಮೂರು ವಾರಗಳ ಗ್ಯಾಪ್‌ನಲ್ಲಿ ಸ್ಟಾರ್‌ ಸಿನಿಮಾಗಳನ್ನು ಬಿಡುಗಡೆ ಮಾಡಬೇಕೆಂಬುದು ಆ ಪ್ಲ್ರಾನ್‌.

ಅದರಂತೆ ಫೆಬ್ರವರಿಯಲ್ಲಿ “ಪೊಗರು’, ಮಾರ್ಚ್‌ನಲ್ಲಿ “ರಾಬರ್ಟ್‌’, ಏಪ್ರಿಲ್‌’ನಲ್ಲಿ “ಯುವರತ್ನ’ ಚಿತ್ರಗಳು ತೆರೆಗೆ ಬಂದುವು. ಆದರೆ, ಆ ನಂತರ ಬರಬೇಕಾಗಿದ್ದ “ಕೋಟಿಗೊಬ್ಬ-3′, “ಸಲಗ’, “ಭಜರಂಗಿ-2′ ಚಿತ್ರಗಳಿಗೆ ಕೊರೊನಾ ಎರಡನೇ ಅಲೆ ತಡೆಯಾಯಿತು. ಈಗ ಆ ಸಿನಿಮಾಗಳ ಜೊತೆಗೆ ಮತ್ತೆರಡು ಸ್ಟಾರ್‌ ಸಿನಿಮಾಗಳು ಸೇರ್ಪಡೆಗೊಂಡಿವೆ. ಅದು “ಕೆಜಿಎಫ್-2′ ಹಾಗೂ ಸುದೀಪ್‌ ಅವರ “ವಿಕ್ರಾಂತ್‌ ರೋಣ’. ಈ ಎರಡೂ ಚಿತ್ರಗಳುಕೂಡಾ ಈಗಾಗಲೇ ಡೇಟ್‌ ಅನೌನ್ಸ್‌ ಮಾಡಿಕೊಂಡಿವೆ. “ಕೆಜಿಎಫ್-2′ ಚಿತ್ರ ಜುಲೈ16 ಹಾಗೂ “ವಿಕ್ರಾಂತ್‌ ರೋಣ’ ಆಗಸ್ಟ್‌19ಕ್ಕೆ ಬರುವುದಾಗಿ ಹೇಳಿಕೊಂಡಿತ್ತು. ಇದರ ಜೊತೆಗೆ ಈಗಾಗಲೇ ಬಹು ನಿರೀಕ್ಷೆ ಹುಟ್ಟಿಸಿರುವ ಜಗ್ಗೇಶ್‌ ಅವರ “ತೋತಾಪುರಿ’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಈ ಎಲ್ಲಾ ಡೇಟ್‌ಗಳು ಉಲ್ಟಾಪಲ್ಟಾ ಆಗಿದೆ.

ಇದನ್ನೂ ಓದಿ;ಶೂಟಿಂಗ್‌ ಶುರುವಾದ ಖುಷಿಯಲ್ಲಿ ಹರಿಪ್ರಿಯಾ

ಹಾಗಾಗಿ, ಈಗ ಮತ್ತೆ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಹೊಸ ಪ್ಲ್ರಾನ್‌ ಮಾಡಿ ಕೊಂಡಿದ್ದಾರೆ. ಈ ಬಾರಿಯೂ ಯಾವುದೇ ಗೊಂದಲವಾಗದಂತೆ ಸ್ಟಾರ್‌ ಸಿನಿಮಾಗಳನ್ನು ರಿಲೀಸ್‌ ಮಾಡಲು ಚರ್ಚಿಸಿದ್ದಾರೆ. ಈ ಮೂಲಕ ಮತ್ತೆ ಜೊತೆಯಾಗಿ ಸಿನಿಮಾಗಳ ಡೇಟ್‌ ಅನೌನ್ಸ್‌ ಮಾಡಲಿದ್ದಾರೆನ್ನಲಾಗಿದೆ.

ಯಾವುದು ಮೊದಲು ರಿಲೀಸ್‌: ಸದ್ಯಕ್ಕೆ ಐದಕ್ಕೂ ಹೆಚ್ಚು ಸ್ಟಾರ್‌ ಸಿನಿಮಾಗಳು ಮೊದಲ ಹಂತದಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ಹಾಗಾದರೆ, ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಮೂಲಗಳ ಪ್ರಕಾರ, ಶಿವರಾಜ್‌ಕುಮಾರ್‌ ಅವರ “ಭಜರಂಗಿ-2′ ಮೊದಲು ರಿಲೀಸ್‌ ಆಗಲಿದೆ. ಅದರ ಬೆನ್ನಿಗೆ “ಸಲಗ’, “ಕೋಟಿಗೊಬ್ಬ-3′ ಚಿತ್ರಗಳು ಬರಲಿವೆ ಎನ್ನಲಾಗಿದೆ. ಹಾಗಂತ ಇದೇ ಅಂತಿಮ ಎನ್ನುವಂತಿಲ್ಲ. ಪರಸ್ಪರ ನಿರ್ಮಾಪಕರ ಒಪ್ಪಂದದೊಂದಿಗೆ ಸಿನಿಮಾ ಬಿಡುಗಡೆಯಲ್ಲಿ ಹಿಂದೆ-ಮುಂದೆ ಆದರೂ ಆಗಬಹುದು.

ಕ್ಲಾರಿಟಿ ಕೊಟ್ಟರೆ ಹೊಸಬರಿಗೆ ಅನುಕೂಲ: ಸ್ಟಾರ್‌ಗಳ ಸಿನಿಮಾದ ಬಿಡುಗಡೆ ಮೇಲೆ ಹೊಸಬರು ತಮ್ಮ ಸಿನಿಮಾಗಳ ಬಿಡುಗಡೆಯನ್ನು ನಿರ್ಧರಿಸುತ್ತಾರೆ. ಕಳೆದ ಬಾರಿ ಸ್ಟಾರ್‌ಗಳು ಡೇಟ್‌ ಅನೌನ್ಸ್‌ ಮಾಡಿದ ನಂತರ ಹೊಸಬರು ಸಿನಿಮಾ ಬಿಡುಗಡೆ ಮಾಡಿದರು. ಹಾಗಾಗಿ, ಈ ಬಾರಿಯೂ ಒಂದು ಸ್ಪಷ್ಟತೆ ನೀಡಿದರೆ ಹೊಸಬರು ತಮ್ಮ ಸಿನಿಮಾಗಳ ಬಿಡುಗಡೆಯನ್ನು ಪ್ಲ್ರಾನ್‌ ಮಾಡಿಕೊಳ್ಳಬಹುದು

ರಿಲೀಸ್‌ ಮಾಡಲು ನಾನು ರೆಡಿ

ಚಿತ್ರಮಂದಿರಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅನುಮತಿ ಕೊಟ್ಟ ಕೂಡಲೇ ನನ್ನ “ಸಲಗ’ಚಿತ್ರವನ್ನು ರಿಲೀಸ್‌ ಮಾಡಲು ನಾನು ರೆಡಿಯಾಗಿದ್ದೇನೆ.ಈ ಬಗ್ಗೆ ಇತರ ನಿರ್ಮಾಪಕರ ಜೊತೆ ಚರ್ಚೆ ನಡೆಯುತ್ತಿದ್ದು, ಅವರೆಲ್ಲರೂನನಗೆ ಸಾಥ್‌ ನೀಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲಾ ನಿರ್ಮಾಪಕರು ಒಪ್ಪಂದದೊಂದಿಗೆ ಯಾವುದೇ ಗೊಂದಲವಿಲ್ಲದಂತೆ ಸಿನಿಮಾಬಿಡುಗಡೆ ಮಾಡುತ್ತೇವೆ.

– ಕೆ.ಪಿ.ಶ್ರೀಕಾಂತ್‌”ಸಲಗ’ಚಿತ್ರ ನಿರ್ಮಾಪಕರು

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.