ಕಿಲಾಡಿಗಳಿಗೆ ಮೆಚ್ಚುಗೆ
Team Udayavani, Jan 1, 2021, 6:45 PM IST
“ಕಿಲಾಡಿಗಳು’- ಹೀಗೊಂದು ಸಿನಿಮಾ ಬಿಡುಗಡೆಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಈ ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಖ್ಯವಾಗಿ ಪೊಲೀಸ್ ಇಲಾಖೆ ಸಿನಿಮಾವನ್ನು ಮೆಚ್ಚಿಕೊಂಡಿದೆ. ಬಿ.ಪಿ.ಹರಿಹರನ್ ಅವರ ನಿರ್ದೇಶನ, ನಿರ್ಮಾಣವಿದೆ. ಮಹೇಂದ್ರ ಮಣೋತ್ ಕೂಡಾ ಚಿತ್ರದನಿರ್ಮಾಣದಲ್ಲಿ ಕೈ ಜೋಡಿಸುವ ಜೊತೆಗೆ ಪ್ರಮುಖ ಪಾತ್ರ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹರಿಹರನ್, “ಇದು ಮನುಷ್ಯನ ಅಂಗಾಂಗಗಳಕಳ್ಳಸಾಗಣಿಕೆ ಕುರಿತಾದ ಸಿನಿಮಾ. ಈ ಚಿತ್ರದಲ್ಲಿ ಮಕ್ಕಳನ್ನುಕಿಡ್ನಾಪ್ ಮಾಡಿ, ಅವರ ಅಂಗಾಂಗಗಳನ್ನು ಯಾವ ರೀತಿ ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡುತ್ತಾರೆ, ಅದಕ್ಕೆ ಅವರು ಅನುಸರಿಸುವ ಮಾರ್ಗಗಳೇನು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು. ಚಿತ್ರತಂಡ ಈ ಚಿತ್ರವನ್ನು ಪೊಲೀಸರಿಗೆ ಅರ್ಪಿಸಿದೆ.
ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಪೊಲೀಸ್ ಅಂಶಗಳು. ಇಡೀ ಚಿತ್ರದಲ್ಲಿ ಪೊಲೀಸ್ ಸಾಹಸವನ್ನು ಎತ್ತಿಹಿಡಿಯಲಾಗಿದೆ. ಪೊಲೀಸರ ಕುರಿತಾಗಿಯೇ ಹಾಡುಗಳಿದೆ. ಪೊಲೀಸ್‌ಇಲಾಖೆಗೆ ಟಿಕೆಟ್ ಕೂಡಾ ನೀಡಿದ್ದು, ಕುಟುಂಬ ಸಮೇತ ಸಿನಿಮಾ ನೋಡಿಖುಷಿ ಪಟ್ಟಿದ್ದಾರೆ. ಇನ್ನು, ಕಳ್ಳರು ಮಕ್ಕಳನ್ನು ಕಿಡ್ನಾಪ್ ಮಾಡಿದಾಗ ಪೊಲೀಸರು ಯಾವ ರೀತಿ ಅವರನ್ನು ರಕ್ಷಿಸುತ್ತಾರೆ, ಅವರು ತೆಗೆದುಕೊಳ್ಳುವ ರಿಸ್ಕ್ಯಾವ ರೀತಿಯದ್ದು ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ.ಚಿತ್ರದಲ್ಲಿ ಗುರುರಾಜ ಹೊಸಕೋಟೆ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಶ್ರೀನಾಥ್ ಕೈಯಲ್ಲಿ ಪ್ರಣಯ ರಾಜ ಪೋಸ್ಟರ್ : “ಪ್ರಣಯ ರಾಜ’ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಮೊದಲು ನೆನಪಿಗೆ ಬರುವಹೆಸರು ಹಿರಿಯ ನಟ ಶ್ರೀನಾಥ್ ಅವರದ್ದು. 1970-80ರ ದಶಕದಲ್ಲಿ ರೊಮ್ಯಾಂಟಿಕ್ ಚಿತ್ರಗಳ ಮೂಲಕ “ಪ್ರಯಣ ರಾಜ’ ಎಂಬಪಟ್ಟ ಗಿಟ್ಟಿಸಿಕೊಂಡಿದ್ದರು ಶ್ರೀನಾಥ್.
ಈಗ ಇದೇ “ಪ್ರಣಯ ರಾಜ’ ಎಂಬ ಹೆಸರಿನಲ್ಲಿಕನ್ನಡದಲ್ಲಿ ಹೊಸ ಚಿತ್ರವೊಂದು ಸೆಟ್ಟೇರಲು ರೆಡಿಯಾಗುತ್ತಿದೆ. ಅಂದಹಾಗೆ, ಈ “ಪ್ರಣಯರಾಜ’ ಚಿತ್ರದಲ್ಲಿ ನಟ ಭುವನ್ ಪೊನ್ನಣ್ಣನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಹಿರಿಯ ನಟಶ್ರೀನಾಥ್ ಅವರ ಕೈಯಿಂದ ಚಿತ್ರತಂಡ, “ಪ್ರಣಯ ರಾಜ’ ಚಿತ್ರದ ಮೊದಲ ಪೋಸ್ಟರ್‌ನ ಬಿಡುಗಡೆಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.