ಗಾಳಿಪಟ ಪ್ರಾದೇಶಿಕವಾರು ಹಾರಾಟ


Team Udayavani, Jan 25, 2019, 12:30 AM IST

w-26.jpg

ಒಂದು ಕಡೆ “ಗಾಳಿಪಟ’ ಚಿತ್ರಕ್ಕೆ 11 ವರ್ಷ, ಇನ್ನೊಂದು ಕಡೆ “ಗಾಳಿಪಟ-2′ ಆರಂಭ … ಈ ಎರಡು ಸಂಭ್ರಮಕ್ಕೆ ಯೋಗರಾಜ್‌ ಭಟ್‌ ಹಾಗೂ ತಂಡ ಸಾಕ್ಷಿಯಾಗಿತ್ತು. “ಗಾಳಿಪಟ’ ಚಿತ್ರಕ್ಕೆ 11 ವರ್ಷ ತುಂಬಿದ ದಿನವೇ ತಮ್ಮ ಹೊಸ ಚಿತ್ರ “ಗಾಳಿಪಟ-2′ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮ ಮುಂದೆ ಬಂದಿದ್ದರು ಭಟ್ಟರು. ಈ ಬಾರಿಯೂ ಭಟ್ಟರು ತಮ್ಮ ಹೊಸ ಚಿತ್ರಕ್ಕಾಗಿ ದೊಡ್ಡ ತಂಡವನ್ನು ಸೇರಿಸಿದ್ದಾರೆ. ಈ ಬಾರಿ ಭಟ್ಟರದ್ದು ಮಲ್ಟಿಸ್ಟಾರ್‌ ಸಿನಿಮಾ ಎನ್ನಬಹುದು. ಮೂವರು ನಾಯಕಿಯರು ಹಾಗೂ ಐವರು ನಾಯಕರಿದ್ದಾರೆ. ಜೊತೆಗೆ ಅನಂತ್‌ನಾಗ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಗಾಳಿಪಟ-2′ ಚಿತ್ರದಲ್ಲಿ ಯೋಗರಾಜ್‌ ಭಟ್ಟರು ಬೇರೆ ಬೇರೆ ಪ್ರಾದೇಶಿಕತೆಯನ್ನು ಒಟ್ಟು ಸೇರಿಸಿದ್ದಾರೆ. ಕರಾವಳಿ, ವಿದೇಶ, ಉತ್ತರ ಕರ್ನಾಟಕ, ಮಂಡ್ಯ ಹಾಗೂ ಬೆಂಗಳೂರು … ಈ ಭಾಗದ ಪಾತ್ರಗಳೊಂದಿಗೆ ಭಟ್ಟರು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಮಹೇಶ್‌ ದಾನನ್ನವರ್‌ ನಿರ್ಮಿಸುತ್ತಿದ್ದಾರೆ. “ಶು ತಾಯ್‌’ ಎಂಬ ಪಂಜಾಬಿ ಸಿನಿಮಾ ನಿರ್ಮಿಸಿರುವ ಮಹೇಶ್‌ ಅವರಿಗೆ ಇದು ಮೊದಲ ಸಿನಿಮಾ. 

ಚಿತ್ರದಲ್ಲಿ ನಾಯಕರಾಗಿ ಶರಣ್‌, ಪವನ್‌( ಲೂಸಿಯಾ), ರಿಷಿ ಹಾಗೂ ನಾಯಕಿಯರಾಗಿ ಸೋನಾಲ್‌ ಮೊಂತೆರೋ, ಶರ್ಮಿಳಾ ಮಾಂಡ್ರೆ ಈಗಾಗಲೇ ಆಯ್ಕೆಯಾಗಿದ್ದು, ಇನ್ನೊಬ್ಬಳು ಮಾಡೆಲ್‌ ಹಾಗೂ ಚೈನಾ ಹುಡುಗಿಯ ಆಯ್ಕೆ ನಡೆಯಬೇಕಿದೆ. ಚಿತ್ರದ ಬಗ್ಗೆ ಮಾತನಾಡುವ ಯೋಗರಾಜ್‌ ಭಟ್‌, “ಮೊದಲ “ಗಾಳಿಪಟ’ಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. “ಗಾಳಿಪಟ-2′ ಮಾಡಬೇಕೆಂದುಕೊಂಡಾಗಲೇ ಮೊದಲ ಪಾತ್ರಗಳು ಯಾವುದೂ ಇರಲ್ಲ ಅಂದುಕೊಂಡಿದ್ದೆ. ಅದರಂತೆ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಇವತ್ತಿನ ಹುಡುಗರ ಬಾಳು-ಗೋಳು ಪ್ರೇಮ-ಕಾಮ, ಜೀವನವನ್ನು ನೋಡುವ ಹಾಗೂ ಹೆಣೆಯುವ ರೀತಿಯನ್ನು ಹೇಳಲು ಹೊರಟಿದ್ದೇನೆ. ಮೊದಲ ಬಾರಿಗೆ ಜಯಂತ್‌ ಕಾಯ್ಕಿಣಿ ಹಾಗೂ ನಾನು ಜೊತೆಗೆ ಕುಳಿತು ಸ್ಕ್ರಿಪ್ಟ್ ಮಾಡುತ್ತಿದ್ದೇವೆ’ ಎನ್ನುವುದು ಅವರ ಮಾತು. ನಿರ್ಮಾಪಕ ಮಹೇಶ್‌ ಈ ಸಿನಿಮಾವನ್ನು ಅಕ್ಟೋಬರ್‌ 4ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ. “ಮಹೇಶ್‌ ಚಿತ್ರವನ್ನು ಅಕ್ಟೋಬರ್‌ 4 ಬಿಡುಗಡೆ ಮಾಡುವುದಾಗಿ ಘೋಷಿಸುವ ಎಂದರು. ಆಗ ನಾನು ಹೇಳಿದೆ, “ಬಿಡುಗಡೆಯ ತಾರೀಕು ಹಾಗೂ ತಿಂಗಳು ಬೇಕಾದರೆ ಹೇಳುವ, ಆದರೆ ಇಸವಿ ಬೇಡ. ಇದು ಕರ್ನಾಟಕ’ ಎಂದು. ಈ ಬಾರಿ ಅಕ್ಟೋಬರ್‌ 4ಕ್ಕೆ ರಿಲೀಸ್‌ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ’ ಎನ್ನುವುದು ಭಟ್ಟರ ಮಾತು. ಚಿತ್ರದ ಬಹುತೇಕ ಭಾಗ ವಿದೇಶದಲ್ಲಿ ಚಿತ್ರೀಕರಣವಾಗಲಿದೆಯಂತೆ. 

ಚಿತ್ರದ ಬಗ್ಗೆ ಮಾತನಾಡುವ ಜಯಂತ್‌ ಕಾಯ್ಕಿಣಿ, “ಮೊದಲ “ಗಾಳಿಪಟ’ ಹುಟ್ಟಿ 11 ವರ್ಷ. ಆಗಲೂ ನಾನಿದ್ದೆ, ಈಗಲೂ ನಾನಿದ್ದೇನೆ ಎಂಬ ಖುಷಿ. “ಗಾಳಿಪಟ’ ಸ್ವತ್ಛಂದವಾಗಿ ಹಾರಬೇಕಾದರೆ ಸೂತ್ರ ಗಟ್ಟಿ ಇರಬೇಕು. ಆ ಸೂತ್ರ ಯಾವುದಾದರೂ ಇರಬಹುದು, ಜೀವನಪ್ರೀತಿ, ಭಾವನಾತ್ಮಕ ಕೇಂದ್ರ ಅಥವಾ ಸಂಬಂಧಗಳು … ಈ ತರಹದ ಅಂಶಗಳೊಂದಿಗೆ ಈ ಸಿನಿಮಾ ಸಾಗಲಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನ ಬಗ್ಗೆ ಆಕರ್ಷಿತರಾಗಿ ಬರುವ ಯುವಕರ ಕಣ್ಣಿನ ಖುಷಿ, ದುಃಖ, ಹತಾಶೆಯನ್ನು ಕಟ್ಟಿಕೊಡುವ ಅಪರೂಪದ ನಿರ್ದೇಶಕ ಯೋಗರಾಜ್‌ ಭಟ್‌. ಈ ಚಿತ್ರದಲ್ಲಿ ಅದನ್ನು ಕಟ್ಟಿಕೊಡಲಿದ್ದಾರೆ’ ಎಂದರು. ಹಿರಿಯ ನಟ ಅನಂತ್‌ನಾಗ್‌, ಭಟ್ಟರ ಜೊತೆಗೆ ಈ ಹಿಂದಿನ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ರಂಗಾಯಣ ರಘು ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಉಳಿದಂತೆ ಚಿತ್ರದಲ್ಲಿ ನಟಿಸುತ್ತಿರುವ ಶರಣ್‌ ಇಲ್ಲಿ ಉತ್ತರ ಕರ್ನಾಟಕದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜನಪದ ಕಲೆಯನ್ನು ಮೈಗೂಢಿಸಿಕೊಂಡಿರುವ ಹುಡುಗನಾದರೆ, ಸೋನಾಲ್‌ ಮೊಂತೆರೋ ಕರಾವಳಿಯ ಯಕ್ಷಗಾನ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ತರಬೇತಿ ಕೂಡಾ ಪಡೆಯುತ್ತಿದ್ದಾರಂತೆ. ರಿಷಿ ಮಂಡ್ಯ ಹುಡುಗನಾದರೆ, ಶರ್ಮಿಳಾ ವಿದೇಶದಿಂದ ಬಂದ ಹುಡುಗಿಯಾಗಿ ನಟಿಸಲಿದ್ದಾರೆ. ಪವನ್‌ ಪಕ್ಕಾ ಬೆಂಗಳೂರು ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಮೊದಲ ಬಾರಿಗೆ ಭಟ್ಟರ ಚಿತ್ರಕ್ಕೆ ಕೆಲಸ ಮಾಡುತ್ತಿರುವ ಖುಷಿ ಅರ್ಜುನ್‌ ಅವರದು. 

ಟಾಪ್ ನ್ಯೂಸ್

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.