ಸಂಗೀತ ನಿರ್ದೇಶನದತ್ತ ಲಕ್ಷ್ಮೀ
Team Udayavani, Jun 21, 2019, 5:00 AM IST
ಸಂಗೀತ ಕ್ಷೇತ್ರವೇ ಹಾಗೆ. ಹೊಸ ಹೊಸ ಕನಸುಗಳನ್ನು ತುಂಬುತ್ತಲೇ ಇರುತ್ತದೆ. ಗಾಯಕರಾದವರು ಸಂಗೀತ ನಿರ್ದೇಶಕರಾಗಬೇಕು, ಸಂಗೀತ ನಿರ್ದೇಶಕರಾದವರು ಅದರಲ್ಲೇ ಇನ್ನೇನೋ ಸಾಧನೆ ಮಾಡಬೇಕೆಂದು ಕನಸು ಕಾಣುತ್ತಾರೆ. ಇಲ್ಲೊಬ್ಬ ಗಾಯಕಿ ಕೂಡಾ ಸಂಗೀತ ನಿರ್ದೇಶಕಿಯಾಗುವ ಕನಸು ಕಾಣುತ್ತಿದ್ದಾರೆ. ಆಕೆ ಬೇರಾರು ಅಲ್ಲ ಲಕ್ಷ್ಮೀ ವಿಜಯ್. ಈಗಾಗಲೇ 120ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿರುವ ಲಕ್ಷ್ಮೀಯವರಿಗೆ ಮುಂದೆ ಸಿನಿಮಾಗಳಿಗೆ ಸಂಗೀತ ನೀಡುವ ಕನಸಿದೆ. “ಸ್ನೇಹನಾ ಪ್ರೀತಿನಾ’ ಚಿತ್ರದ ಹಾಡಿನ ಮೂಲಕ ಸಿನಿಮಾ ಅವಕಾಶ ಪಡೆದು ಕೊಂಡ ಲಕ್ಷ್ಮೀ ಇಲ್ಲಿವರೆಗೆ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅದರಲ್ಲೂ ಯಶ್ ನಾಯಕರಾಗಿರುವ “ಜಾನು’ ಚಿತ್ರದ “ಸ್ವಲ್ಪ ಬಿಟ್ಕೊಂಡು …’ ಹಾಡು ಇವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು ಸುಳ್ಳಲ್ಲ. “ಅಂಬರೀಷ’, “ವಿಷ್ಣುವರ್ಧನ’, “ಪರಮೇಶ ಪಾನ್‌ವಾಲಾ’, “ಕಲ್ಪನಾ’, “ಸಿಂಹಾದ್ರಿ’ ಸೇರಿದಂತೆ ಹಲವು ಸಿನಿಮಾಗಳಿಗೆ ಲಕ್ಷ್ಮೀ ಹಾಡಿದ್ದಾರೆ. ಜೀ ವಾನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಗ್ರಾಂಡ್ ತೀರ್ಪುಗಾರರ ಪ್ಯಾನಲ್‌ನಲ್ಲಿ ಒಬ್ಬರಾಗಿರುವ ಲಕ್ಷ್ಮೀ ಈಗಾಗಲೇ ಒಂದಷ್ಟು ಟ್ಯೂನ್‌ಗಳನ್ನು ಸಿದ್ಧಪಡಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಜೊತೆಗೆ ಇಲ್ಲಿವರೆಗೆ ಹಲವು ವೇದಿಕೆಗಳಲ್ಲಿ ಸಿನಿಮಾ ಕಾರ್ಯಕ್ರಮ ಕೂಡಾ ನಡೆಸಿಕೊಟ್ಟಿದ್ದಾರೆ. ಈ ಎಲ್ಲಾ ಅನುಭವ ಹೊಂದಿರುವ ಲಕ್ಷ್ಮೀ ವಿಜಯ್ ಅವರಿಗೆ ಮುಂದೆ ಒಳ್ಳೆಯ ಸಂಗೀತ ನಿರ್ದೇಶಕಿಯಾಗುವ ಕನಸಿದೆ.
ಲಕ್ಷ್ಮೀಯವರು “ಗಗನ ಮ್ಯೂಸಿಕ್ ಅಕಾಡೆಮಿ ಶಾಲೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಇಲ್ಲಿ ಸುಮಾರು ಒಂದು ಸಾಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಪಾಠ ಮಾಡುತ್ತಿದ್ದು, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ “ಸುಮಧುರ ಧ್ವನಿ ಸ್ಪರ್ಧೆ’ ಏರ್ಪಡಿಸಿದ್ದು, ಜೂನ್ ಮೂವತ್ತರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.