ಎಡಕಲ್ಲು ಗುಡ್ಡದ ಮೇಲೆ ಸ್ವಾತಿ
Team Udayavani, Apr 20, 2018, 6:05 AM IST
ಸಾಮಾನ್ಯವಾಗಿ ಚಿತ್ರರಂಗಕ್ಕೆ ಬಂದು ಒಂದಷ್ಟು ವರ್ಷ ಅನುಭವವಾದ ನಂತರ ನಾಯಕಿ ಪ್ರಧಾನ ಅಥವಾ ನಾಯಕಿಯ ಸುತ್ತ ಸುತ್ತುವ ಕಥೆಗಳನ್ನು ನಟಿಯರು ಒಪ್ಪಿಕೊಳ್ಳುತ್ತಾರೆ. ಆದರೆ, ಸ್ವಾತಿ ಶರ್ಮಾಗೆ ಚಿತ್ರರಂಗಕ್ಕೆ ಬಂದ ಒಂದೆರಡು ವರ್ಷದಲ್ಲೇ ಜವಾಬ್ದಾರಿಯುತ ಪಾತ್ರ ಸಿಕ್ಕ ಖುಷಿ ಇದೆ. ಸ್ವಾತಿ ಶರ್ಮಾ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ನಾಯಕಿ. ಸದ್ಯ “ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಸಿನಿಮಾದ ಮೇಲೆ ಸ್ವಾತಿ ಶರ್ಮಾಗೆ ಸಾಕಷ್ಟು ನಿರೀಕ್ಷೆ ಇದೆ.
“ನಾನು ಸೋಲೋ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದು. ಜೊತೆಗೆ ಇದು ಮಹಿಳಾ ಪ್ರಧಾನ ಚಿತ್ರ. ಕಥೆ ನಾಯಕಿಯ ಸುತ್ತವೇ ಸುತ್ತುವುದರಿಂದ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಚಿತ್ರತಂಡದವರ ಸಹಕಾರದಿಂದ ಕೊಟ್ಟ ಪಾತ್ರವನ್ನು ನಿಭಾಯಿಸಿದ ಖುಷಿ ಇದೆ’ ಎಂಬುದು ಸ್ವಾತಿ ಮಾತು. ಈ ಚಿತ್ರ ಬಿಡುಗಡೆಯಾದ ನಂತರ ಸ್ವಾತಿಗೆ ಮತ್ತಷ್ಟು ಒಳ್ಳೆಯ ಸಿನಿಮಾಗಳು ಸಿಗುವ ನಿರೀಕ್ಷೆಯೂ ಇದೆ.
ಸ್ವಾತಿಗೆ ಸಿನಿಮಾ ಮೇಲೆ ಆಸಕ್ತಿ ಇತ್ತಂತೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವಾಗ ಸಿಕ್ಕಿದ್ದು ಧಾರಾವಾಹಿ. ಹೌದು, “ಮನೆದೇವ್ರು’ ಧಾರಾವಾಹಿಯಲ್ಲಿ. ನಾಯಕನ ತಂಗಿಯ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಸ್ವಾತಿ ಆ ನಂತರ ನಟಿಸಿದ್ದು, “ರಾಮರಾಜ್ಯ’ ಸಿನಿಮಾದಲ್ಲಿ. “ರಾಮರಾಜ್ಯ’ ಎಂಬ ಮಕ್ಕಳ ಸಿನಿಮಾದಲ್ಲಿ ಸ್ವಾತಿ ನಟಿಸುತ್ತಿರುವಾಗ ಸಿಕ್ಕಿದ್ದು “ಎಡಕಲ್ಲು ಗುಡ್ಡದ ಮೇಲೆ’. ಆಡಿಷನ್‌ನಲ್ಲಿ ಪಾಸಾದ ಸ್ವಾತಿ “ಗುಡ್ಡ’ ಸೇರಿಕೊಳ್ಳುತ್ತಾರೆ. ಈ ನಡುವೆಯೇ ಸ್ವಾತಿ “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಫಾರ್ಚೂನರ್’ ಸಿನಿಮಾಗಳಲ್ಲೂ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. “ಫಾರ್ಚೂನರ್’ ಸಿನಿಮಾದಲ್ಲಿ ಉತ್ತರ ಕರ್ನಾಟಕ ಹುಡುಗಿಯಾಗಿ ಸ್ವಾತಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಸ್ವಾತಿ ತಮಗೆ ತಾವೇ ಒಂದು ಷರತ್ತು ಹಾಕಿಕೊಂಡಿದ್ದಾರೆ. ಅದು ಯಾವುದೇ ಕಾರಣಕ್ಕೂ ಗ್ಲಾಮರಸ್ ಪಾತ್ರ ಮಾಡಬಾರದು ಎಂದು.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.