ದೇಸಿ ಸ್ಪೆಷಲ್ ; ಥ್ರೀ-ಇನ್-ಒನ್ ಹುಟ್ಟುಹಬ್ಬದಲ್ಲಿ ಆಡಿಯೋ ಬಿಡುಗಡೆ
Team Udayavani, Jun 22, 2018, 6:00 AM IST
ಅಲ್ಲಿ ಎತ್ತ ನೋಡಿದರೂ ಜನಜಾತ್ರೆ. ಸಿಕ್ಕವರೆಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಎದುರಿಗೆ ಬಂದ ನಟ, ನಟಿಯರ ಕೈ ಕುಲುಕಿ ಅವರೊಂದಿಗೂ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವೇದಿಕೆ ಮೇಲೆ ಚಿತ್ರತಂಡ ಹೋದಾಗಲೂ, ವೇದಿಕೆ ಮುಂಭಾಗದಲ್ಲಿದ್ದವರು ಸೆಲ್ಫಿಗೆ ಫೋಸ್ ಕೊಡುತ್ತಿದ್ದರು …
– ಅಂದಹಾಗೆ, ಇದು “ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ದಿನಕರ್ ತೂಗುದೀಪ ಈ ಚಿತ್ರದ ನಿರ್ದೇಶಕರು. “ನೆನಪಿರಲಿ’ ಪ್ರೇಮ್,ಪ್ರಜ್ವಲ್ ದೇವರಾಜ್, ಹರಿಪ್ರಿಯಾ ಪ್ರಮುಖ ಆಕರ್ಷಣೆ. ಹಾಗಾಗಿ, ಅಂದು ಚಿತ್ರತಂಡದ ಕುಟುಂಬ ಸೇರಿದಂತೆ ರಾಜಕಾರಣಿಗಳು, ಚಿತ್ರರಂಗದ ಬಹುತೇಕ ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷವಾಗಿತ್ತು. ಅಂದು ನಿರ್ದೇಶಕ ದಿನಕರ್
ತೂಗುದೀಪ, ನಿರ್ಮಾಪಕ ಸಮೃದಿಟಛಿ ಮಂಜುನಾಥ್, ನಟರಾದ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ರೇಷ್ಮೆ
ಪಂಚೆ, ಷರ್ಟು ಧರಿಸಿ, ಥೇಟ್ ದೇಸಿ ಶೈಲಿಯಲ್ಲಿ ಮಿಂಚುತ್ತಿದ್ದರು. ಎಲ್ಲರೂ ಅವರೊಂದಿಗೆ ಒಂದೊಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರ್ಯಕ್ರಮ ಶುರುವಾಯಿತು.
ವೇದಿಕೆ ಮೇಲಿನ ಪರದೆಯಲ್ಲಿ ಚಿತ್ರದ ತುಣುಕು ತೋರಿಸಲಾಯಿತು. ನಂತರ ನಿರ್ದೇಶಕ ದಿನಕರ್
ತೂಗುದೀಪ ಮಾತಿಗೆ ನಿಂತರು. “ಪತ್ನಿ ಹೇಳಿದ ಕಥೆ ಇಷ್ಟವಾಗಿದ್ದೇ ತಡ, ನಿರ್ಮಾಪಕರ ಬಳಿ ಹೇಳಿದೆ. ಎರಡೇ ನಿಮಿಷದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿತು. ಚಿತ್ರಕ್ಕೆ ಹೊಸ ಕಲಾವಿದರನ್ನು ಆಯ್ಕೆ ಮಾಡುವ ಚರ್ಚೆ ನಡೆಯಿತು. ಕೊನೆಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಕಥೆಗೆ ತಕ್ಕಂತೆ ಅನುಭವಿ ನಟರಿದ್ದರೆ ಚೆನ್ನಾಗಿರುತ್ತೆ ಅಂದರು. ಕೊನೆಗೆ ಆಯ್ಕೆ
ನಡೆದು, ಚಿತ್ರ ಶುರುವಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರೀಕರಣ ವೇಳೆ ತಂತ್ರಜ್ಞರಿಗೆ ನಾನು ಸಾಕಷ್ಟು ಕಾಟ ಕೊಟ್ಟಿದ್ದೇನೆ. ಅದು ಚಿತ್ರ ಚೆನ್ನಾಗಿ ಬರಲಿ ಎಂಬ ಕಾರಣಕ್ಕಷ್ಟೆ. ನನ್ನ ಕ್ಷಮೆ ಇರಲಿ’ ಎಂದರು ದಿನಕರ್.
ನಿರ್ಮಾಪಕ ಸಮೃದ್ದಿ ಮಂಜುನಾಥ್ ಅಂದು ಖುಷಿಯಿಂದಲೇ ಅತ್ತಿಂದತ್ತ ಓಡಾಡಿಕೊಂಡಿದ್ದರು. ಅಂದು ಅವರ ಪತ್ನಿ, ಮಗ ಮತ್ತು ಅವರ ಹುಟ್ಟುಹಬ್ಬ. ಆಡಿಯೋ ಹೊರಬರಲು ಅದೂ ಕಾರಣವಾಗಿತ್ತು. ದರ್ಶನ್ ಅವರ ಸಹಕಾರದಿಂದ ಚಿತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರ ಮಾಡುವುದು ನನ್ನ ಕೆಲಸ. ಇನ್ನು ಇದು ಕುಟುಂಬ ಸಮೇತ
ನೋಡಬಹುದಾದ ಚಿತ್ರ’ ಅಂದರು ನಿರ್ಮಾಪಕರು.
“ಹಣ ಇದ್ದಾಕ್ಷಣ ಸಿನಿಮಾ ಆಗಲ್ಲ. ಅದಕ್ಕೆ ಒಳ್ಳೆಯ ಕಥೆ ಮತ್ತು ತಯಾರಿ ಬೇಕು. ನಿರ್ಮಾಪಕರ ಹೆಸರಲ್ಲೇ
ಸಮೃದ್ಧಿ ಇದೆ. ಈ ಚಿತ್ರ ಅವರಿಗೆ ಸಮೃದ್ಧಿ ತರಲಿ. ಇನ್ನು, ದಿನಕರ್ ಮೂರು ಹಿಟ್ ಚಿತ್ರ ಕೊಟ್ಟಿದ್ದಾನೆ. ಇನ್ನು ಮುಂದೆಯೂ ಒಳ್ಳೆಯ ಚಿತ್ರ ಕೊಡಲಿ’ ಅಂತ ಹೇಳಿದ್ದು ದರ್ಶನ್.
ಅಂದು ಸಚಿವ ಪುಟ್ಟರಾಜು ಆಗಮಿಸಿದ್ದರು.ಅವರನ್ನು ಚಿತ್ರತಂಡ ಪ್ರೀತಿಯಿಂದ ಗೌರವಿಸಿತು.”ನಾನು ತೂಗುದೀಪ ಶ್ರೀನಿವಾಸ್ ಅವರ ಅಭಿಮಾನಿ.ಈಗ ಅವರ ಮಕ್ಕಳ ನಟನೆ ನೋಡಿ ಖುಷಿಪಡುತ್ತಿದ್ದೇನೆ ಅಂದರು ಸಚಿವರು. ಪ್ರೇಮ್, ಪ್ರಜ್ವಲ್,ಹರಿಪ್ರಿಯಾ ಮತ್ತಿತರರು ಚಿತ್ರದ ಕುರಿತು ಅನುಭವ ಹಂಚಿಕೊಂಡರು. ಅಂದು ದೇವರಾಜ್, ಸುಧಾರಾಣಿ,
ಧನಂಜಯ್, ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್, ಮಾನಸ ದಿನಕರ್, ಕವಿರಾಜ್, ಶೈಲಜಾ ನಾಗ್, ಹರಿಕೃಷ್ಣ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.