ನನಗೆ ಲಾಕ್ಡೌನ್ ಬೋರ್ ಆಗಿಲ್ಲ.. -ಮಾನ್ವಿತಾ
ಸಿನಿಮಾ, ಬರಹ ಮತ್ತು ಟಗರು ಪುಟ್ಟಿಯ ಲೋಕ
Team Udayavani, Apr 17, 2020, 12:01 PM IST
ಲಾಕ್ ಡೌನ್ನಲ್ಲಿ ಹೇಗೆ ಕಾಲ ಕಳೆಯುತ್ತಿದ್ದೀರಿ ಎಂದರೆ ಬಹುತೇಕ ನಟ-ನಟಿಯರ ಉತ್ತರ ಸಿನಿಮಾ, ಬರವಣಿಗೆ. ನಟಿ ಮಾನ್ವಿತಾ ಕೂಡಾ ಇದರಿಂದ ಹೊರತಾಗಿಲ್ಲ. ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಬೆಳಕಿಗೆ ಬಂದ ಮಾನ್ವಿತಾ, ಆ ನಂತರ ಟಗರು, ಇಂಡಿಯಾ ವರ್ಸಸ್ ಇಂಗ್ಲೆಂಡ್ ಸೇರಿದಂತೆ ಹಲವು ಸಿನಿಮಾಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.
ಸದ್ಯ ಮಾನ್ವಿತಾ ಲಾಕ್ ಡೌನ್ನಿಂದ ಮನೆಯಲ್ಲೇ ಇದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದು ಸರಳವಾಗಿ. ಈ ಬಾರಿ ಯಾವುದೇ ಸೆಲೆಬ್ರೆಶನ್ ಇಲ್ಲದೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ. ಗುಟ್ಟಹಳ್ಳಿಯಲ್ಲಿಗೆ ಹೋಗಿ ಒಂದಷ್ಟು ಮಂದಿಗೆ ಆಹಾರ ನೀಡಿದ್ದೇನೆ. ಅದು ಬಿಟ್ಟರೆ ಇಡೀ ದನ ಮನೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ಬಹುತೇಕರು ಇವತ್ತು ಸಿನಿಮಾ, ವೆಬ್ ಸೀರಿಸ್ ನೋಡಿ ಕೊಂಡು ಕಾಲ ಕಳೆಯುತ್ತಿದ್ದಾರೆ. ನಾನು ಕೂಡಾ ಅದರಿಂದ ಹೊರತಲ್ಲ. ಸಿನಿಮಾ, ವೆಬ್ ಸೀರಿಸ್ ನೋಡುವ ಜೊತೆಗೆ ಬರವಣಿಗೆ ಮಾಡುತ್ತಾ ಕಾಲ ಕಳೆಯುತ್ತಿದ್ದೇನೆ ಎನ್ನುವುದು ಮಾನ್ವಿತಾ ಮಾತು.
ಬಹುತೇಕ ಮಂದಿಗೆ ಮನೆಯಲ್ಲೇ ಇದ್ದು ಬೋರಾಗಿ ಬಿಟ್ಟಿದೆ. ಆದರೆ ಮಾನ್ವಿತಾಗೆ ಬೋರ್ ಎಂಬ ಪದ ಹತ್ತಿರ ಸುಳಿದೇ ಇಲ್ಲವಂತೆ. ನನಗೆ ಮನೆಯಲ್ಲೇ ಇದ್ದು ಯಾವುದೇ ಬೇಸರವಾಗಿಲ್ಲ, ಈ ದಿನಗಳಲ್ಲಿ ಏನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಫೀಲ್ ಕೂಡಾ ನನಗಿಲ್ಲ. ನಮ್ಮಿಂದ ಜಗತ್ತಿಗೆ ಏನು ಕೊಡುವುದಕ್ಕೆ ಸಾಧ್ಯವೋ ಅದನ್ನು ನೀಡಲು ಈ ಲಾಕ್ ಡೌನ್ ಸರಿಯಾದ ಸಮಯ. ಮನೆಯಲ್ಲೇ ಇದ್ದು ನಮ್ಮ ಆರೋಗ್ಯ ಕಾಪಾಡಿದರೆ ನಮ್ಮ ಸುತ್ತಲಿನವರು ಕೂಡಾ ಆರೋಗ್ಯವಾಗಿರುತ್ತಾರೆ. ನಾನಂತೂ ಲಾಕ್ ಡೌನ್ನಲ್ಲಿ ಸಾಕಷ್ಟು ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ ಎನ್ನುವುದು ಮಾನ್ವಿತಾ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.