ಲಾಕ್ ಓಪನ್ ಆಗುವ ಸಮಯ
Team Udayavani, Jan 18, 2019, 12:30 AM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಲಾಕ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬ ವಾಸ್ತವ ಜಗತ್ತಿಗೆ, ಈ ದೇಶಕ್ಕೆ ಬೇಕಾಗಿರುವ ಮತ್ತು ಇತಿಹಾಸದ ಪುಟಗಳಲ್ಲಿ ಮುಚ್ಚಿ ಹೋಗಿರುವ ಕೆಲವು ಅಸಂಗತ ಸತ್ಯಗಳನ್ನು ಹೇಗೆ ಬಿಚ್ಚಿಡುತ್ತಾನೆ. ಅದರಿಂದ ಏನೇನು ಬೆಳವಣಿಗೆಗಳು, ಬದಲಾವಣೆಗಳು ಆಗುತ್ತದೆ ಎನ್ನುವುದೇ “ಲಾಕ್’ ಚಿತ್ರದ ಕಥಾಹಂದರ. ಅದರಲ್ಲೂ ಸ್ವಾತಂತ್ರ್ಯ ಹೋರಾಟದ ವೇಳೆ ವಿಮಾನ ಅಪಘಾತದಲ್ಲಿ ನಿಗೂಢವಾಗಿ ಕಣ್ಮರೆಯಾದ ಸುಭಾಷ್ ಚಂದ್ರ ಬೋಸ್, ಏನಾದರು ಅವರ ಬಗ್ಗೆ ಹಲವ ಸಂಗತಿಗಳು ಯಾಕೆ ನಿಗೂಢವಾಗಿ ಉಳಿಯಿತು … ಇಂತಹ ಹಲವು ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತದೆ “ಲಾಕ್’ ಚಿತ್ರತಂಡ.
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಲಾಕ್’ ಚಿತ್ರಕ್ಕೆ ಪರಶುರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಅಭಿಲಾಶ್, ಸೌಂದರ್ಯ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ಶಶಿಕುಮಾರ್ ಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರಾಜ್ ಹಿರೇಮಠ, ರಾಕ್ ಸತೀಶ್, ಪ್ರಕಾಶ್ ರಾಜಕುಮಾರ್, ಅವಿನಾಶ್, ಶರತ್ ಲೋಹಿತಾಶ್ವ, ದಿಶಾ ಪೂವಯ್ಯ, ಎಂ.ಕೆ ಮಠ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಎಂ. ಸಂಜೀವ ರಾವ್ ಸಂಗೀತ, ವಿ. ರಾಘವೇಂದ್ರ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿನಯ ಚಂದ್ರ ಪ್ರಸನ್ನ ಛಾಯಾಗ್ರಹಣ, ಗೌತಮ್ ನಾಯಕ್ ಸಂಕಲನ ಚಿತ್ರದಲ್ಲಿದೆ. “ಪಿ.ಆರ್ ಪಿಕ್ಚರ್ ಹೌಸ್’ ಬ್ಯಾನರ್‌ನಲ್ಲಿ ರೋಹಿತ್ ಅಶೋಕ್ ಕುಮಾರ್, ಪಿ. ರಾಮ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪರಶುರಾಮ್, “ನಮ್ಮ ಸುತ್ತಮುತ್ತ ನಾವು ಕೇಳಿದ, ನಮ್ಮ ನಡುವೆ ಮುಚ್ಚಿ ಹೋಗಿರುವ ಅನೇಕ ಕಥೆಗಳಲ್ಲಿ ಒಂದನ್ನು ಹುಡುಕಿ ತೆಗೆದು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದೇವೆ. ಅಂತಹ ಒಂದು ಕಥೆ ಈ ಸಿನಿಮಾದಲ್ಲಿ ಅನ್ ಲಾಕ್ ಆಗಲಿದೆ. ಅದು ಏನು ಅನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎನ್ನುತ್ತಾರೆ. “ಲಾಕ್’ ಚಿತ್ರ ಇಂದು ಸುಮಾರು ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದ್ದು, ಹೊಸ ಪ್ರತಿಭೆಗಳ “ಲಾಕ್’ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.