ಮಹಿರ ಆಟ ಶುರು
ಲಂಡನ್ ಹುಡುಗರ ಥ್ರಿಲ್ಲರ್ ಕಥೆ
Team Udayavani, Jul 26, 2019, 5:00 AM IST
ಇಡೀ ತಂಡದ ಮೊಗದಲ್ಲಿ ಮಂದಹಾಸ ಮೂಡಿತ್ತು. ಕೊನೆಗೂ ತಮ ಶ್ರಮ ಪ್ರೇಕ್ಷಕರ ಮುಂದೆ ಬರುತ್ತದೆ ಹಾಗೂ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ವಿಶ್ವಾಸ ಕೂಡಾ ಇದೆ. ಎಲ್ಲಾ ಓಕೆ, ಯಾವ ಚಿತ್ರದ ಬಗ್ಗೆ ಹೇಳುತ್ತಿದ್ದಾರೆಂದು ನೀವು ಕೇಳಬಹುದು. “ಮಹಿರ’ ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಆ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಗಾಂಧಿನಗರಕ್ಕೆ ಮತ್ತೂಂದು ಹೊಸಬರ ತಂಡ ಎಂಟ್ರಿಕೊಟ್ಟಂತಾಗುತ್ತದೆ.
ಮಹೇಶ್ ಗೌಡ ಈ ಚಿತ್ರದ ನಿರ್ದೇಶಕರು. ಇವರ ಸ್ನೇಹಿತ ವಿವೇಕ್ ಕೊಡಪ್ಪ ನಿರ್ಮಾಪಕರು. ಮಹೇಶ್ ಅವರು ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ವಿವೇಕ್. ಕನ್ನಡಕ್ಕೆ ಇದೊಂದು ಹೊಸ ಬಗೆಯ ಸಿನಿಮಾವಾಗಿ ಮೆಚ್ಚುಗೆ ಪಡೆಯುತ್ತದೆ ಎಂಬ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ನಿರ್ದೇಶಕ ಮಹೇಶ್ ಗೌಡ ತುಂಬು ವಿಶ್ವಾಸದಿಂದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಯುವಿಕೆ ಮುಕ್ತಿ ಸಿಗುವ ಸಮಯ ಬಂದಿದೆ ಎನ್ನುವುದು ಮಹೇಶ್ ಅವರ ಮಾತು. ಚಿತ್ರದ ಬಗ್ಗೆ ಮಾತನಾಡುವ ಮಹೇಶ್, “ಮಹಿರ ಹೊಸ ಸಿನಿಮಾ ಮೇಕರ್ಗಳಿಗೆ ಪ್ರೇರಣೆಯಾಗಬಹುದೆಂಬ ಭರವಸೆಯೂ ಇದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ತಾಯಿ ಮಗಳ ಸುತ್ತ ಸಾಗುತ್ತದೆ. ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರವೂ ಪ್ರಮುಖವಾಗಿದೆ. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಾಗುವ ಚಿತ್ರ ಕ್ಷಣ ಕ್ಷಣಕ್ಕೂ ಪ್ರೇಕ್ಷಕರಿಗೆ ರೋಚಕ ಅನುಭವ ಕೊಡುತ್ತದೆ’ ಎಂದರು. ಖುಷಿಯಾಗಿದ್ದ ತಾಯಿ-ಮಗಳ ನಡುವೆ ಘಟನೆಯೊಂದು ನಡೆದು ಅದು ಯಾವ ರೀತಿ ಅವರನ್ನು ತೊಂದರೆಗೆ ಸಿಲುಕಿಸುತ್ತದೆ ಮತ್ತು ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾರೆಂಬುದೇ ಚಿತ್ರದ ಕಥಾಹಂದರ. ಈ ಕಥೆಯನ್ನು ತುಂಬಾ ಸಾಹಸಮಯವಾಗಿ ಹೇಳಲಾಗಿದೆಯಂತೆ. ಅಂದಹಾಗೆ, ಲಂಡನ್‌ನಲ್ಲಿ ಉದ್ಯೋಗದಲ್ಲಿದ್ದ ಮಹೇಶ್ ಸಿನಿಮಾ ಮೇಲಿನ ಆಸಕ್ತಿಯಿಂದ ಲಂಡನ್ ಫಿಲಂ ಅಕಾಡೆಮಿಯಿಂದ ನಿರ್ದೇಶನದ ತರಬೇತಿ ಪಡೆದು ಬಂದು “ಮಹಿರ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ನಟಿಸಿದ ಮಂಗಳೂರು ಮೂಲದ ವರ್ಜಿನಿಯ ರಾಡ್ರಿಗಸ್, ಚೈತ್ರಾ, ರಾಜ್ ಬಿ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದರಿಂದ ಚಿತ್ರೀಕರಣದ ವೇಳೆ ನಟಿಸಲು ಕಷ್ಟವಾಗಲಿಲ್ಲ ಎನ್ನುವುದು ವರ್ಜಿನಿಯ ಅವರ ಮಾತು. ಚಿತ್ರಕ್ಕೆ ಚೇತನ್ ಸಾಹಸ ಸಂಯೋಜಿಸಿದ್ದು, ನೈಜವಾದ ಫೈಟ್‌ಗಳನ್ನು ಕಾಣಬಹುದಂತೆ. ಯಾವುದೇ ಬಿಲ್ಡಪ್ ಇಲ್ಲದೇ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾಗಿ ಹೇಳಿಕೊಂಡರು.
ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರಾಕ್-ನೀಲ್ ಸಂಗೀತ, ನೀಲ್ ಮುಕುಂದನ್ ಹಿನ್ನೆಲೆ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.