ಲವ್ ತರಬೇತಿ ಪಡೆದ ಆರಕ್ಷಕ
Team Udayavani, Jan 19, 2018, 1:00 PM IST
ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ. ಹಾಗಾಗಿ ಮಿಲ್ಟ್ರಿ ಕಟಿಂಗ್ ಮಾಡಿಸಿಕೊಂಡು ಬಂದೇ ಕ್ಯಾಮೆರಾ ಮುಂದೆ ನಿಂತವರು. ಅದು ಪಾತ್ರವನ್ನು ಪ್ರೀತಿಸುವ ಪರಿ ಎನ್ನಬಹುದು. ಆದರೆ, ಚಿತ್ರ ಮುಗಿದು, ಈಗ ರಿಲೀಸ್‌ಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲೂ ಆ ಹೀರೋ ಅದೇ ರೀತಿ ಕಟಿಂಗ್ ಮಾಡಿಸಿಕೊಂಡು ಬಂದು ಥೇಟ್ ಪೊಲೀಸ್ ಅಧಿಕಾರಿಯ ಬಿಲ್ಡಪ್‌ನಲ್ಲೇ ಕುಳಿತಿದ್ದರು! ಆ ಹೀರೋ ಹೆಸರು ರಮೇಶ್ ಪಾಲ್ತ್ಯಾ. ಆ ಚಿತ್ರದ ಹೆಸರು “ಧರ್ಮಪುರ’.
ಅಂದು ತಂಡದ ಜತೆ ಮಾತಿಗೆ ಕುಳಿತಿದ್ದರು ನಿರ್ದೇಶಕ ಹೇಮಂತ್ ನಾಯ್ಕ. ಹೀರೋ ರಮೇಶ್ ಪಾಲö ಸ್ವಲ್ಪ ನರ್ವಸ್‌ನಂತೆ ಕಂಡುಬಂದರು. ನಿರೂಪಕ ಯತಿರಾಜ್ ಅವರ ಕೈಗೆ ಮೈಕ್ ಕೊಟ್ಟರು. ಒಂದು ನಿಮಿಷ ಮೈಕ್ ಹಿಡಿದೇ ಸುಮ್ಮನಿದ್ದರು. “ಮಾತಾಡಿ ಸರ್…’ ಅಂತ ಹಿಂದಿನಿಂದ ಯಾರೋ ಕೂಗಿದರು. ಅತ್ತಿತ್ತ ನೋಡಿದ ರಮೇಶ್ ಪಾಲö ಪುನಃ, ಗಂಟಲು ಸರಿ ಮಾಡಿಕೊಂಡು ಮಾತಿಗೆ ಮುಂದಾದರೂ, ಮಾತು ಹೊರ ಬರಲೇ ಇಲ್ಲ. ಅಲ್ಲೇ ಇದ್ದ ನಿರೂಪಕ ಯತಿರಾಜ್, “ಚಿತ್ರದಲ್ಲಿ ನಿಮ್ಮ ಪಾತ್ರವೇನು’ ಎಂಬ ಪ್ರಶ್ನೆ ಇಟ್ಟರು. ಅದಕ್ಕವರು “ನಾನು ಪೊಲೀಸ್ ಅಧಿಕಾರಿ’ ಅಂತ ಹೇಳಿ ಸುಮ್ಮನಾದರು. ಮಾತು ಮುಂದುವರೆಸುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಮತ್ತದೇ ಮೌನ. ಸರಿ ಇದ್ಯಾಕೋ ವಕೌìಟ್ ಆಗೋದಿಲ್ಲ ಅಂತ ಪತ್ರಕರ್ತರೇ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಾ ಹೋದರು. ಆಗ ಒಂದೊಂದಾಗಿಯೇ ಮಾತುಗಳನ್ನಾಡುತ್ತ ಹೋದರು ಅವರು. “ಸಿನ್ಮಾದಲ್ಲಿ ಪೊಲೀಸ್ ಅಧಿಕಾರಿ. ಇಲ್ಲಿ ಫೈಟ್ ಮಾಡಿದ್ದೇನೆ. ಒಂದೇ ಸಲ ಇಬ್ಬರು ನಾಯಕಿಯರನ್ನ ಪ್ರೀತಿಸುತ್ತೇನೆ. ನಿರ್ದೇಶಕರು ಕಥೆ, ಪಾತ್ರ ಹೇಳಿದಾಗ ನೆನಪಾದದ್ದು ದರ್ಶನ್. ಫೈಟ್‌ಗೆàನೂ ತರಬೇತಿ ಪಡೆದಿಲ್ಲ. ಆದರೆ, ಲವ್ ಟ್ರೇನಿಂಗ್ ಪಡೆದಿದ್ದೇನೆ’ ಅಂತ ಹೇಳಿ ಸುಮ್ಮನಾದರು. ಬಳ್ಳಾರಿಯಲ್ಲಿ ಅವರು ಕ್ರಷರ್ ಇಟ್ಟುಕೊಂಡು ಉದ್ಯಮ ನಡೆಸುತ್ತಿದ್ದಾರೆ. ಆದರೆ, ಅಂದು ಮಾತಿನ ಪ್ರಷರ್ ಇದ್ದುದರಿಂದ ಒಂದಷ್ಟು ಗಲಿಬಿಲಿಗೊಂಡಿದ್ದು ನಿಜ.
ನಿರ್ದೇಶಕ ಹೇಮಂತ್ ನಾಯ್ಕ ಅವರು ಈ ಹಿಂದೆ “ಗರಸ್ಯ’ ಎಂಬ ಬಂಜಾರ ಸಿನಿಮಾ ಮಾಡಿದ್ದರು. “ಧರ್ಮಪುರ’ ಚಿತ್ರಕ್ಕೆ ಮೊದಲು ಬೇರೆ ಶೀರ್ಷಿಕೆ ಇತ್ತಂತೆ. ಕೊನೆಗೆ ಆ ಹೆಸರು ಬೇರೆಯವರು ನೋಂದಾಯಿಸಿಕೊಂಡಿದ್ದರಿಂದ, ಇದೇ ಶೀರ್ಷಿಕೆ ಇರಲಿ ಅಂತ ಮಾಡಿದ್ದಾರೆ. “ದ್ವೇಷದಿಂದ ಪ್ರೀತಿ ಗೆಲ್ಲಬಹುದಾ, ಮನುಷ್ಯತ್ವದಿಂದ ಪ್ರೀತಿ ಗೆಲ್ಲಬಹುದಾ ಎಂಬ ಅಂಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಇಲ್ಲಿ ಹೊಸ ಪ್ರತಿಭೆಗಳು ಸೇರಿ ಕೆಲಸ ಮಾಡಿವೆ. ಕೂಡ್ಲಿಗಿ, ಹೊಸಪೇಟೆ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಇಡೀ ಚಿತ್ರದ ಸ್ಕ್ರಿಪ್ಟ್ ನನ್ನ ಮನೆಯಲ್ಲೇ ತಯಾರಾಗಿದ್ದಾಗಿ’ ಹೇಳಿಕೊಂಡರು ಅವರು.
ನಿರ್ಮಾಪಕಿ ಮಂಜುಳಾ ಧರಣೇಶ್ವರ್ ಅವರಿಗೆ ಇದು ಮೊದಲ ಚಿತ್ರ. ನಿರ್ದೇಶಕ ಹೇಮಂತ್ ಇವರ ಸಹೋದರ. ತಮ್ಮನ ಆಸೆಗೆ ಸಾಥ್ ನೀಡಿದ್ದಾಗಿ ಹೇಳಿಕೊಂಡರು ಅವರು. ನಾಯಕಿ ಅಮೃತ ವಿ.ರಾಜ್ ಅವರಿಗೆ ಇಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ಅದು ಸಂಪತ್ತಿಗೆ ಸವಾಲ್’ ಚಿತ್ರದ ಮಂಜುಳ ಅವರು ನಿರ್ವಹಿಸಿರುವ ಪಾತ್ರದಂತೆ ಇದೆ. ಇಲ್ಲಿ ಬುಲೆಟ್ ಕೂಡ ಓಡಿಸುವ ಹೆಣ್ಣಾಗಿ ಕಾಣಿಸಿಕೊಂಡಿದ್ದೇನೆ ಅಂದರು. ಇನ್ನೊಬ್ಬ ನಾಯಕಿ ರಾಣಿ ಪದ್ಮಜಾ ಚೌಹಾಣ್ ಅವರಿಗೆ ಕನ್ನಡದ ಮೊದಲ ಚಿತ್ರವಂತೆ ಇದು. ಅವರಿಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಇಲ್ಲಿ ಸಾಕಷ್ಟು ಅನುಭವ ಪಡೆದಿದ್ದಾಗಿ ಹೇಳಿಕೊಂಡರು. ಸಂತೋಷ್ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಲ್ಕು ಹಾಡು ಕೊಟ್ಟಿದ್ದಾರೆ. ಲಹರಿ ಆಡಿಯೋ ಸಂಸ್ಥೆ ಹಾಡುಗಳನ್ನು ಹೊರತಂದಿದೆ. ಅಂದು ಲಹರಿ ವೇಲು ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.