ತೆರೆಯ ಮೇಲೆ ಭಾವಗೀತೆ
Team Udayavani, Aug 11, 2017, 7:55 AM IST
ಹಿರಿಯ ವಯಸ್ಸಿನಲ್ಲಿ ನಟರಾದವರು ಹಲವು ಮಂದಿ ಸಿಗುತ್ತಾರೆ. ಆದರೆ, 73ರ ವಯಸ್ಸಿನಲ್ಲಿ ನಿರ್ದೇಶಕರಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸದು ಮತ್ತು ಅಂಥದ್ದೊಂದು ಸಾಹಸ ಮತ್ತು ದಾಖಲೆಯನ್ನು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಮಾಡುತ್ತಿದ್ದಾರೆ. ಅವರು “ಹಸಿರು ರಿಬ್ಬನ್’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದು, ಈಗಾಗಲೇ ಕಳೆದ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಚಿತ್ರ ಪ್ರಾರಂಭವಾಗಿದ್ದಾಗಿದೆ.
ಎಲ್ಲಾ ಬಿಟ್ಟು, ಈಗ್ಯಾಕೆ ಅವರಿಗೆ ನಿರ್ದೇಶಕರಾಗಬೇಕೆನ್ನಿಸಿತು ಎಂಬ ಪ್ರಶ್ನೆ ಸಹಜವೇ. ಹಾಗೆ ನೋಡಿದರೆ, ಕನ್ನಡ ಚಿತ್ರರಂಗ ಅವರಿಗೆ ಹೊಸದೇನಲ್ಲ, ಬರೀ ನಿರ್ದೇಶನವಷ್ಟೇ ಹೊಸದು. ಸುಮಾರು ಎರಡು ದಶಕಗಳ ಹಿಂದೆಯೇ “ಬಾಳೊಂದು ಭಾವಗೀತೆ’ ಎಂಬ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಗೀತಸಾಹಿತಿಯಾಗಿ ಬಂದರು. “ಸಿಂಹ ಮತ್ತು ಶ್ರೀನಾಥ್ ಇಬ್ಬರೂ ನನಗೆ ಬಹಳ ಆಪ್ತರು. ಒಂದು ಹಾಡು ಬರೆಯಬೇಕು ಅಂತ ಕರೆತಂದರು. ಅವರ ಒತ್ತಾಸೆಯಿಂದಾಗಿ ನಾನು ಚಿತ್ರರಂಗಕ್ಕೆ ಬಂದೆ. ಈ ರಂಗದಲ್ಲಿ ಪೂರ್ಣಪ್ರಮಾಣವಾಗಿ ತೊಡಗಿಸಿಕೊಂಡಿದ್ದು, “ಚಿನ್ನಾರಿ ಮುತ್ತ’ ಚಿತ್ರದ ಮೂಲಕ. ನಮ್ಮ ಅಶ್ವತ್ಥ್, ನಾಗಾಭರಣ ಮತ್ತು ದತ್ತಣ್ಣ ನೀವೇ ಬರೀಬೇಕು ಎಂದರು. ಒಂದೇನೆಂದರೆ, ಸಂಗೀತಕ್ಕಾಗಿ ಸಾಹಿತ್ಯ ಬರಿಯಲಿಲ್ಲ. ಬರೆದಿದ್ದಕ್ಕೆ ಸಂಗೀತ ಕೊಟ್ಟರು. ಆ ಚಿತ್ರವನ್ನು ಜನ ಚೆನ್ನಾಗಿ ಸ್ವೀಕರಿಸಿದರು.
ನಂತರ ಒಂದೊರ ಹಿಂದೊಂದು ಚಿತ್ರಗಳಿಗೆ ಕೆಲಸ ಮಾಡಿದೆ …’
ಆದರೆ, ನಿರ್ದೇಶನ ಮಾಡಬೇಕೆಂಬ ಯೋಚನೆ ಸುಮಾರು ಎರಡು ವರ್ಷಗಳ ಹಿಂದೆ ಬಂತಂತೆ ಮತ್ತು ಅಂಥದ್ದೊಂದು ಐಡಿಯಾ ಕೊಟ್ಟವರು ನಟ-ನಿರ್ದೇಶಕ ನಿಖೀಲ್ ಮಂಜು. “ಎಚ್.ಎಸ್.ವಿ ಅವರಿಗೂ ಕನ್ನಡ ಚಿತ್ರರಂಗಕ್ಕೂ ಸುಮಾರು ಎರಡು ದಶಕಗಳ ಸಂಬಂಧವಂತೆ. ಆದರೆ, ಇದೇ ಮೊದಲ ಬಾರಿಗೆ ಅವರು ನಿರ್ದೇಶನಕ್ಕಿಳಿದಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ “ಒಂದೂರಲ್ಲಿ’ ಎಂಬ ಚಿತ್ರಕ್ಕೆ ಸಾಹಿತ್ಯ ಬರೆಯುವ ಸಂದರ್ಭದಲ್ಲಿ, ನಿಖೀಲ್ ಮಂಜು ಅವರು ನಿರ್ದೇಶನ ಮಾಡುವುದಕ್ಕೆ ಒತ್ತಾಯ ಮಾಡಿದರು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಹೊಣೆಯೂ ನನ್ನದೇ’ ಎನ್ನುತ್ತಾರೆ ಎಚ್.ಎಸ್.ವಿ.
ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ವರ್ಷ ಕೃಷಿ ಮಾಡಿದ್ದವರು. ಈಗ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಸಹಜವಾಗಿಯೇ ಅವರು ಚಿತ್ರ ಹೇಗೆ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.
ವೆಂಕಟೇಶಮೂರ್ತಿ ಅವರ ಪ್ರಕಾರ ಒಂದು ಚಿತ್ರ ಹೇಗಿರಬೇಕು? 10 ಜನರ ಕಣ್ಣಲ್ಲಿ ನೀರು ಬರುವಂತಿರಬೇಕು ಎನ್ನುತ್ತಾರೆ ಅವರು. “ನನ್ನ ಪ್ರಕಾರ ಒಂದು ಚಿತ್ರ ನೋಡಿದರೆ, ಅದು ಜನರ ಮನಸ್ಸಿನಲ್ಲಿ ಉಳಿಯುವಂತಿರಬೇಕು. 10 ಜನರ ಕಣ್ಣಲ್ಲಾದರೂ ನೀರು ಬರಬೇಕು, ಹೃದಯ ತುಂಬಬೇಕು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಚಿತ್ರ ನೋಡಿದವರಿಗೆ ಬದುಕಿಗೊಂದು ಅರ್ಥ ಇದೆ ಎಂದು ಗೊತ್ತಾಗಬೇಕು. ಅದರಿಂದ ನಮ್ಮ ಜ್ಞಾನ ಹೆಚ್ಚುವುದರ ಜೊತೆಗೆ, ಹೊಸದೇನೋ ಅವರಲ್ಲಿ ಸೇರಬೇಕು. ಆಗ ಒಂದು ಚಿತ್ರ ಮಾಡಿದ್ದೂ ಸಾರ್ಥಕವಾಗುತ್ತದೆ’ ಎಂಬುದು ವೆಂಕಟೇಶಮೂರ್ತಿ ಅವರ ಅಭಿಪ್ರಾಯ.
“ಹಸಿರು ರಿಬ್ಬನ್’ ಚಿತ್ರದಲ್ಲಿ ಸಮಾಜದಲ್ಲಿ ಅಮಾಯಕ ಹೆಣ್ಮಕ್ಕಳನ್ನು ಹೇಗೆ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. “ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ ಮತ್ತು ಪ್ರತಿನಾಯಕ ಅಂತಿರುತ್ತಾರೆ. ಒಬ್ಬ ಒಳ್ಳೆಯದಕ್ಕೆ ಸಂಕೇತವಾದರೆ, ಇನ್ನೊಬ್ಬ ಕೆಟ್ಟದಕ್ಕೆ ಸಂಕೇತ. ನನ್ನ ಪ್ರಕಾರ, ಯಾರೂ ಒಳ್ಳೆಯವರಲ್ಲ. ಹಾಗೆಯೇ ಕೆಟ್ಟವರೂ ಆಗಿರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಯಿಸಬೇಕಾಗುತ್ತದೆ. ಈ ಚಿತ್ರದಲ್ಲಿ ವ್ಯಕ್ತಿ ಮತ್ತು ಸಮಾಜವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀನಿ. ಇಲ್ಲಿ ಭಾಷೆಯನ್ನು ಸರಳವಾಗಿ ಮತ್ತು ಚೆನ್ನಾಗಿ ಬಳಸಿಕೊಳ್ಳುವ ಯೋಚನೆ ಇದೆ. ಈ ಹಿಂದೆ ಕವಿತೆಗಳಲ್ಲಿ ಏನು ಮಾಡಿದ್ದೆನೋ, ಅದನ್ನೇ ಈಗ ದೃಶ್ಯ ಮಾಧ್ಯಮದಲ್ಲಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಇಲ್ಲಿ ಭಾಷಾ ಸೂಕ್ಷ್ಮತೆ, ಸಂಬಂಧಗಳ ಸೂಕ್ಷ್ಮತೆ ಮತ್ತು ಅನುಭವಗಳ ಸೂಕ್ಷ್ಮತೆ ಇರುತ್ತದೆ’ ಎನ್ನುತ್ತಾರೆ ಎಚ್.ಎಸ್. ವೆಂಕಟೇಶಮೂರ್ತಿ.
“ಹಸಿರು ರಿಬ್ಬನ್’ ಚಿತ್ರಕ್ಕೆ ಉಪಾಸನಾ ಮೋಹನ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಮಾಡಿದರೆ, ಶ್ರೀಧರ್ ಹೆಗಡೆ ಅವರ ಸಂಕಲನವಿದೆ. ಚಿತ್ರದಲ್ಲಿ ನಿಖೀಲ್ ಮಂಜು, ಗಿರಿಜಾ ಲೋಕೇಶ್ ಮುಂತಾದವರು ಅಭಿನಯಿಸುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಎಚ್.ಎಸ್.ವಿ. ಚಿತ್ರವನ್ನು ಎರಡು ಹಂತಗಳಲ್ಲಿ ಕನಕಪುರ ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಅವರಿಗಿದೆ. ಅಕ್ಟೋಬರ್ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ದೇಶಕರಾಗದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಟಿ.ಎಸ್. ನಾಗಾಭರಣ, ಹಂಸಲೇಖ, ಶ್ರೀನಾಥ್, ದತ್ತಣ್ಣ, ಬಿ. ಜಯಶ್ರೀ, ಜೋಗಿ ಸೇರಿದಂತೆ ಹಲವು ಭಾಗವಹಿಸಿದ್ದರು.
– ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.