ಲೋಕಲ್ ಹಾಡುಗಳಿಗೆ ಪವರ್ ಟಚ್
ಮದರಂಗಿ ಕೃಷ್ಣ ಹಳೇ ಪ್ರಾಜೆಕ್ಟ್
Team Udayavani, Jan 31, 2020, 5:42 AM IST
ಪ್ರೀತಿ ಎನ್ನುವುದು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಶುರುವಾಗಬಹುದು. ಪ್ರೀತಿ ಹುಟ್ಟಲು ಸಮಯ, ಸ್ಥಳ, ಹೊತ್ತು-ಗೊತ್ತು ಯಾವುದೂ ಇರುವುದಿಲ್ಲ. ಹಾಗೇ ಪ್ರೀತಿ ಅನ್ನೋದು ಬಸ್ಸು, ಕಾರು, ಟ್ರೈನು, ಫ್ಲೈಟಿನಲ್ಲೂ ಕೂಡ ಹುಟ್ಟಬಹುದು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಚಿತ್ರತಂಡ ಟ್ರೈನ್‌ನಲ್ಲಿ ಶುರುವಾದ ಪ್ರೇಮಕಥೆಯನ್ನು ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ ಆ ಚಿತ್ರದ ಹೆಸರು “ಲೋಕಲ್ ಟ್ರೈನ್’.
ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬರುವ ಟ್ರೈನ್ ಒಂದರಲ್ಲಿ ಶುರುವಾದ ಲವ್ ಸ್ಟೋರಿ ಮತ್ತು “ಲೋಕಲ್ ಟ್ರೈನ್’ ಸುತ್ತ ಈ ಚಿತ್ರದ ಕಥೆ ನಡೆಯಲಿದೆ. ಹಾಗಾಗಿ ಚಿತ್ರಕ್ಕೆ “ಲೋಕಲ್ ಟ್ರೈನ್’ ಎಂದು ಟೈಟಲ್ ಇಡಲಾಗಿದೆ ಎನ್ನುತ್ತದೆ ಚಿತ್ರತಂಡ. “ಲೋಕಲ್ ಟ್ರೈನ್’ ಚಿತ್ರದಲ್ಲಿ ಮದರಂಗಿ ಕೃಷ್ಣ ನಾಯಕನಾಗಿ ಕಾಣಿಸಿ ಕೊಂಡಿದ್ದು, ಎಸ್ತಾರ್ ನರೋನಾ, ಮೀನಾ ದೀಕ್ಷಿತ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಖಳನಾಯಕನಾಗಿ ಭಜರಂಗಿ ಲೋಕಿ, ಕಾಮಿಡಿ ಕಮಾಲ್ ಮಾಡಲು ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಸೆಂಟಿಮೆಂಟ್‌ಗಾಗಿ ಸುಚೇಂದ್ರಪ್ರಸಾದ್, ಗುರುದತ್ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರುದ್ರಮುನಿ ವೈ.ಎನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ಶುರುವಾದ ಈ ಚಿತ್ರ, ಕೆಲವು ತಾಂತ್ರಿಕ ಕಾರಣಗಳಿಂದ ತೆರೆಗೆ ಬರಲು ವಿಳಂಬವಾಗಿದ್ದು, ಇದೇ ಫೆಬ್ರವರಿ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಲೋಕಲ್ ಟ್ರೈನ್’ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿತು. ನಟ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಲೋಕಲ್ ಟ್ರೈನ್’ ಹಾಡುಗಳನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಟ್ರೈನ್ ಒಂದರಲ್ಲಿ ಶುರುವಾಗಿ, ಅದರ ಸುತ್ತ ನಡೆಯುವ ಪ್ರೇಮಕಥೆಯೇ ಈ ಚಿತ್ರದ ಹೈಲೈಟ್. ಹಳ್ಳಿಯೊಂದರಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೆçನ್‌ನಲ್ಲಿ ಪ್ರತಿದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಇದೇ ವೇಳೆ ಟ್ರೈನ್‌ನಲ್ಲಿ ಹುಟ್ಟುವ ನವಿರಾದ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಇದನ್ನೆ ಆಧಾರವಾಗಿಟ್ಟುಕೊಂಡು, ಅದರಲ್ಲಿ ಬರುವ ಹಲವು ಸನ್ನಿವೇಶಗೊಂದಿಗೆ ಚಿತ್ರವನ್ನು ತೆರೆಗೆ ತಂದಿದ್ದೇವೆ’ ಎಂದು ವಿವರಣೆ ನೀಡುತ್ತದೆ.
ಚಿತ್ರದ ಐದು ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಹಿರಿಯ ನೃತ್ಯ ನಿರ್ದೇಶಕರಾದ ಚಿನ್ನಿಪ್ರಕಾಶ್, ರಾಜುಸುಂದರ್ ಮತ್ತು ಗಣೇಶ್ ಈ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಪೈಕಿ ಒಂದು ಹಾಡಿನಲ್ಲಿ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಲಾವಿದರು ಹೆಜ್ಜೆ ಹಾಕಿದ್ದು, ಅದ್ದೂರಿ ಏಳು ಸೆಟ್‌ಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ.
ಇನ್ನು “ಲೋಕಲ್ ಟ್ರೈನ್’ ಚಿತ್ರಕ್ಕೆ ರಮೇಶ ಬಾಬು ಛಾಯಾಗ್ರಹಣ, ಕೆ.ಎಂ ಸೌಂದರ್ ರಾಜು ಸಂಕಲನ ಕಾರ್ಯವಿದೆ. ಈಶ್ವರಿ ಕುಮಾರ್ ಕಲೆ, ಮಾಸ್‌ಮಾದ ಸಾಹಸ ನಿರ್ದೇಶನವಿದೆ. ಕುಮುಟದ ಸುಬ್ರಾಯ ವಾಳ್ಕೆ “ಸಂಜನಾ ಸಿನಿ ಆರ್ಟ್ಸ್’ ಬ್ಯಾನರ್‌ನಲ್ಲಿ ಸುಬ್ರಾಯ ವಾಳ್ಕೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಹಾಡುಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ “ಲೋಕಲ್ ಟ್ರೈನ್’ ಜರ್ನಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಹಿತಾನುಭವ ಕೊಡುತ್ತದೆ ಅನ್ನೋದು ಫೆಬ್ರವರಿ ಕೊನೆಗೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.