ಮಾಫಿಯಾ ಖರ್ಚಲ್ಲಿ ಹುಡುಗ ಹುಡುಗಿ ಮತ್ತು ಜೀವನ!


Team Udayavani, Jan 27, 2017, 3:45 AM IST

mafia.jpg

ಐದಾರು ವರ್ಷಗಳ ಹಿಂದೆ “ದಿಲ್ದಾರ್‌’ ಎಂಬ ಸಿನಿಮಾ ಬಂದಿದ್ದು ನಿಮಗೆ ನೆನಪಿರಬಹುದು. ಆ ಚಿತ್ರದ ನಿರ್ದೇಶಕ ಅಮರ್‌ ಈಗ “ನಾನು ನಮ್‌ ಹುಡ್ಗಿ ಖರ್ಚಿಗೊಂದು ಮಾಫಿಯಾ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಅಕ್ಷರಾ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿದೆ. ಈಗಾಗಲೇ ಆಡಿಯೋ ಬಿಡುಗಡೆಯಾಗಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

“ನಾನು ನಮ್‌ ಹುಡ್ಗಿ ಖರ್ಚಿಗೊಂದು ಮಾಫಿಯಾ’ ಲವ್‌ ಕಂ ಆ್ಯಕ್ಷನ್‌ ಸಬೆjಕ್ಟ್. ಹಾಗಂತ ಗಾಂಧಿನಗರದ ಸಿದ್ಧಸೂತ್ರಗಳ ಸುತ್ತ ಸುತ್ತುವ ಸಿನಿಮಾವಂತೂ ಅಲ್ಲವೇ ಅಲ್ಲ ಎಂದು ವಿಶ್ವಾಸದಿಂದ ಹೇಳುವ ಅಮರ್‌ಗೆ ಈ ಸಿನಿಮಾ ಕೂಡಾ ಒಂದು ಹೊಸ ಪ್ರಯತ್ನವಾಗಿ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವಿದೆ. “ಇಲ್ಲಿ ಪ್ರತಿ ಅಂಶಗಳಿಗೂ ಸಂಬಂಧವಿದೆ. ಒಂದಕ್ಕೊಂದು ಲಿಂಕ್‌ನೊಂದಿಗೆ ಸಾಗುವ ಈ ಸಿನಿಮಾದಲ್ಲಿ ಹಲವು ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಹುಡುಗಿ ಅಂದರೆ ಪ್ರೀತಿ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಹುಡುಗಿ ಬಂದು ಹೋಗಿರುತ್ತಾಳೆ. ಇನ್ನು ಮಾಫಿಯಾ ಅನ್ನೋದನ್ನು ನಾಯಕನ ಕೆಲಸ ಎನ್ನಬಹುದು. ಯಾವುದೇ ಒಂದು ಕೆಲಸದ ಹಿಂದೆ ಗೊತ್ತಿಧ್ದೋ ಗೊತ್ತಿಲ್ಲದೆಯೋ ಒಂದು ಮಾಫಿಯಾ ಇರುತ್ತದೆ. ಕೆಲವರು ಶ್ರೀಮಂತರಾಗಲು, ಕೈ ತುಂಬಾ ಕಾಸು ಮಾಡಲು ದೊಡ್ಡ ದೊಡ್ಡ ಮಾಫಿಯಾಗೆ ಕೈ ಹಾಕಿದರೆ, ಇನ್ನು ಕೆಲವರು ಖರ್ಚಿಗಾಗಿ, ತಮ್ಮ ಜೀವನ ನಡೆಸಲು ಮಾಫಿಯಾ ಮಾಡುತ್ತಾರೆ.

ಎಲ್ಲವೂ ಕಾನೂನು ಪ್ರಕಾರ, ನೀಟಾಗಿ ನಡೆಯುತ್ತಿದೆ ಎಂದು ನಾವಂದುಕೊಂಡರೂ ಅದರ ಹಿಂದೆ ನಮಗೆ ಗೊತ್ತಿಲ್ಲದ ಒಂದು ಮಾಫಿಯಾ ಇರುತ್ತದೆ. ಈ ವಿಷಯ ಕೂಡಾ ಕಥೆಗೆ ಲಿಂಕ್‌ ಆಗುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಇದು ರಿಯಲಿಸ್ಟಿಕ್‌ ಸಿನಿಮಾ. ಇಲ್ಲಿ ನೈಜತೆಗೆ ಹೆಚ್ಚು ಒತ್ತುಕೊಟ್ಟಿದ್ದೇನೆ. ಸಿನಿಮಾ ನೋಡುತ್ತಿದ್ದಾಗ ನಮ್ಮ ಕಥೆಯೇ ತೆರೆಮೇಲೆ ಬರುತ್ತಿದೆಯಾ ಎಂಬ ಭಾವನೆ ಪ್ರೇಕ್ಷಕರಿಗೆ ಬರುತ್ತದೆ. ಕಮರ್ಷಿಯಲ್‌ ಸಿನಿಮಾ ಎಂಬ ಕಾರಣಕ್ಕೆ ಬಿಲ್ಡಪ್‌ ಆಗಲಿ, ಅನಾವಶ್ಯಕ ದೃಶ್ಯಗಳನ್ನು ಸೇರಿಸಿಲ್ಲ. ನನಗೆ ತುಂಬಾ ಖುಷಿಕೊಟ್ಟ ಸಿನಿಮಾವಿದು’ ಎನ್ನುವ ಅಮರ್‌, ಚಿತ್ರದ ಮೂಲಕ ಸಮಾಜಕ್ಕೊಂದು ಮೆಸೇಜ್‌ ಕೊಡುವ ಪ್ರಯತ್ನ ಮಾಡಿದ್ದಾರಂತೆ. 

ಈ ಚಿತ್ರದ ಮೂಲಕ ಶ್ಯಾಮ್‌ ಸುಂದರ್‌ ಹೀರೋ ಆದರೆ, ಶ್ರದ್ಧಾ ಬೆಣಗಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇನ್ನು ಅಮರ್‌ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕುಮಾರ್‌ ಅವರ ಛಾಯಾಗ್ರಹಣವಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಜೊತೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ವಿಕ್ರಮ್‌ ವರ್ಮನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಮಾಸ್ಟರಿಂಗ್‌ ಕೆಲಸವನ್ನು ಕ್ಯಾಲಿಫೋರ್ನಿಯಾದಲ್ಲಿ ಮಾಡಿರುವುದು ವಿಶೇಷ. ಚಿತ್ರದಲ್ಲಿ ಕನ್ನಡ ರ್ಯಾಪ್‌, ಮೆಲೋಡಿ, ಸ್ಲೋ ಮೆಲೋಡಿ, ಡ್ಯುಯೆಟ್‌ ಹಾಗೂ ಒಂದು ಐಟಂ ನಂಬರ್‌ ಇದ್ದು, ಎಲ್ಲವೂ ಹೊಸತನದಿಂದ ಕೂಡಿದೆ.

ಟಾಪ್ ನ್ಯೂಸ್

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

siddaramaiah

MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.