ಮಂಜನ ಮಾತಿನ ಮಾಂಜ!


Team Udayavani, Feb 10, 2017, 3:45 AM IST

jaggesh.jpg

“ನಮ್‌ ಮಾಲೂರು ಶ್ರೀನಿವಾಸ್‌ ಫೋನ್‌ ಮಾಡಿ ಹೇಳದೇ ಇದ್ದರೆ ಗೊತ್ತೇ ಆಗುತ್ತಿರಲಿಲ್ಲ …’
ಎಂದು ಜೋರುಧ್ವನಿಯಲ್ಲಿ ಹೇಳಿದರು ಜಗ್ಗೇಶ್‌. ಕಣ್ಣು ಇಷ್ಟಗಲ ಆಗಿತ್ತು. ಮುಖದಲ್ಲಿ ಆಶ್ಚರ್ಯ ಕುಣಿದಾಡುತಿತ್ತು. ಸ್ವಲ್ಪ ಸಿಟ್ಟೂ ಸೇರಿಕೊಂಡಿತ್ತು. ಇಷ್ಟೆಲ್ಲಾ ಆಗೋಕೆ, ಮಾಲೂರು ಶ್ರೀನಿವಾಸ್‌ ಏನು ಹೇಳಿದರು ಎಂಬ ಪ್ರಶ್ನೆ ಬರೋದು ಸಹಜ. ಮಾಲೂರು ಶ್ರೀನಿವಾಸ್‌ ಫೋನ್‌ ಮಾಡಿ, “ನಿಮಗೆ ಅಡ್ವಾನ್ಸ್‌ ಬಂತಾ’ ಎಂದರಂತೆ. ಜಗ್ಗೇಶ್‌ ಶಾಕ್‌ ಆಗಿದ್ದು ಆಗಲೇ …

“ಒಂದಿಷ್ಟು ತಂತ್ರಜ್ಞರು ಒಬ್ಬರನ್ನು ಕರೆದುಕೊಂಡು ಬಂದು ಸಿನಿಮಾ ಮಾಡೋಣ ಎಂದರು. ಒಂದೊಳ್ಳೆಯ ಕಥೆ ಇದ್ದರೆ ಖಂಡಿತಾ ಮಾಡೋಣ ಅಂದೆ. ಅವರು ನೋಡಿದರೆ, ಅಡ್ವಾನ್ಸ್‌ ಕೊಡಬೇಕು ಎಂದು ಹೇಳಿ ಈ ಮನುಷ್ಯನ ಸೈಟು ಮಾರಿಸಿದ್ದಾರೆ. ಆದರೆ, ಯಾರಿಗೂ ಅಡ್ವಾನ್ಸ್‌ ಕೊಟ್ಟಿಲ್ಲ. ಲೆಕ್ಕ ಕೇಳಿದರೆ ಮಾಯ. ಅವರು ನಮ್ಮನೆಗೆ ಬಂದಾಗ ಅವರೇ ನಿರ್ಮಾಪಕರು ಅನ್ನೋ ಲೆವೆಲ್‌ಗೆ ಮಾತಾಡಿದರು. ನನ್ನನ್ನ ದೂರಾನೇ ಇಟ್ಟಿದ್ದರು. ನನಗೂ ನಿರ್ಮಾಪಕ ಕೃಷ್ಣ ಅವರಿಗೆ ಮೋಸ ಹೋಗಿದ್ದು ಗೊತ್ತಿರಲಿಲ್ಲ. ಕೊನೆಗೆ ನಮ್‌ ಮಾಲೂರು ಶ್ರೀನಿವಾಸ್‌ ಫೋನ್‌ ಮಾಡಿ ಹೇಳಿದಾಗಲೇ ಗೊತ್ತಾಗಿದ್ದು, ಏನೇನೋ ಅವಾಂತರ ಆಗಿದೆ ಅಂತ. ಕೃಷ್ಣ ಅವರನ್ನ ನೋಡಿ ಬೇಸರ ಆಯ್ತು. ಅವರು ನನ್ನ ಅಭಿಮಾನಿಯಂತೆ. ನನ್ನ ಸಿನಿಮಾ ಮಾಡೋಕೆ ಬಂದು ಹೀಗಾಗಿದ್ದರಿಂದ, ನಾನೇ ಸಿನಿಮಾ ಮಾಡಿಕೊಟ್ಟೆ’ ಎನ್ನುತ್ತಾರೆ ಜಗ್ಗೇಶ್‌.

ಹಾಗೆ ಮಾಡಿದ “ಮೇಲುಕೋಟೆ ಮಂಜ’, ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್‌ ಹೀರೋ ಅಷ್ಟೇ ಅಲ್ಲ, ಬರವಣಿಗೆ ಮತ್ತು ನಿರ್ದೇಶನ ಸಹ ಅವರದ್ದೇ. ಕಾರಣಾಂತರಗಳಿಂದ ಚಿತ್ರ ತಡವಾಗಿತ್ತು. ಈಗ ಫೈನಲಿ, ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಸಂತೋಷದ ಜೊತೆಗೆ ಟೋಪಿ ಗಿರಾಕಿಗಳ ಬಗ್ಗೆ ಬೇಸರವೂ ಇದೆ ಜಗ್ಗೇಶ್‌ ಅವರಿಗೆ. “ನಿಜ ಹೇಳ್ತೀನಿ. ಯಾರಾದ್ರೂ ಸಿನಿಮಾ ಮಾಡ್ತೀನಿ ಅಂದರೆ, ನಾನು ಬೇಡ ಅಂತೀನಿ.

ಏಕೆಂದರೆ, ನನ್ನ ಸ್ನೇಹಿತರನ್ನು ಅಡ್ಡದಾರಿಗೆ ಎಳೆಯೋಕೆ ನನಗೆ ಇಷ್ಟ ಇಲ್ಲ. ನಾನು ಈಗ ಹೂಂ ಅಂದರೆ, 25 ಸಿನಿಮಾ ಅನೌನ್ಸ್‌ ಮಾಡಬಹುದು. ಅಂತಹ ಸ್ನೇಹಿತರಿದ್ದಾರೆ. ದುಡ್ಡು ಕಸ ಅವರಿಗೆ. ನಿಮಗಾಗಿ ಸಿನಿಮಾ ಮಾಡುತ್ತೀವಿ ಅಂತಾರೆ. ನನಗೇ ಇಷ್ಟ ಇಲ್ಲ. ಏಕೆಂದರೆ, ಚಿತ್ರರಂಗದಲ್ಲಿ ವಾಮಮಾರ್ಗ ಜಾಸ್ತಿ ಆಗಿ, ನಂಬಿಕೆ ಕಡಿಮೆಯಾಗುತ್ತಿದೆ. ಯಾಮಾರಿಸೋಕೆ ಜನ ಕಾಯ್ತಿರ್ತಾರೆ. ಬುದ್ಧಿ ಹೇಳ್ಳೋಕೆ ಹೋದರೆ, ನನ್ನನ್ನೇ ಕೆಟ್ಟವನನ್ನಾಗಿ ಮಾಡ್ತಾರೆ. ನನ್ನನ್ನೇ ದೂರ ಇಟ್ಟು ಬಿಡುತ್ತಾರೆ. 

ನಾನು ಸುಮ್ಮನಾಗಿಬಿಟ್ಟಿದ್ದೀನಿ. ಕೆಣಕಿದರೆ ಸೀದಾ ರೋಡಿಗೆ ಬಿಡ್ತೀನಿ. ಬಟ್‌ ನನಗ್ಯಾಕೆ ಅನಿಸುತ್ತೆ. ಹಾಗಾಗಿ ಸುಮ್ಮನಿದ್ದುಬಿಟ್ಟಿದ್ದೀನಿ …’

ಜಗ್ಗೇಶ್‌ರಂತಹ ಸೀನಿಯರ್‌ ನಟರೇ, ನನಗ್ಯಾಕೆ ಅಂತ ಇದ್ದು ಬಿಟ್ಟರೆ, ಎಷ್ಟೋ ಜನ ಮೋಸ ಹೋಗುತ್ತಾರಲ್ಲಾ? ಇದು ಜಗ್ಗೇಶ್‌ ಅವರಿಗೂ ಗೊತ್ತಿದೆ. ಆದರೂ ಸುಮ್ಮನಿದ್ದಾರಂತೆ. ಕಾರಣ ಅವಮಾನ. “ಸಿನಿಮಾ ಮತ್ತು ರಾಜಕೀಯದಲ್ಲಿ ಸಾಕಷ್ಟು ಅವಮಾನವನ್ನ ನೋಡಿಬಿಟ್ಟಿದ್ದೀನಿ ನಾನು. ಸುಮ್ಮನೆ ವಿವಾದ ಮೇಲೆ ಎಳೆದುಕೊಳ್ಳೋಕ್ಕಿಂತ ಆರಾಮಾಗಿರೋಣ ಅಂತ ಅನಿಸುತ್ತೆ. ಪರಿಸ್ಥಿತಿ ಮುಂಚಿನಂತಿಲ್ಲ. ಸಾಕಷ್ಟು ಬದಲಾಗಿದೆ. ನಾನು ನೋಡಿದ ಚಿತ್ರರಂಗ ಬೇರೆ, ಈಗಿನ ಚಿತ್ರರಂಗ ಬೇರೆ. ನಮಗೆ ಹೊಂದಾಣಿಕೆ ಆಗಲ್ಲ. ಅದೇ ಕಾರಣಕ್ಕೆ ಯಾರ ಸಹವಾಸ ಬೇಡ ಅಂತ ಸುಮ್ಮನಿದ್ದುಬಿಟ್ಟಿದ್ದೀನಿ. ನಮ್ಮದೇ ಏನೋ ಕೆಲಸ ಇರತ್ತೆ ಮಾಡಿಕೊಂಡಿರಿ¤àನಿ. ಮೈಸೂರಿನಲ್ಲಿ ಮೊನ್ನೆ ಚೌಲಿó ಕಟ್ಟಿದೆ. ಮುಂದೆ ತುಮಕೂರಿನಲ್ಲಿ ಪ್ಲಾನ್‌ ಮಾಡ್ತಿದ್ದೀನಿ. ಇನ್ನೂ ನಾಲ್ಕಾರು ಊರುಗಳಲ್ಲಿ ಮಾಡೋ ಯೋಜನೆ ಇದೆ’ ಎನ್ನುತ್ತಾರೆ ಜಗ್ಗೇಶ್‌.

ಹಾಗಾದರೆ, ಅವರು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳೋದು ಕಡಿಮೆ ಮಾಡುತ್ತಾರಾ? ಖಂಡಿತಾ ಇಲ್ಲ ಎನ್ನುವ ಉತ್ತರ ಅವರಿಂದ ಬರುತ್ತದೆ. “ಸಿನಿಮಾ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಇವತ್ತೂ ನಾನೇನಿದ್ದೀನಿ ಅದು ಸಿನಿಮಾದಿಂದಲೇ. ಅದೇ ಕಾರಣಕ್ಕೆ ಈಗಲೂ ವಕೌìಟ್‌ ಮಾಡಿಕೊಂಡು, ಒಳ್ಳೆಯ ಕಥೆಗೆ ಕಾಯುತ್ತಿದ್ದೀನಿ. ಮುಖ್ಯವಾಗಿ ಇವತ್ತು ಒಳ್ಳೆಯ ಬಿಝಿನೆಸ್‌ ಆಗುತ್ತಿದೆ. “ಕಿರಿಕ್‌ ಪಾರ್ಟಿ’ 22 ಕೋಟಿ ಬಿಝಿನೆಸ್‌ ಮಾಡಿದೆ ಅಂದರೆ, ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಆದರೆ, ನಮ್ಮಲ್ಲಿ ನೂರು ಸಮಸ್ಯೆಗಳು. ನಮ್ಮಲ್ಲಿ ಪ್ರಮುಖವಾಗಿ ಒಗ್ಗಟ್ಟಿಲ್ಲ. ಏಳೆಂಟು ನಿರ್ಮಾಪಕರು, ನಮಗೆ ಐದು ಹೀರೋಗಳು ಸಾಕು ಅಂತ ಫಿಕ್ಸ್‌ ಆಗಿಬಿಟ್ಟಿದ್ದಾರೆ. ಮಿಕ್ಕವರಿಗೆ ಎ,ಬಿ,ಸಿ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು’ ಎನ್ನುವುದು ಅವರ ಪ್ರಶ್ನೆ.

ಸರಿ ಸಿನಿಮಾ ಮಧ್ಯೆ ರಾಜಕೀಯ ಬಿಟ್ಟೇ ಹೋಯಿತಾ ಎನ್ನುವ ಪ್ರಶ್ನೆ ಬಂತು. ಅವರನ್ನು ಕಾರ್ಯಕಾರಿಣಿಗೆ ತೆಗೆದುಕೊಳ್ಳಲಾಗಿದೆಯಂತೆ. “ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಇನ್ನು ಈ ಬಾರಿ ಚುನಾವಣೆಗೆ ಸ್ಪರ್ಧಿಸು ಅಂತಲೂ ಹೇಳ್ತಿದ್ದಾರೆ. ಬೆಂಗಳೂರಲ್ಲಿ ನಿಂತರೆ ಹೇಗೆ ಅಂತ ಯೋಚಿಸುತ್ತಿದ್ದೀನಿ. ಹಳ್ಳಿàಲಿ ನಿಂತರೆ ತುಂಬಾ ಕಷ್ಟ. ಅಲ್ಲಿ ಫ‌ುಲ್‌ ಡ್ನೂಟಿ ಮಾಡಬೇಕಾಗುತ್ತೆ. ಸಾವು, ಮದುವೆ ಯಾವುದನ್ನೂ ಮಿಸ್‌ ಮಾಡುವ ಹಾಗಿಲ್ಲ. ಆ ಕಡೆ ಹೆಚ್ಚು ತೊಡಗಿಸಿಕೊಂಡರೆ, ಸಿನಿಮಾ ಬಿಡಬೇಕಾಗುತ್ತೆ. ಆಗ 10 ವರ್ಷ ಇದೇ ಕಾರಣಕ್ಕೆ ಲಾಸ್‌ ಆಯ್ತು. ಹಾಗಾಗಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದೆ ನೋಡೋಣ’ ಎನ್ನುತ್ತಾರೆ ಜಗ್ಗೇಶ್‌.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.