ತಪ್ಪಾದರೆ ಕ್ಷಮಿಸಿಬಿಡಿ
ಹಳೆಯ ಪ್ರೀತಿ ಹೊಸ ರೀತಿ
Team Udayavani, Aug 23, 2019, 5:00 AM IST
ಅವನು ಬಡತನದ ಕುಟುಂಬದಿಂದ ಬಂದ ಹುಡುಗ. ಇವಳು ಶ್ರೀಮಂತ ಮನೆತನದಲ್ಲಿ ಬೆಳೆದ ಹುಡುಗಿ. ಆದರೆ ಪ್ರೀತಿ ಎಂಬ ಮಾಯೆ ಒಬ್ಬರನ್ನೊಬ್ಬರು ಬೆಸೆಯುವಂತೆ ಮಾಡುತ್ತದೆ. ಮುಂದೆ ಇಬ್ಬರ ಪ್ರೀತಿಗೂ ಹೆತ್ತವರ ವಿರೋಧ. ಕೊನೆಗೆ ಏನಾಗುತ್ತದೆ ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್. ಕನ್ನಡದಲ್ಲಿ ಇದೇ ಒಂದೆಳೆಯನ್ನ ಇಟ್ಟುಕೊಂಡು ನೂರಾರು ಚಿತ್ರಗಳು ಬಂದು ಹೋಗಿವೆ. ಈಗ ಇದೇ ಎಳೆಯನ್ನು ಇಟ್ಟುಕೊಂಡು ಮತ್ತೂಂದು ಚಿತ್ರ ಬರುತ್ತಿದೆ. ಅದರ ಹೆಸರು ‘ಮರೆಯದೆ ಕ್ಷಮಿಸು’.
ಇತ್ತೀಚೆಗೆ ಈ ಚಿತ್ರ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ. ಇದೇ ವೇಳೆ ಮಾತಿಗೆ ಸಿಕ್ಕ ಚಿತ್ರತಂಡ, ‘ಈಗಾಗಲೇ ಹಲವು ಚಿತ್ರಗಳಲ್ಲಿ ಬಂದಿರುವ ಲವ್‌ಸ್ಟೋರಿಯ ಒಂದೆಳೆ ಈ ಚಿತ್ರದಲ್ಲೂ ಇದೇ ಅಂತ ಮೇಲ್ನೋಟಕ್ಕೆ ಕಂಡರೂ, ಚಿತ್ರದ ಒಳಗೆ ಬೇರೆಯದೇ ಕಥೆ ಇದೆ. ಯಾರೂ ನಿರೀಕ್ಷಿಸದ ಕ್ಲೈಮ್ಯಾಕ್ಸ್ ಚಿತ್ರದಲ್ಲಿರಲಿದೆ. ಚಿತ್ರದುದ್ದಕ್ಕೂ ಇರುವ ಟರ್ನ್ಸ್ ಆ್ಯಂಡ್ ಟ್ವಿಸ್ಟ್ ನೋಡುಗರಿಗೆ ಹೊಸ ಅನುಭವ ಕೊಡುತ್ತದೆ’ ಎನ್ನುತ್ತದೆ.
ಇನ್ನು ‘ಮರೆಯದೆ ಕ್ಷಮಿಸು’ ಚಿತ್ರಕ್ಕೆ ‘ನೆನಪಾದರೆ..!’ ಎನ್ನುವ ಟ್ಯಾಗ್‌ಲೈನ್ ಇದ್ದು, ಇದರಲ್ಲಿ ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಶನ್ಸ್ ಎಲ್ಲವೂ ಇದೆ. ಹಳ್ಳಿಯ ಸೊಗಡು, ಸಿಟಿಯ ಲೈಫ್ ಎಲ್ಲವನ್ನೂ ಇಲ್ಲಿ ಕಾಣಬಹುದು. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ಪ್ರಮೋದ್ ಭೋಪಣ್ಣ ನಾಯಕನಾಗಿ, ಮೇಘನಾ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಲಕ್ಷ್ಮಣ್ ರಾವ್, ರಾಕ್‌ಲೈನ್ ಸುಧಾಕರ್, ಮಿಮಿಕ್ರಿ ಗೋಪಿ, ಅಪೂರ್ವ, ರಘು ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿ. ಶಿವರಾಮ್ ನಿರ್ಮಾಣದ ‘ಮರೆಯದೆ ಕ್ಷಮಿಸು’ ಚಿತ್ರಕ್ಕೆ ಕೆ. ರಾಘವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಕಲೇಶಪುರ, ಚಿಕ್ಕಮಗಳೂರು, ಮಂಗಳೂರು ಸುತ್ತಮುತ್ತ ‘ಮರೆಯದೆ ಕ್ಷಮಿಸು’ ಚಿತ್ರದ ಚಿತ್ರೀಕರಣ ನಡೆಯಲಿದೆ. ಸದ್ಯ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ವರ್ಷದ ಕೊನೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.