Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Team Udayavani, May 10, 2024, 3:14 PM IST
ಸ್ಟಾರ್ ಸಿನಿಮಾಗಳ ಸೋಲು-ಗೆಲುವು ಇಡೀ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುವುದು ಸುಳ್ಳಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್‌ಗೆ ಹೊರಟಿರುವ ಸಿನಿಮಾಗಳ ಮೇಲೆ ಚಿತ್ರರಂಗ ಒಂದು ಕಣ್ಣಿಟ್ಟಿರುತ್ತದೆ. ಈ ಹಿಂದೆ ಬಂದ “ಕೆಜಿಎಫ್’, “ಕಾಂತಾರ’ ಸೇರಿದಂತೆ ಕೆಲವು ಚಿತ್ರಗಳು ಸ್ಯಾಂಡಲ್‌ವುಡ್‌ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ದಾರಿ ತೋರಿಸಿದವು. ಆದರೆ, ಸರಿಯಾದ ತಯಾರಿ ಇಲ್ಲದೇ ಇದೇ ಹಾದಿಯಲ್ಲಿ ಹೋದ ಕೆಲವು ಸಿನಿಮಾಗಳು ಮುಗ್ಗರಿಸಿ ಸ್ಯಾಂಡಲ್‌ವುಡ್‌ಗೆ ಒಂದಷ್ಟು ಹೊಡೆತಕೊಟ್ಟಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗ “ಮಾರ್ಟಿನ್’ ಮೇಲೆ ನಿರೀಕ್ಷೆ ಇಟ್ಟಿದೆ. ಚಿತ್ರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಸಾಗುತ್ತಿದೆ. ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾವಾಗಿ ಮೂಡಿಬರುತ್ತಿರುವ “ಮಾರ್ಟಿನ್’ ರಿಸಲ್ಟ್ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ “ಮಾರ್ಟಿನ್’ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಒಂದಷ್ಟು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ. ಗಾಂಧಿನಗರದ ಊಹಾಪೋಹಾ, ಸಂದೇಹಗಳನ್ನು ಬಗೆಹರಿಸಿದ್ದಾರೆ.
ಮಾರ್ಟಿನ್ ರಿಸಲ್ಟ್ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ?
ಖಂಡಿತಾ ಪರಿಣಾಮ ಬೀರುತ್ತದೆ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಮಾರ್ಟಿನ್ ನಿಂದ ಕನ್ನಡ ಚಿತ್ರರಂಗ ಮತ್ತೂಮ್ಮೆ ತಲೆಎತ್ತಲಿದೆ ಎಂದು ಧೈರ್ಯವಾಗಿ ಹೇಳುತ್ತೇನೆ. ಆ ತರಹದ ರಿಸಲ್ಟ್ ಮಾರ್ಟಿನ್‌ನಿಂದ ಬರಲಿದೆ. ಇದು ಕೇವಲ ಕನ್ನಡ ಸಿನಿಮಾವಲ್ಲ. ನಾವು ಇಂಡಿಯನ್ ಸಿನಿಮಾ ಎಂಬ ಕಾನ್ಸೆಪ್ಟ್ನೊಂದಿಗೆ ಮಾಡಿರುವ ಸಿನಿಮಾ. ಬಹುಶಃ ಈ ತರಹದ ಸಿನಿಮಾವನ್ನು ಮುಂದೆ ನಾನೇ ಮಾಡಲು ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವರು ಈಗ ನನ್ನ ಕೈಯಲ್ಲಿ ಇಂತಹ ಒಂದು ಅದ್ಭುತ ಸಿನಿಮಾ ಮಾಡಿಸಿದ್ದಾನೆ. ನಾನು ಈಗ ಮಾತನಾಡುವ ಬದಲು ಸಿನಿಮಾ ರಿಲೀಸ್ ಆದ ನಂತರ ಇಡೀ ದೇಶವೇ ಮಾತನಾಡಲಿದೆ. ಒಂದೊಳ್ಳೆಯ ಪ್ರಾಜೆಕ್ಟ್ ನೀಡಲು ಇಡೀ ತಂಡ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಒಳ್ಳೆಯ ಫಲ ಸಿಗುತ್ತದೆ. ಇದರಿಂದ ಇಡೀ ಚಿತ್ರರಂಗ ಮತ್ತೂಂದು ಹೆಜ್ಜೆ ಮುಂದೆ ಸಾಗಲಿದೆ
ಮಾರ್ಟಿನ್ ಮಾಡಲು ಪ್ರೇರಣೆ?
ನಾವು ಸಿನಿಮಾ ಶುರು ಮಾಡಿದಾಗ ನಮ್ಮ ಚಿತ್ರರಂಗದಲ್ಲಿ ಆದ ಒಂದಷ್ಟು ದೊಡ್ಡ ಸಿನಿಮಾಗಳು, ಅದರ ಫಲಿತಾಂಶವನ್ನು ಪ್ರೇರಣೆಯಾಗಿ ತಗೊಂಡಿದ್ದು ಸುಳ್ಳಲ್ಲ. ಕನ್ನಡದಿಂದ ಒಂದು ಇಂಡಿಯನ್ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಶುರು ಮಾಡಿದ ಸಿನಿಮಾ “ಮಾರ್ಟಿನ್’. ಅದೇ ಕಾರಣದಿಂದ ಒಂದು ಇಂಡಿನ್ ಸಿನಿಮಾ ಎನಿಸಿಕೊಳ್ಳಲು ಅದಕ್ಕೆ ಅದರದ್ದೇ ಆದ ತಯಾರಿ, ಸಮಯ ಎಲ್ಲವೂ ಬೇಕು. ಆ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ. ಮುಂದೆ “ಮಾರ್ಟಿನ್’ ನೋಡಿ ಇನ್ನೊಂದಿಷ್ಟು ದೊಡ್ಡ ಪ್ರಯತ್ನಗಳಾಗುವುದರಲ್ಲಿ ಅನುಮಾನವಿಲ್ಲ.
240 ದಿನಗಳ ಚಿತ್ರೀಕರಣವನ್ನು ನಿಜಕ್ಕೂ ಕಥೆ ಬಯಸಿತ್ತಾ?
ಇಲ್ಲಿ ನಾವು ಯಾವುದನ್ನೂ ಅನಾವಶ್ಯಕವಾಗಿ ಮಾಡಿಲ್ಲ. ಕಥೆ ಬಯಸಿದ್ದರಿಂದಲೇ ಶೂಟಿಂಗ್ ಮಾಡಿದ್ದೇವೆ. ಯಾವುದೋ ಒಂದು ಎಪಿಸೋಡ್ ಮಾಡಿರುತ್ತೇವೆ. ಅದು ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ. ಮತ್ತೂಂದು ಎಪಿಸೋಡ್ ಮಾಡುವಾಗ ಅದಕ್ಕಿಂತ ಚೆನ್ನಾಗಿ ಮಾಡುವ ಸವಾಲನ್ನು ನಮಗೆ ನಾವೇ ಹಾಕಿಕೊಳ್ಳುತ್ತಿದ್ದೆವು. ಇವೆಲ್ಲವೂ ಶೂಟಿಂಗ್ ದಿನ ಹೆಚ್ಚಾಗಲು ಕಾರಣ.
ಚಿತ್ರದ ಬಜೆಟ್ 80 ಕೋಟಿ ರೂಪಾಯಿ ದಾಟಿದೆಯಂತೆ?
ಯಾರು ಹೇಳಿದ್ದು, ನಾನು ಅಧಿಕೃತವಾಗಿ ಬಜೆಟ್ ಬಗ್ಗೆ ಹೇಳಿದ್ದೇನಾ? ನೋಡಿ, ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆ ನಂತರ ಪ್ರಮೋಶನ್, ರಿಲೀಸ್… ಅದಕ್ಕೂ ಬಜೆಟ್ ಬೇಕು. ಸಿನಿಮಾದ ಬಜೆಟ್ ಇವೆಲ್ಲವನ್ನು ಸೇರಿಕೊಳ್ಳುತ್ತದೆ. ಒಂದಂತೂ ಹೇಳಬಲ್ಲೆ, ಕನ್ನಡ ಚಿತ್ರರಂಗದಲ್ಲೇ ಬಿಗ್ ಬಜೆಟ್‌ನ ಸಿನಿಮಾವಿದು.
ಇಷ್ಟೊಂದು ಬಿಗ್‌ಬಜೆಟ್ ಹಾಕಿದ್ದೀರಿ. ಹೇಗಿದೆ ಈ ಅನುಭವ?
ಯಾವುದೇ ಕ್ಷೇತ್ರಕ್ಕೆ ಕೈ ಹಾಕಿದರೂ ಅಲ್ಲಿ ಅನುಭವ ಆಗಿಯೇ ಆಗುತ್ತದೆ. ಇಲ್ಲೂ ಅಷ್ಟೇ ಸಿನಿಮಾ ಮುಗಿಸೋದು, ಈ ನಡುವೆ ಬರುವ ಒತ್ತಡ, ಫಾಲೋಆಫ್.. ಎಲ್ಲವೂ ಒಂದೊ ಳ್ಳೆಯ ಅನುಭವ ನೀಡುತ್ತಿದೆ.
ಸಿನಿಮಾ ಯಾಕೆ ಇಷ್ಟೊಂದು ತಡವಾಗುತ್ತಿದೆ?
– ನನಗೆ ಆ ತರಹ ಅನಿಸಿಯೇ ಇಲ್ಲ. ಸಿನಿಮಾ ಅಂದರೆ ಅದೊಂದು ಪ್ರಕ್ರಿಯೆ. ಸ್ಕ್ರಿಪ್ಟ್ನಿಂದ ಪೋಸ್ಟ್ ಪ್ರೊಡಕ್ಷನ್‌ವರೆಗೂ… ಈ ಹಂತಗಳು ಅದರದ್ದೇ ಆದ ಸಮಯ ಬೇಡುತ್ತದೆ. ಚಿತ್ರದಲ್ಲಿ ಎರಡು ಗಂಟೆ ಸಿಜಿ ಬರುತ್ತದೆ. ಇಷ್ಟನ್ನು ಮಾಡಲು ಕನಿಷ್ಠ ಒಂದು ವರ್ಷ ಸಮಯ ಬೇಕು. ಈ ಪ್ರೊಸೆಸ್ ನೀಟಾಗಿ ಬರಬೇಕಾದರೆ ನಾವು ಟೈಮ್ ಕೊಡಲೇಬೇಕು. ನಾನು ಎಲ್ಲವೂ ಪಕ್ವವಾಗಿಯೇ ಬರಬೇಕೆಂದು ಬಯಸುವವ. ನಮ್ಮ ಹೀರೋ ಸಿನಿಮಾ ಬಂದು ಮೂರು ವರ್ಷ ಆಗಿದೆ. ಅವರು ಕೂಡಾ ಬೇರೆ ಯಾವುದೇ ಸಿನಿಮಾ ಮಾಡದೇ ಪೂರ್ಣವಾಗಿ ಈ ಕಡೆ ತೊಡಗಿಸಿಕೊಂಡಿದ್ದಾರೆ. ಒಂದು ವೇಳೆ ಮಧ್ಯದಲ್ಲಿ ಅವರ ಬೇರೆ ಸಿನಿಮಾ ಬಂದಿದ್ದರೆ ಈ ಸಿನಿಮಾ ತಡ ಎಂಬ ಭಾವನೆ ಬರುತ್ತಿರಲಿಲ್ಲ.
ನಟ ಧ್ರುವ ಅವರಿಗೆ ಕನ್ನಡದಲ್ಲಿ ದೊಡ್ಡ ಫ್ಯಾನ್‌ಬೇಸ್ ಇದೆ. ಆದರೆ, ಪ್ಯಾನ್ ಇಂಡಿಯಾದಲ್ಲಿ ಅವರು ಈಗಷ್ಟೇ ಗುರುತಿಸಿಕೊಳ್ಳುತ್ತಿರುವ ನಟ. ಹೀಗಿರುವಾಗ ಇಷ್ಟೊಂದು ಬಿಗ್ ಬಜೆಟ್ ಹಾಕೋದು ಒಬ್ಬ ಹೀರೋ ಬೆನ್ನಿಗೆ ಅತಿ ಭಾರ ಹೊರಿಸಿದೆಯಂತೆ ಅಲ್ವಾ?
ಯಾವುದೇ ಒಂದು ಸಿನಿಮಾಕ್ಕೆ ಬಜೆಟ್ ಹಾಕುವ ಮುನ್ನ ಕಂಟೆಂಟ್ ನೋಡಬೇಕು. “ಮಾರ್ಟಿನ್’ ಸಿನಿಮಾದ ಕಂಟೆಂಟ್ ಅಷ್ಟೊಂದು ಗಟ್ಟಿಯಾಗಿದೆ. ಮೊದಲೇ ಹೇಳಿದಂತೆ ಇದು ಇಂಡಿಯನ್ ಸಿನಿಮಾ. ಇನ್ನು, ಧ್ರುವ ಅವರ ಬಗ್ಗೆ ಹೇಳುವುದಾದರೆ, ಈಗಾಗಲೇ ಅವರ ಪೊಗರು ಚಿತ್ರ ತಮಿಳು, ತೆಲುಗಿನಲ್ಲಿ ಚೆನ್ನಾಗಿ ಹೋಗಿದೆ. ಈ ಬಾರಿ ಹೊಸದಾಗಿ ಸೇರಿಸಿರೋದು ಹಿಂದಿ ಹಾಗೂ ಮಲಯಾಳಂ ಮಾತ್ರ. ಹಿಂದಿಯಲ್ಲೂ ನಮ್ಮ “ಮಾರ್ಟಿನ್’ ಚಿತ್ರ ತುಂಬಾ ಚೆನ್ನಾಗಿ ರೀಚ್ ಆಗಿದೆ. ಈಗಾಗಲೇ ಅಲ್ಲಿ ಟಾಕ್ ಶುರುವಾಗಿದೆ. ನನಗೆ ಮಾರ್ಟಿನ್ ಮೇಲೆ ಶೇ100ರಷ್ಟು ನಂಬಿಕೆ ಇದೆ
ಯಾವ ತಿಂಗಳು ರಿಲೀಸ್ ಮಾಡ್ತೀರಿ?
ನಾನು ತಿಂಗಳು ಹೇಳ್ಳೋದು ಕಷ್ಟ. ಫಸ್ಟ್ ಡ್ರಾಪ್ಟ್ ಸಿಜಿ ಬರಬೇಕು. ಆ ನಂತರ ಕರೆಕ್ಷನ್ ಸಮಯ ಕೊಡಬೇಕು. ಆ ನಂತರ ಸಿನಿಮಾ ರಿಲೀಸ್ ನಿರ್ಧಾರ ಮಾಡಲು ಸಾಧ್ಯ. ಅತೀ ಶೀಘ್ರದಲ್ಲೇ ಎಂದಷ್ಟೇ ಹೇಳಬಲ್ಲೇ.
ನೀವು ಅಂದುಕೊಂಡ ಮಟ್ಟಕ್ಕೆ “ಮಾರ್ಟಿನ್’ ಬಿಝಿನೆಸ್ ಆಗುತ್ತಿಲ್ಲ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ?
ಅದು ಸುಳ್ಳು. ನಾನು ಬಿಝಿನೆಸ್ ಓಪನ್ ಮಾಡಿಲ್ಲ. ಹೀಗಿರುವಾಗ ಬಿಝಿನೆಸ್ ಮಾತುಕತೆ ಆಗಲು ಹೇಗೆ ಸಾಧ್ಯ. ಸಿನಿಮಾ ಪೂರ್ಣವಾಗದೇ ನಾನು ಬಿಝಿನೆಸ್ ಮಾಡಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಏಕೆಂದರೆ ಒಂದು ಪರಿಪೂರ್ಣವಾದ ಪ್ರಾಡಕ್ಟ್‌ನ ಇಟ್ಟುಕೊಂಡು ಬಿಝಿನೆಸ್ ಮಾತುಕತೆ ಮಾಡಬೇಕೇ ಹೊರತು ಅರ್ಧಬೆಂದ ಅನ್ನವನ್ನಿಟ್ಟುಕೊಂಡಲ್ಲ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.