ಸೋಡ ಇಲ್ಲದ ಊಟವಿದ್ದಂತೆ!
Team Udayavani, Jul 6, 2018, 6:00 AM IST
“ಜನರು ಸೋಡ ಇಲ್ಲದ ಊಟವನ್ನೇ ಹುಡುಕಿ ಹೋಗುವುದು ಹೆಚ್ಚು. ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ, ಮನರಂಜನೆ ಮತ್ತು ಗಟ್ಟಿ ಕಥೆ ಇರುವ ಸಿನಿಮಾ ಹುಡುಕುವುದು ಹೆಚ್ಚು. ನಮ್ಮ ಚಿತ್ರ ಒಂದು ರೀತಿಯ ಸೋಡ ಇಲ್ಲದ ಊಟ ಇದ್ದಂಗೆ…’
– ಹೀಗೆ ಹೇಳಿದ್ದು ನಿರ್ದೇಶಕ ಕೆ.ಎಂ. ರಘು. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ಪರಸಂಗ’ ಚಿತ್ರದ ಕುರಿತು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಂಡ ರಘು, “ಇದು ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಚಿತ್ರ. ಪಕ್ಕಾ ಹಳ್ಳಿ ಸೊಗಡಿನ ರುಚಿ ಇಲ್ಲಿರಲಿದೆ. ಎಲ್ಲರ ಮನಕಲಕುವ ಚಿತ್ರಣ ಚಿತ್ರದ ಹೈಲೆಟ್. ನಂಬಿಕೆಯನ್ನು ಅನುಮಾನದಿಂದ ನೋಡಿದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಈ ಸಮಾಜಕ್ಕೆ ಮುಖ್ಯವಾಗಿ ಏನೆಲ್ಲಾ ಬೇಕು, ಸಮಾಜ ಹೇಗೆಲ್ಲಾ ಇದೆ ಎಂಬುದನ್ನು ಒಂದು ಹಳ್ಳಿಪರಿಸರದಲ್ಲಿ ಮನರಂಜನೆ ಜೊತೆಗೆ ಹೇಳಿದ್ದೇನೆ. ಇದು ಹಳ್ಳಿಯೊಂದರ ರಿಯಲ್ ತಿಮ್ಮನ ಕಥೆ. ಆ ಕಥೆ ಕೇಳಿ, ಸಿನಿಮಾ ಮಾಡಬೇಕೆನಿಸಿತು. ಆ ಪಾತ್ರಕ್ಕೆ ಮಿತ್ರ ಸರಿಹೊಂದುತ್ತಾರೆ ಅಂತ ಆಯ್ಕೆ ಮಾಡಿದ್ದು ಖುಷಿಕೊಟ್ಟಿದೆ. ಯಾಕೆಂದರೆ, ನನ್ನ ಕಲ್ಪನೆ ಮೀರಿ ನಟಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರ ಸಹಕಾರದಿಂದ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇಂತಹ ಚಿತ್ರಗಳಿಗೆ ನಿರ್ಮಾಪಕರ ಪ್ರೋತ್ಸಾಹವೂ ಇರಬೇಕು. ಕುಮಾರ್, ಲೋಕೇಶ್ ಮತ್ತು ಮಹದೇವೇಗೌಡ ಅವರು ಚಿತ್ರಕ್ಕೆ ಬೇಕಾದ್ದೆಲ್ಲ ಕೊಟ್ಟು ಒಂದೊಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಜನರು ಸೋಡ ಇಲ್ಲದ ಊಟ ಬಯಸುವಂತೆ, ಮನರಂಜನೆ ಮತ್ತು ಕಥೆ ಇರುವ ಚಿತ್ರ ನೋಡುವ ಮನಸ್ಸುಗಳಿಗೆ “ಪರಸಂಗ’ ಹೇಳಿಮಾಡಿಸಿದ ಚಿತ್ರ’ ಅಂದರು ನಿರ್ದೇಶಕ ರಘು.
“ಪರಸಂಗ’ ತಮ್ಮ ಬದುಕಿನ ಮತ್ತೂಂದು ದಿಕ್ಕು ಬದಲಿಸುವ ಚಿತ್ರ ಎಂದು ಮಾತಿಗಿಳಿದ ಮಿತ್ರ, “ನಾನಿಲ್ಲಿ ತಿಮ್ಮನ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ಮುಗ್ಧತೆ ಪಾತ್ರ. ನೋಡುಗರಿಗೆ ಕಣ್ಣಂಚಲ್ಲಿ ನೀರು ತುಂಬಿಸುವ ಕಥೆ ಇಲ್ಲಿದೆ. ಹಾಗಂತ ಮನರಂಜನೆ ಇಲ್ಲವೆಂದಲ್ಲ, ಅದಕ್ಕೂ ಜಾಗವಿದೆ. ಒಂದು ಸದಭಿರುಚಿಯ ಚಿತ್ರ ಇದಾಗಲಿದೆ. ಪಕ್ಕಾ ಹಳ್ಳಿ ಭಾಷೆಯ ಚಿತ್ರಣದೊಂದಿಗೆ ಆಪ್ತತೆ ಎನಿಸುವ ಚಿತ್ರ ಇದಾಗಲಿದೆ’ ಎಂದರು ಮಿತ್ರ.
ನಾಯಕಿ ಅಕ್ಷತಾಗೆ ಹೊಸಬಗೆಯ ಪಾತ್ರ ಸಿಕ್ಕ ಖುಷಿ. ನಾಯಕ ಮನೋಜ್‌ಗೆ ಇದು ಹೊಸದೊಂದು ಇಮೇಜ್ ತಂದುಕೊಡುವ ಚಿತ್ರವಂತೆ. ನಿರ್ಮಾಪಕರಾದ ಕುಮಾರ್, ಲೋಕೇಶ್, ಮಹದೇವೇಗೌಡ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ. ಛಾಯಾಗ್ರಾಹಕ ಸುಜಯ್‌ಕುಮಾರ್‌ಗೆ ಇಲ್ಲಿ ಹಳ್ಳಿಯ ಪರಿಸರವನ್ನು ತೋರಿಸಿರುವುದೇ ಚಾಲೆಂಜ್ ಅಂತೆ. ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್‌ಗೆ ಇದು ಮೊದಲ ಚಿತ್ರ. ವಿತರಕ ದೀಪಕ್ ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.