ಪಾದರಸದ ಹುಡುಗಿ
Team Udayavani, Aug 10, 2018, 6:00 AM IST
ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು, ಅಲ್ಲಿ ಮಿಂಚಬೇಕೆಂದು ಕನಸು ಕಾಣುವ ಮಂದಿಗೇನು ಕೊರತೆಯಿಲ್ಲ. ಇವತ್ತು ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿರುವವರು, ಬಿಝಿಯಾಗಿರುವವರು, ಬಿಝಿಯಾಗಲು ಪ್ರಯತ್ನಿಸುತ್ತಿರುವವರೆಲ್ಲರೂ ಸಿನಿಮಾ ಆಕರ್ಷಣೆಗೆ ಬಿದ್ದು ಈ ಕ್ಷೇತ್ರಕ್ಕೆ ಬಂದಿರೋದು. ಮನಸ್ವಿನಿ ಕೂಡಾ ಇದೇ ಆಕರ್ಷಣೆಯೊಂದಿಗೆ ಚಿತ್ರರಂಗಕ್ಕೆ ಬಂದಿದ್ದಾರೆ. ಮೂರು ವರ್ಷದಲ್ಲಿ ಆರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಎರಡು ಬಿಡುಗಡೆಯಾಗಿದ್ದರೆ, ಒಂದು ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಅದು “ಪಾದರಸ’.
ಇಷ್ಟು ಹೇಳಿದ ಮೇಲೆ ನಿಮಗೆ ಒಂದಂತೂ ಅರ್ಥವಾಗಿರುತ್ತದೆ. ಅದು ಮನಸ್ವಿನಿ “ಪಾದರಸ’ದ ನಾಯಕಿ ಎಂದು. ಹೌದು, “ಪಾದರಸ’ದ ಇಬ್ಬರು ನಾಯಕಿಯರಲ್ಲಿ ಮನಸ್ವಿನಿ ಕೂಡಾ ಒಬ್ಬರು. ಅವರೇ ಹೇಳುವಂತೆ ಈ ಚಿತ್ರದ ಸೆಕೆಂಡ್ ಹೀರೋಯಿನ್. ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಜನ ತಮ್ಮ ಪಾತ್ರವನ್ನು ಇಷ್ಟಪಡುತ್ತಾರೆಂಬ ವಿಶ್ವಾಸದಲ್ಲಿದ್ದಾರೆ ಮನಸ್ವಿನಿ. ಇಲ್ಲಿ ಅವರು ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. “ತುಂಬಾ ಮುಗ್ಧ ಹುಡುಗಿಯ ಪಾತ್ರ. ಯಾರು ಬೇಕಾದರೂ ಮೋಸ ಮಾಡಬಹುದಾದಂತಹ ಪಾತ್ರ ನನ್ನದು’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ. ಮನಸ್ವಿನಿ ಈಗಾಗಲೇ “ಶಾಲಿನಿ’, “ಜನಗಣಮನ’, “ಸಿಂಹಸೇನಾ’, “ಪ್ರೇಮಾಂತರಂಗ’, “ದೇವರೇ ಗತಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಂದಾಪುರ ಮೂಲದ ಮನಸ್ವಿನಿಗೆ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಚಿಕ್ಕಂದಿನಿಂದಲೇ ಇತ್ತಂತೆ. ಅದು ಈಡೇರಿದೆ. ಮನಸ್ವಿನಿಗೆ ತುಂಬಾ ಮುಗ್ಧವಾದ ಪಾತ್ರದಲ್ಲಿ ನಟಿಸುವ ಆಸೆಯಂತೆ. ಮುಂದೆ ಅದು ಈಡೇರುತ್ತದೆ ಎಂಬ ವಿಶ್ವಾಸ ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.