![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 5, 2018, 11:17 AM IST
ಇವರನ್ನು ಇತ್ತೀಚೆಗೆ ನೀವು “ಬಿಗ್‌ಬಾಸ್’ ಶೋನಲ್ಲಿ ನೋಡಿರುತ್ತೀರಿ. ಅಲ್ಲಿ ಕೆಲ ದಿನ ಇದ್ದು ಬಂದ ಇವರ ಹೆಸರು ವೈಷ್ಣವಿ. ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿಕೊಟ್ಟಿರುವ ನಾಯಕಿ. ಬೆಂಗಳೂರು ಮೂಲದ ವೈಷ್ಣವಿ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ವೈಷ್ಣವಿ “ದೇವ್ರಂಥ ಮನುಷ್ಯ’, “ಪಾದರಸ’, “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’, “ಮಗಧ’, “ಡಾರ್ಕ್ ನೈಟ್’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬೇರೆ ಭಾಷೆಗಳಿಂದಲೂ ವೈಷ್ಣವಿಗೆ ಅವಕಾಶಗಳು ಬರುತ್ತಿವೆ. ಈ ಚಿತ್ರಗಳೆಲ್ಲವೂ ಚಿತ್ರೀಕರಣ ಹಂತದಲ್ಲಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಬಹುತೇಕ ನಟಿಯರಂತೆ ವೈಷ್ಣವಿ ಕೂಡಾ ಮಾಡೆಲಿಂಗ್ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ವೈಷ್ಣವಿ ಒಳ್ಳೆಯ ಡ್ಯಾನ್ಸರ್. ಸುಮಾರು ಆರು ವರ್ಷಗಳ ಕಾಲ ಭರತನಾಟ್ಯ ಕಲಿತಿದ್ದಾರೆ. ಭರತನಾಟ್ಯದ ಜೊತೆಗೆ ಇತರ ನೃತ್ಯ ಪ್ರಾಕಾರಗಳನ್ನು ಕೂಡಾ ವೈಷ್ಣವಿ ಕರಗತ ಮಾಡಿಕೊಂಡಿದ್ದಾರೆ. ವೈಷ್ಣವಿಗೆ ತುಂಬಾ ಚಿಕ್ಕ ವಯಸ್ಸಿನಿಂದಲೇ ತಾನು ನಟಿಯಾಗಬೇಕು, ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಇತ್ತಂತೆ. ಅದೀಗ ಈಡೇರುತ್ತಿರುವ ಖುಷಿ ಅವರಿಗಿದೆ. ಸದ್ಯ ವೈಷ್ಣವಿ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರ ತಿಂಗಳಾಂತ್ಯದಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಇಲ್ಲಿ ವೈಷ್ಣವಿ ನಾಗವಲ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರ ಪಾತ್ರ ನಾನಾ ಶೇಡ್‌ಗಳೊಂದಿಗೆ ಸಾಗುತ್ತದೆಯಂತೆ. “ಆಪ್ತಮಿತ್ರ’ ಚಿತ್ರದಲ್ಲಿ ಸೌಂದರ್ಯ ಅವರು ಮಾಡಿದಂತಹ ಪಾತ್ರ ಮಾಡಿದ್ದೇನೆ. ಅವರ ಪರ್‌ಫಾರ್ಮೆನ್ಸ್‌ನಲ್ಲಿ ಅರ್ಧ ಮಾಡಿದರೂ ನಾನು ಗೆದ್ದಂತೆ’ ಎಂದು ಖುಷಿಯಿಂದ ಹೇಳುತ್ತಾರೆ. ವೈಷ್ಣವಿ ನಟಿಯಾಗುವಲ್ಲಿ ಅವರ ತಾಯಿಯ ಸಹಕಾರವೂ ಇದೆಯಂತೆ. ಪ್ರತಿ ಹಂತದಲ್ಲೂ ಜೊತೆಗೆ ನಿಂತು ಬೆಂಬಲಿಸಿದ್ದಾರಂತೆ.
ರವಿ ರೈ
You seem to have an Ad Blocker on.
To continue reading, please turn it off or whitelist Udayavani.