ಪಾವನ ರುದ್ರವತಾರ
ಸಿನಿಬದುಕಿನ ಮೈಲೇಜ್ ನಿರೀಕ್ಷೆಯಲ್ಲಿ...
Team Udayavani, Dec 27, 2019, 5:08 AM IST
ನಟಿ ಪಾವನಾ ಈಗ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿರುವ ಪಾವನಾ, ಈವರೆಗೆ ಹದಿನೈದು ಚಿತ್ರಗಳಲ್ಲಿ ನಟಿಸಿದ್ದಾರೆ. ಹೇಳಿಕೊಳ್ಳುವಂತಹ ಗೆಲುವು ಸಿಗದಿದ್ದರೂ, ಅವರಿಗೆ ಮಾಡಿರುವ ಪಾತ್ರಗಳು ತೃಪ್ತಿ ಕೊಟ್ಟಿವೆ. ತಮ್ಮ ಚಿತ್ರಗಳ ಬಗ್ಗೆ ಪಾವನಾ ಒಂದಷ್ಟು ಹೇಳಿಕೊಂಡಿದ್ದಾರೆ.
“ಈಗಂತೂ ನನಗೆ ಒಳ್ಳೆಯ ಕಥೆ, ಪಾತ್ರ ಹುಡುಕಿ ಬರುತ್ತಿವೆ. ಅಷ್ಟೇ ಅಲ್ಲ, ಒಳ್ಳೆಯ ತಂಡ ಕೂಡ ಸಿಗುತ್ತಿದೆ. ಮೊದಲ ಚಿತ್ರ “ಗೊಂಬೆಗಳ ಲವ್’ ನನಗೆ ಸ್ಟ್ರಾಂಗ್ ಬೇಸ್ ಹಾಕಿಕೊಟ್ಟಿತು. ಇಲ್ಲಿಯವರೆಗೆ ನಾನು ನಾಯಕಿಯಾಗಿ ಗಟ್ಟಿ ನೆಲೆ ಕಂಡಿದ್ದೇನೆ ಅಂದರೆ ಅದಕ್ಕೆ “ಗೊಂಬೆಗಳ ಲವ್’ ಕಾರಣ. ಈಗ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆ ಎಲ್ಲಾ ಚಿತ್ರಗಳು ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿವೆ. “ಮೈಸೂರು ಡೈರೀಸ್’ ಚಿತ್ರ ಹೊಸ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಇನ್ನು, “ಪ್ರಭುತ್ವ’, “ತೂತು ಮಡಿಕೆ’ ಚಿತ್ರಗಳಲ್ಲಿ ನಟಿಸಿದ್ದೇನೆ. “ರುದ್ರಿ’ ಚಿತ್ರ ಕೂಡ ಹೊಸ ಕುತೂಹಲ ಕೆರಳಿಸಿರುವ ಚಿತ್ರ. ಇದು ಸಾಕಷ್ಟು ವಿಶೇಷತೆ ತುಂಬಿರುವ ಸಿನಿಮಾ. ಬಹುತೇಕ ಉತ್ತರ ಕರ್ನಾಟಕ ಭಾಗದ ಹಿನ್ನೆಲೆಯಲ್ಲೇ ಸಾಗಲಿದೆ. ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ. ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು “ರುದ್ರಿ’ ಚಿತ್ರದ ವಿಶೇಷ. “ರುದ್ರಿ’ ಅಂದರೆ, ಅದೊಂದು ಪವರ್‌ಫುಲ್ ಹೆಸರು. ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲೂ ಪಾರ್ವತಿಯೂ ಇರುತ್ತಾಳೆ. ಕಾಳಿಯೂ ಇರುತ್ತಾಳೆ. ಇಲ್ಲಿ ರುದ್ರಿ ಎಂಬ ಹುಡುಗಿಯ ಲೈಫಲ್ಲಿ ಒಂದು ಸಮಸ್ಯೆ ಎದುರಾಗುತ್ತೆ. ಆಗ ಅವಳು ಕಾಳಿ ಅವತಾರ ತಾಳುತ್ತಾಳೆ. ಹಾಗಾಗಿ ಅದೊಂದು ರುದ್ರಾವತಾರವಾಗಿ ಕಾಣುತ್ತದೆ. ನೊಂದು ಹುಡುಗಿಯೊಬ್ಬಳು ಸಿಡಿದೇಳುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದು ಹೇಳುವ ಪಾವನಾ, ಯಾವುದೇ ಪಾತ್ರವಿರಲಿ, ಅದಕ್ಕೆ ಪರಿಪೂರ್ಣ ನ್ಯಾಯ ಸಲ್ಲಿಸಲು ಪ್ರಯತ್ನಿಸುತ್ತೇನೆ. “ರುದ್ರಿ’ ಚಿತ್ರದಲ್ಲಿ ಕೆಲವೊಂದು ಬೋಲ್ಡ್ ಸ್ಟೆಪ್ ತಗೋಬೇಕಿತ್ತು. ಪಾತ್ರದ ಅವಶ್ಯಕತೆಗೆ ತಕ್ಕಂತೆ ಮಾಡಬೇಕಿತ್ತು. ಮಾಡಿದ್ದೇನೆ. ನನಗೆ ನಾನೇ ಲಿಮಿಟಿಷೇನ್ ಹಾಕ್ಕೊಂಡ್ರೆ. ಕಷ್ಟ. ನನಗೆ ಜಸ್ಟಿಫೈ ಆದರೆ ಮಾತ್ರ ಮಾಡ್ತೀನಿ. ಮನಸ್ಸಿಗೆ ಇಷ್ಟವಾಗದಿದ್ದರೆ ಮಾಡುವುದಿಲ್ಲ’ ಎಂಬುದು ಅವರ ಮಾತು.
ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪಾವನಾಗೆ ಈಗ ಕೈಯಲ್ಲಿರುವ ಚಿತ್ರಗಳ ಹೊಸಬಗೆಯ ಪಾತ್ರಗಳು ಅವರ ಸಿನಿಬದುಕಿನಲ್ಲಿ ಹೊಸದೊಂದು ಮೈಲೇಜ್ ತಂದುಕೊಡುತ್ತದೆ ಎಂಬುದು ಅವರಿಗಿರುವ ಬಲವಾದ ನಂಬಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.