ಕಾರಂತರ ಕನಸು ಕನಸಿನ ಪಾತ್ರ ನನಸಾದಾಗ

Team Udayavani, Nov 29, 2019, 6:00 AM IST

dd-28

ಜ್ಞಾನಪೀಠ ಪ್ರಶಸ್ತಿ ಪಡೆದ “ಮೂಕಜ್ಜಿಯ ಕನಸುಗಳು’ ಕಾದಂಬರಿ ಚಿತ್ರವಾಗಿ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ “ಮೂಕಜ್ಜಿ’ಯಾಗಿ ಬಿ. ಜಯಶ್ರೀ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಆಕರ್ಷಣೆ ಅವರು. ತಮ್ಮ ಪಾತ್ರ ಕುರಿತು ಬಿ.ಜಯಶ್ರೀ ಹೇಳಿದ್ದೇನು ಗೊತ್ತಾ? “ನಾನು ಬಹಳ ವರ್ಷಗಳ ಹಿಂದೆಯೇ “ಮೂಕಜ್ಜಿಯ ಕನಸುಗಳು’ ಕಾದಂಬರಿ ಓದಿದ್ದೆ. ಒಮ್ಮೆ ಕಾರಂತರ “ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ರಂಗಭೂಮಿಗೆ ತರುವ ಆಸೆ ಹುಟ್ಟುಕೊಂಡಿತು. ಹಾಗಾಗಿ, ಅವರನ್ನು ಭೇಟಿ ಮಾಡಿ ಮಾತಾಡಿದ್ದೆ. ಆಗ ಅವರು, “ಇದನ್ನು ರಂಗಭೂಮಿಗೆ ತರ್ತಿಯೇನವ್ವ’ ಅಂದಿದ್ದರು. ನೀವು ಒಪ್ಪಿದರೆ ಖಂಡಿತವಾಗಿಯೂ ತರುತ್ತೇನೆ’ ಅಂದಿದ್ದೆ. ಆಗ ಅವರು, “ಸರಿ ಸ್ಕ್ರಿಪ್ಟ್ ಮಾಡಿಕೊಂಡು ಬಾರವ್ವ’ ಅಂದಿದ್ದರು. ಮುಕ್ಕಾಲು ಭಾಗ ಸ್ಕ್ರಿಪ್ಟ್ ರೆಡಿಯಾಗಿತ್ತು. ಆದರೆ, ಅವರನ್ನು ಅಷ್ಟೊತ್ತಿಗೆ ಕಳೆದುಕೊಂಡೆವು. ಆದರೆ, ಈಗ ಅವರ “ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ನಾನೇ ಮೂಕಜ್ಜಿಯಾಗಿದ್ದೇನೆ ಅನ್ನೋದು ಹೆಮ್ಮೆಯ ವಿಷಯ. ನಾನು ಓದಬೇಕಾದರೆ ಕಂಡ ಮೂಕಜ್ಜಿಯ ಪಾತ್ರ ಮಾಡುವಾಗ, ಕಷ್ಟ ಎನಿಸಿದ್ದು ನಿಜ. ಕಾರಂತರ ಸಾಹಿತ್ಯ ನಿಜಕ್ಕೂ ಕ್ಲಿಷ್ಟಕರ. ನಾನು ಆ ಪಾತ್ರ ಮಾಡುವಾಗ, ಕಾರಂತರು ಕಾಣಿಸುತ್ತಿದ್ದರೇ ಹೊರತು, ಮೂಕಜ್ಜಿ ಅಲ್ಲ. ಅಷ್ಟೊಂದು ಅದ್ಭುತವಾಗಿ ಅದನ್ನು ರೂಪಿಸಿದ್ದಾರೆ. ನಿರ್ದೇಶಕ ಪಿ.ಶೇಷಾದ್ರಿ ಅವರು ಬಂದು ನೀವು “ಮೂಕಜ್ಜಿ’ ಪಾತ್ರ ಮಾಡಬೇಕು ಅಂದಾಗ, ಮಾಡ್ತೀನಾ ಅನ್ನೋ ಪ್ರಶ್ನೆ ಇತ್ತು. ಆದರೆ, ಶೇಷಾದ್ರಿ, ಭಾಸ್ಕರ್‌ ಜೊತೆ ಇದ್ದರು. ಪಾತ್ರ ಕೂಡ ಸಲೀಸಾಗಿ ಬಂತು. ನಾನು ಕಾರಂತರಿಗೆ ಈ ಮೂಕಜ್ಜಿಯನ್ನು ಒಪ್ಪಿಸಿ ಪಾತ್ರ ಮಾಡಿದ್ದೇನೆ. ಇನ್ನುಳಿದದ್ದು ನೋಡುಗರಿಗೆ ಬಿಟ್ಟದ್ದು’ ಅಂದರು ಬಿ.ಜಯಶ್ರೀ.

ಚಿತ್ರದಲ್ಲಿ ಅರವಿಂದ್‌ ಕುಪಿಕರ್‌ ಸುಬ್ರರಾಯ ಪಾತ್ರ ಮಾಡಿದ್ದಾರೆ. ಆ ಬಗ್ಗೆ ಹೇಳಿಕೊಂಡು ಅವರು,”ನಿರ್ದೇಶಕರು ಇಲ್ಲೊಂದು ಪಾತ್ರವಿದೆ. ನೀವು ಮಾಡ್ತೀರಾ’ ಅಂದರು. ನಾನು ಅದಕ್ಕೆ, ಜಯಶ್ರೀ ಅವರಂತಹ ಕಲಾವಿದರು, ನಿಮ್ಮಂತಹ ನಿರ್ದೇಶಕರು, ಭಾಸ್ಕರ್‌ ಅವರಂತಹ ಹಿರಿಯ ಛಾಯಾಗ್ರಾಹಕರು ಅದರಲ್ಲೂ ಕಾರಂತರ ಕಾದಂಬರಿಯ ಸಿನಿಮಾದ ಅವಕಾಶ ಅಂದರೆ ಬಿಡೋದಾ’ ಅಂತ ಒಪ್ಪಿದೆ. ಓಕೆ ಅಂದವರೇ, ನಿರ್ದೇಶಕರು ರಾತ್ರಿ ಸುಮಾರು 10 ಗಂಟೆಗೆ ಒಂದು ಪೇಜ್‌ ಕುಂದಾಪುರ ಭಾಷೆ ಇರುವ ಡೈಲಾಗ್‌ ಕಳಿಸಿದರು. ಅದನ್ನು ಓದಿ ತಿಳಿದುಕೊಂಡು, ಕುಂದಾಪುರ ಗೆಳೆಯನೊಬ್ಬನಿಗೆ ಕಾಲ್‌ ಮಾಡಿ, ಭಾಷೆಯ ಹಿಡಿತದ ಬಗ್ಗೆ ಅರಿತು, ಅದೇ ದಿನ ಮಧ್ಯರಾತ್ರಿ 2.30 ರ ಹೊತ್ತಿಗೆ ಡೈಲಾಗ್‌ ಕಳಿಸಿದ್ದೆ. ನಿಜ ಹೇಳ್ಳೋದಾದರೆ, ಆ ಭಾಷೆ ಹಿಡಿದು ನಟಿಸೋದು ಕಷ್ಟವಾಗಿತ್ತು. ಬೆಂಗಳೂರಿಗೆ ಬಂದರೂ, ಅದೇ ಭಾಷೆ ಬಾಯಲ್ಲಿ ಬರುತ್ತಿತ್ತು. ಒಳ್ಳೆಯ ಅನುಭವ ಆಗಿದೆ’ ಅಂದರು ಅರವಿಂದ್‌.

ಹಿರಿಯ ರಂಗಭೂಮಿ ಕಲಾವಿದೆ ರಾಮೇಶ್ವರಿ ವರ್ಮ ಅವರಿಗಿಲ್ಲಿ “ಮೂಕಜ್ಜಿ’ಯ ಸ್ನೇಹಿತೆ ಪಾತ್ರ ಮಾಡಿದ್ದಾರಂತೆ. “ಇಲ್ಲಿ ಸ್ನೇಹದ ಬಗ್ಗೆ ಆಳವಾದ ಸಂದೇಶವಿದೆ. ಸಣ್ಣ ಪಾತ್ರವಾದರೂ ಅದಕ್ಕೊಂದು ವಿಶೇಷತೆಯೂ ಇದೆ. ಹಿಂದೆ ಶೇಷಾದ್ರಿ ಅವರ “ಬೆಟ್ಟದ ಜೀವ’ ಸಿನಿಮಾದಲ್ಲೂ ನಟಿಸಿದ್ದೆ. ಈಗ ಇಲ್ಲೂ ಮಾಡಿದ್ದೇನೆ’ ಇಂತಹ ಚಿತ್ರ ಎಲ್ಲರಿಗೂ ತಲುಪಬೇಕು’ ಎಂದರು ಅವರು.

ನಂದಿನಿ ವಿಠಲ್‌, ಸಿದ್ಧಾರ್ಥ್, ಸಂಕಲನಕಾರ ಕೆಂಪರಾಜ್‌ “ಮೂಕಜ್ಜಿ’ ಕುರಿತು ಮಾತನಾಡಿದರು. ಚಿತ್ರಕ್ಕೆ ಭಾಸ್ಕರ್‌ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತವಿದೆ.

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.