ಹಿರಿತೆರೆಗೆ ಪ್ರೇರಣೆ
Team Udayavani, Mar 23, 2017, 6:14 PM IST
ಧಾರಾವಾಹಿಯಿಂದ ಸಿನಿಮಾಕ್ಕೆ ಅನೇಕ ನಟಿಯರಿಗೆ ಪ್ರಮೋಶನ್ ಸಿಕ್ಕಿದೆ. ಈ ಮೂಲಕ ಮುಂದೊಂದು ದಿನ ಸಿನಿಮಾ ನಟಿಯಾಗಬೇಕೆಂಬ ಕನಸು ಕಂಡ ಅದೆಷ್ಟೋ ನಟಿಯರ ಆಸೆ ಕೂಡಾ ಈಡೇರಿದೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಪ್ರೇರಣಾ. ಯಾವ ಪ್ರೇರಣಾ ಎಂದರೆ ಈಗಷ್ಟೇ ಆರಂಭವಾಗಿರುವ “ಚೂರಿಕಟ್ಟೆ’ ಸಿನಿಮಾವನ್ನು ತೋರಿಸಬೇಕು. “ಚೂರಿಕಟ್ಟೆ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಪ್ರೇರಣಾ ಈಗ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಅಂದಹಾಗೆ, ಪ್ರೇರಣಾಗೆ ಸಿನಿಮಾರಂಗ ಹೊಸದು. ಆದರೆ, ಬಣ್ಣದ ಲೋಕ ಹೊಸದಲ್ಲ. ಈಗಾಗಲೇ ಪ್ರೇರಣಾ “ನಾ ನಿನ್ನ ಬಿಡಲಾರೆ’ ಹಾಗೂ “ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲಿ ತನಗೆ ಸಿಕ್ಕ ಪಾತ್ರಗಳ ಮೂಲಕವೇ ತನ್ನ ಪ್ರತಿಭಾ ಪ್ರದರ್ಶನ ಮಾಡಿದ ಪ್ರೇರಣಾಗೆ ಈಗ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ನಿರ್ದೇಶಕ ರಾಘು ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ ಬರೆದು ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಪ್ರೇರಣಾ. ಆಡಿಷನ್‌ನಲ್ಲಿ ಪಾಸಾದ ಪ್ರೇರಣಾ ಈಗ “ಚೂರಿಕಟ್ಟೆ’ಯಲ್ಲಿ ನಾಯಕಿ. ಚಿತ್ರದಲ್ಲಿ ಪ್ರೇರಣಾ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜು ಹುಡುಗಿ ಎಂದಾಕ್ಷಣ ಕೇವಲ ಮರಸುತ್ತುವ ಪಾತ್ರವೇ ಎಂದು ನೀವು ಕೇಳುವಂತಿಲ್ಲ. “ಚೂರಿಕಟ್ಟೆ’ಯಲ್ಲಿನ ಪ್ರೇರಣಾ ಪಾತ್ರ ಕೇವಲ ಮರ ಸುತ್ತುವುದಿಲ್ಲ. ಮರ ಉಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಇದು ಟಿಂಬರ್ ಮಾಫಿಯಾ ಕುರಿತಾದ ಸಿನಿಮಾ. “ಇಲ್ಲಿ ನಾಯಕಿಯ ಪಾತ್ರಕ್ಕೆ ಮಹತ್ವವಿದೆ. ತುಂಬಾ ಚೆನ್ನಾಗಿ ನಟಿಸುವಂತಹ, ಪಾತ್ರಕ್ಕೆ ನ್ಯಾಯ ಒದಗಿಸುವಂತಹ ನಾಯಕಿಯನ್ನು ಹುಡುಕುತ್ತಿದ್ದಾಗ ನಮಗೆ ಪ್ರೇರಣಾ ಸಿಕ್ಕಿದ್ದಾರೆ. ಚೆನ್ನಾಗಿ ನಟಿಸುತ್ತಿದ್ದಾರೆ. ಮುಂದೆ ಒಳ್ಳೆಯ ನಟಿಯಾಗುವ ಎಲ್ಲಾ ಲಕ್ಷಣ ಅವರಿಗಿದೆ’ ಎನ್ನುವುದು ನಿರ್ದೇಶಕ ರಾಘು ಶಿವಮೊಗ್ಗ ಮಾತು.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.